
‘ಧುರಂಧರ್ 2’ ಚಿತ್ರವನ್ನು (Dhuranadhar 2) ವೀಕ್ಷಿಸಿ ಎಲ್ಲರೂ ತಮ್ಮ ವಿಮರ್ಶೆ ತಿಳಿಸುತ್ತಿದ್ದಾರೆ. ಆದಿತ್ಯ ಧಾರ್ ಅವರ ನಿರ್ದೇಶನ ಹಾಗೂ ರಣವೀರ್ ಸಿಂಗ್ ಅವರ ನಟನೆಯನ್ನು ಹೊಗಳುತ್ತಿದ್ದಾರೆ. ಈಗ ಖ್ಯಾತ ಕ್ರಿಕೆಟರ್ ವಿರಾಟ್ ಕೊಹ್ಲಿ ಅವರು ‘ಧುರಂಧರ್ 2’ ಸಿನಿಮಾ ವೀಕ್ಷಿಸಿದ್ದಾರೆ. ಅವರು ಈ ಚಿತ್ರವನ್ನು ಹಾಡಿಹೊಗಳಿದ್ದಾರೆ. ಇತ್ತೀಚಿಗಿನ ವರ್ಷಗಳಲ್ಲಿ ನೋಡಿದ ಅದ್ಭುತ ಸಿನಿಮಾ ಇದು ಎಂದು ಮೆಚ್ಚಿಕೊಂಡಿದ್ದಾರೆ.
ಇನ್ಸ್ಟಾಗ್ರಾಮ್ ಸ್ಟೇಟಸ್ ಅಲ್ಲಿ ಕೊಹ್ಲಿ ಅವರು ಸಿನಿಮಾ ಬಗ್ಗೆ ವಿಮರ್ಶೆ ತಿಳಿಸಿದ್ದಾರೆ. ‘ನಾನು ಧುರಂಧರ್ 2’ ಸಿನಿಮಾ ವೀಕ್ಷಿಸಿದೆ. ಭಾರತದ ಸಿನಿಮಾಗಳಲ್ಲಿ ಈ ರೀತಿಯ ಅದ್ಭುತ ಅನುಭವವನ್ನು ಎಂದಿಗೂ ಪಡೆದಿಲ್ಲ.ಈ ಸಿನಿಮಾ ನನ್ನಲ್ಲಿರುವ ಎಲ್ಲಾ ರೀತಿಯ ಭಾವನೆಗಳನ್ನು ಹೊರತಂದಿತು’ ಎಂದು ಕೊಹ್ಲಿ ಹೇಳಿದ್ದಾರೆ.
ಇದನ್ನೂ ಓದಿ: ‘ಎಲ್ಲೂ ಇಲ್ಲ ಅಂದ್ರೆ ಕೊನೆಗೆ ಸ್ಯಾಂಡಲ್ವುಡ್ನಲ್ಲಾದರೂ ಕೆಲಸ ಮಾಡಬಹುದು’; ವಿರಾಟ್ ಕೊಹ್ಲಿ
‘4 ಗಂಟೆಗಳ ಕಾಲ ನಾನು ಎಲ್ಲಿಯೂ ಬೇಸರ ಮಾಡಿಕೊಂಡಿಲ್ಲ. ಆದಿತ್ಯ ಧಾರ್ ಅವರೇ ನಿಮ್ಮ ಪ್ರತಿಭೆ ಮತ್ತು ದೃಢನಿಶ್ಚಯವು ನೀವು ಸೃಷ್ಟಿಸಿದ್ದರಲ್ಲಿ ಪ್ರತಿಫಲಿಸುತ್ತದೆ. ನಿಮಗೆ ಹ್ಯಾಟ್ಸ್ ಆಫ್. ಎಲ್ಲಾ ನಟರು ತಮ್ಮ ಪಾತ್ರಗಳಲ್ಲಿ ಅದ್ಭುತವಾಗಿ ನಟಿಸಿದ್ದಾರೆ. ರಣವೀರ್ ಸಿಂಗ್ ಈ ಸಿನಿಮಾದಲ್ಲಿ ಬೇರೆ ಹಂತ ತಲುಪಿದ್ದೀರಿ. ನಿಮ್ಮ ಅಭಿನಯ ಅದ್ಭುತವಾಗಿತ್ತು. ಖಂಡಿತವಾಗಿಯೂ ವಾವ್’ ಎಂದು ಅವರು ಬರೆದುಕೊಂಡಿದ್ದಾರೆ.
VIRAT KOHLI ON DHRUNDHAR MOVIE
![]()
pic.twitter.com/06pdSs7wYI
— Johns. (@CricCrazyJohns) April 6, 2026
ವಿರಾಟ್ ಕೊಹ್ಲಿ ಅವರಿಗೆ ಇನ್ಸ್ಟಾಗ್ರಾಮ್ ಅಲ್ಲಿ 27 ಕೋಟಿಗೂ ಹೆಚ್ಚು ಹಿಂಬಾಲಕರು ಇದ್ದಾರೆ. ಅವರ ಸಿನಿಮಾ ವಿಮರ್ಶೆ ನೋಡಿ ಒಂದಷ್ಟು ಮಂದಿ ಸಿನಿಮಾ ನೋಡಲು ತೆರಳಬಹುದು. ಇದರಿಂದ ಸಿನಿಮಾದ ಗಳಿಕೆ ಹೆಚ್ಚಲಿದೆ.
‘ಧುರಂಧರ್ 2’ ಸಿನಿಮಾ ಭಾರತದಲ್ಲೇ ಸಾವಿರ ಕೋಟಿ ರೂಪಾಯಿ ಕಲೆಕ್ಷನ್ ಮಾಡಿದೆ. ಹಿಂದಿ ಸಿನಿಮಾ ಒಂದು ಇಷ್ಟು ದೊಡ್ಡ ಮಟ್ಟದಲ್ಲಿ ಗಳಿಕೆ ಮಾಡಿದ್ದು ಇದೇ ಮೊದಲು ಅನ್ನೋದು ವಿಶೇಷ.
ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ.