ಸಾಮಾನ್ಯವಾಗಿ ಬಿಗ್ ಬಜೆಟ್ ಸಿನಿಮಾಗಳನ್ನು ಕೈಗೆತ್ತಿಕೊಂಡಾಗ ಅದನ್ನು ಅಂದುಕೊಂಡ ದಿನಾಂಕದಂದು ತೆರೆಗೆ ತರೋದು ಅಸಾಧ್ಯ ಎಂಬುದು ಎಲ್ಲರಿಗೂ ಗೊತ್ತಿರುವ ವಿಷಯ. ಆದರೂ ಕೆಲವರು ಆ ಬಗ್ಗೆ ಸಾಕಷ್ಟು ಪ್ರಯತ್ನ ಮಾಡುತ್ತಾರೆ. ಆದರೆ, ಇದು ಅಷ್ಟು ಸುಲಭ ಅಲ್ಲ. ಈಗ ಜೂನಿಯರ್ ಎನ್ಟಿಆರ್ (Jr NTR) ಸಿನಿಮಾ ವಿಷಯದಲ್ಲೂ ಹಾಗೆಯೇ ಆಗಿದೆ. ಸಿನಿಮಾ ಅಂದುಕೊಂಡ ದಿನಾಂಕದಂದು ತೆರೆಗೆ ತರಲು ಸಾಧ್ಯವಾಗುತ್ತಿಲ್ಲ ಎನ್ನಲಾಗುತ್ತಿದೆ. ಹೀಗಾಗಿ, ದೀಪಾವಳಿ ಅಥವಾ ಕ್ರಿಸ್ಮಸ್ ಸಂದರ್ಭದಲ್ಲಿ ಚಿತ್ರವನ್ನು ತೆರೆಗೆ ತರುವ ಬಗ್ಗೆ ತಂಡ ಪ್ಲ್ಯಾನ್ ಮಾಡಿದೆ.
ಜೂನಿಯರ್ ಎನ್ಟಿಆರ್ ಹಾಗೂ ಪ್ರಶಾಂತ್ ನೀಲ್ ಒಟ್ಟಾಗಿ ಸಿನಿಮಾ ಮಾಡುತ್ತಿದ್ದಾರೆ. ಈ ಚಿತ್ರ ಜೂನ್ ತಿಂಗಳಲ್ಲಿ ತೆರೆಗೆ ಬರಲಿದೆ ಎಂದು ಈ ಮೊದಲು ಘೋಷಣೆ ಮಾಡಲಾಗಿತ್ತು. ಆದರೆ, ಇನ್ನೂ ಸಿನಿಮಾದ ಶೂಟ್ ಪೂರ್ಣಗೊಂಡಿಲ್ಲ. ಸದ್ಯ ತಂಡ ಜೋರ್ಡನ್ ಅಲ್ಲಿದ್ದು, ಕೊನೆಯ ಹಂತದ ಶೂಟ್ನಲ್ಲಿ ತೊಡಗಿಕೊಂಡಿದೆ. ಆ ಬಳಿಕ ತಂಡ ಹೈದರಾಬಾದ್ಗೆ ಮರಳಲಿದೆ.
ಜೋರ್ಡನ್ ಅಲ್ಲಿ ನಡೆಯೋದು ಕೊನೆಯ ಹಂತದ ಔಟ್ಡೋರ್ ಶೂಟ್. ನಂತರ ರಾಮೋಜಿ ಫಿಲ್ಮ್ ಸಿಟಿಯಲ್ಲಿ ಇಂಡೋರ್ ಶೂಟ್ ನಡೆಯಲಿದೆಯಂತೆ. ಅದಕ್ಕೂ ಸ್ವಲ್ಪ ಸಮಯ ಹಿಡಿಯಲಿದೆ. ಇದೆಲ್ಲ ಸೇರಿದರೆ ಇನ್ನೂ ಎರಡು ತಿಂಗಳು ಶೂಟಿಂಗ್ಗೆ ಸಮಯ ವ್ಯರ್ಥ ಆಗಲಿದೆ. ಹೀಗಾಗಿ, ಜೂನ್ ಸಮಯಕ್ಕೆ ಸಿನಿಮಾ ರಿಲೀಸ್ ಆಗೋದು ಅನುಮಾನ ಎನ್ನಲಾಗುತ್ತಿದೆ.
ಈ ಮೊದಲು ಸಿನಿಮಾ ಬಗ್ಗೆ ಸಾಕಷ್ಟು ನೆಗೆಟಿವ್ ಮಾತುಗಳು ಕೇಳಿ ಬಂದಿದ್ದವು. ಸಿನಿಮಾ ದೃಶ್ಯಗಳ ಬಗ್ಗೆ ಜೂನಿಯರ್ ಎನ್ಟಿಆರ್ ಅವರಿಗೆ ಖುಷಿ ಇಲ್ಲ ಎಂದು ಹೇಳಲಾಗಿತ್ತು. ಆದರೆ, ಅದು ಸುಳ್ಳಾಗಿದೆ. ಸಿನಿಮಾ ವಿಳಂಬವಾದರೂ ಟ್ರ್ಯಾಕ್ನಲ್ಲಿ ಇದೆಯಲ್ಲ ಎಂಬ ಖುಷಿಯಲ್ಲಿ ಅಭಿಮಾನಿಗಳು ಇದ್ದಾರೆ.
ಇದನ್ನೂ ಓದಿ: ಜೂ ಎನ್ಟಿಆರ್ ಸಿನಿಮಾಕ್ಕೆ ಬಾಲಿವುಡ್ ನಟನ ಕರೆತಂದ ಪ್ರಶಾಂತ್ ನೀಲ್: ಯಾರದು?
ಪ್ರಶಾಂತ್ ನೀಲ್ ನಿರ್ದೇಶನದ ಕೊನೆಯ ಸಿನಿಮಾ ‘ಸಲಾರ್’ ಸಾಧಾರಣ ಎನಿಸಿಕೊಂಡಿತು. ಈ ಚಿತ್ರದ ಮೂಲಕ ಅವರಿಗೆ ಗೆಲ್ಲುವ ಅನಿವಾರ್ಯತೆ ಇದೆ. ಅವರು ಡಾರ್ಕ್ ಸ್ಟೈಲ್ ಅಲ್ಲಿ ಸಿನಿಮಾ ಮಾಡೋ ಬಗ್ಗೆ ಕೆಲವರಿಗೆ ಅಸಮಾಧಾನ ಇದೆ.
ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ.
Published On – 7:32 am, Wed, 18 February 26