ಅಂತ್ಯಕಂಡ ‘ಲವ್ ಮಾಕ್ಟೇಲ್ 3’ ವಿವಾದ; ಕ್ಷಮೆ ಕೇಳಿ ಪ್ರಕರಣ ಸುಖಾಂತ್ಯ

ಅಂತ್ಯಕಂಡ ‘ಲವ್ ಮಾಕ್ಟೇಲ್ 3’ ವಿವಾದ; ಕ್ಷಮೆ ಕೇಳಿ ಪ್ರಕರಣ ಸುಖಾಂತ್ಯ

‘ಲವ್ ಮಾಕ್ಟೇಲ್ 3’ (Love Mocktail 3) ಚಿತ್ರದ ಕಥೆ ನಮ್ಮದು ಎಂದು ಗುರು ದೇಶಪಾಂಡೆ ಆರೋಪ ಮಾಡಿದ್ದರು. ಗುರು ದೇಶಪಾಂಡೆ ಆರೋಪ ಸುಳ್ಳು ಎಂದು ಹೇಳಿದ್ದ ಕೃಷ್ಣ, ಅವರ ಮೇಲೆ ಮಾನನಷ್ಟ ಮೊಕದ್ದಮೆ ಹೂಡೋದಾಗಿಯೂ ಎಚ್ಚರಿಸಿದ್ದು. ಅಲ್ಲದೆ ಸುದ್ದಿಗೋಷ್ಠಿ ವೇಳೆ ಗುರು ಅವರ ವೈಯಕ್ತಿಕ ವಿಷಯಗಳನ್ನು ಎಳೆದು ತಂದಿದ್ದರು. ಈಗ ಈ ವಿವಾದ ಸುಖಾಂತ್ಯವಾಗಿದೆ. ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿಯಲ್ಲಿ ನಡೆದ ಸಭಯೆಲ್ಲಿ ಪ್ರಕರಣ ಇತ್ಯರ್ಥವಾಗಿದೆ.

‘ಲವ್ ಮಾಕ್ಟೇಲ್ 3’ ಸಿನಿಮಾದ ದ್ವಿತೀಯಾರ್ಧದಲ್ಲಿ ಕೋರ್ಟ್ ರೂಂ ವಿಷಯ ಇದೆ. ಈ ಬಗ್ಗೆ ರಾಘವೇಂದ್ರ ನಾಯ್ಕ್ ಹಾಗೂ ಗುರು ದೇಶಪಾಂಡೆ ಅಪಸ್ವರ ತೆಗೆದಿದ್ದರು. ‘ನಾವು ಕೃಷ್ಣಗೆ ಕಥೆ ಹೇಳಿದ್ದೆವು. ಆದರೆ, ಅವರು ಕಥೆ ಒಪ್ಪಿಕೊಳ್ಳಲಿಲ್ಲ. ‘ಲವ್ ಮಾಕ್ಟೇಲ್ 3’ ಸಿನಿಮಾ ನೋಡಿದ ಬಳಿಕ ಕಥೆ ನಮ್ಮದು ಎಂದು ಅನಿಸಿತು’ ಎಂದು ಕೃಷ್ಣ ಹೇಳಿದ್ದರು. ಇಬ್ಬರೂ ವೈಯಕ್ತಿಕ ವಿಷಯಗಳನ್ನು ಇಟ್ಟುಕೊಂಡು ಕಿತ್ತಾಡಿಕೊಂಡಿದ್ದರು. ಆರೋಪ ಪ್ರತ್ಯಾರೋಪ ಬಂತು.

ಮಾರ್ಚ್ 27ರಂದು ಜಯಮಾಲಾ ಅವರ ಅಧ್ಯಕ್ಷತೆಯಲ್ಲಿ ವಾಣಿಜ್ಯ ಮಂಡಳಿಯಲ್ಲಿ ಸಭೆ ನಡೆದಿದೆ. ಈ ಸಂದರ್ಭದಲ್ಲಿ ಕೃಷ್ಣ, ಗುರು ದೇಶಪಾಂಡೆ, ರಾಘವೇಂದ್ರ ನಾಯ್ಕ್ ಇನ್ನಿತರು ಹಾಜರಿದ್ದರು. ಸಭೆಯಲ್ಲಿ ಎಲ್ಲರೂ ತಮ್ಮ ತಮ್ಮ ವಾದ ಮುಂದಿಟ್ಟಿದ್ದಾರೆ. ವಾದದ ಬಳಿಕ ಪ್ರಕರಣಕ್ಕೆ ಸುಖಾಂತ್ಯ ನೀಡಲಾಗಿದೆ.

ಸುದ್ದಿಗೋಷ್ಠಿ ವೇಳೆ ಕೃಷ್ಣ ಅವರು ಗುರು ದೇಶಪಾಂಡೆ ಅವರ ವೈಯಕ್ತಿಕ ವಿಷಯಗಳ ಬಗ್ಗೆ ಮಾತನಾಡಿದ್ದರು. ಇದಕ್ಕೆ ಕೃಷ್ಣ ಅವರು ಸಭೆಯಲ್ಲಿ ವೈಯಕ್ತಿಕವಾಗಿ ಕ್ಷಮೆ ಕೇಳಿದರು. ಇಬ್ಬರೂ ಕಥೆಯನ್ನು ಒಂದೇ ಘಟನೆಯಿಂದ ಸ್ಫೂರ್ತಿ ಪಡೆದರೂ, ಇಬ್ಬರ ಚಿತ್ರಕಥೆಯೂ ಬೇರೆ ಬೇರೆ ಎಂಬ ತೀರ್ಮಾನಕ್ಕೆ ಬರಲಾಗಿದೆ. ಈ ಮೂಲಕ ಪ್ರಕರಣವನ್ನು ಸುಖಾಂತ್ಯ ಮಾಡಲಾಗಿದೆ.

ಇದನ್ನೂ ಓದಿ: ‘ಲವ್ ಮಾಕ್ಟೇಲ್ 3’ ಬಿಸ್ನೆಸ್ ಹಾಳು ಮಾಡಲು ನಾವು ಬಂದಿಲ್ಲ: ಗುರು ದೇಶಪಾಂಡೆ

ರಾಘವೇಂದ್ರ ನಾಯ್ಕ್ ಅವರು ‘ಕೂಡಲಸಂಗಮ’ ಹೆಸರಿನ ಸಿನಿಮಾ ಮಾಡಲು ನಿರ್ಧರಿಸಿದ್ದರು. ಈ ಚಿತ್ರದ ಕಥೆ ‘ಲವ್ ಮಾಕ್ಟೇಲ್ 3’ಗೆ ಹೋಲಿಕೆ ಆಗುತ್ತದೆ ಎಂಬುದು ಇವರ ಆರೋಪ ಆಗಿತ್ತು. ಈಗ ವಿವಾದ ಬಗೆಹರಿದಿದ್ದು, ತಾವು ರಚಿಸಿದ ಕಥೆ ಇಟ್ಟುಕೊಂಡು ರಾಘವೇಂದ್ರ ನಾಯ್ಕ್ ಸಿನಿಮಾ ಮಾಡುತ್ತಾರೆಯೇ ಎಂಬ ಪ್ರಶ್ನೆ ಮೂಡಿದೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

Source link

Leave a Reply

Your email address will not be published. Required fields are marked *