Headlines

“ಅಪ್ಪ ನಾನು ಮದುವೆಯಾಗಿದ್ದೇನೆ, ನನ್ನನ್ನು ಬಿಟ್ಟುಬಿಡಿ”: ಮಗಳ ಕಣ್ಣೀರಿಗೂ ಬೆಲೆ ಕೊಡದೆ ಎಳೆದೊಯ್ದ ತಂದೆ – Kannada News | Police Inaction: Parents Kidnap Registered Wife in Hangal Love Marriage Case

ಹಾನಗಲ್ ಮಾ.4: ಹೆಚ್ಚಿನ ಹೆತ್ತವರು ಮಕ್ಕಳ ಪ್ರೀತಿ ಒಪ್ಪುವುದಿಲ್ಲ. ಜಾತಿ ಪ್ರೇಮ, ಸಮಾಜ ಏನು ಹೇಳುತ್ತೋ ಎಂಬೆಲ್ಲ ಭಯ ಇರುತ್ತದೆ. ಅದರಲ್ಲೂ ಸಂಬಂಧಿಕ ಕಾಟ ಯಾರಿಗೂ ಬೇಡ. ಪ್ರೀತಿಸಿ ಓಡಿ ಹೋಗಿ ಮದುವೆಯಾದರೆ ಎರಡು ಕುಟುಂಬಗಳು ಸಂಬಂಧ ಕಳೆದುಕೊಳ್ಳಬೇಕು ಎಂಬ ಹೆದರಿಕೆ. ಇದರ ನಡುವೆ ಧೈರ್ಯ ಮಾಡಿ ಮದುವೆಯಾದರೆ ಈ ಪರಿಸ್ಥಿತಿ ನೋಡಿ. ಪ್ರೀತಿಸಿ ಅಧಿಕೃತವಾಗಿ ರಿಜಿಸ್ಟರ್ ಮ್ಯಾರೇಜ್ ಯಾಗಿದ್ದ ನವಜೋಡಿಯನ್ನು ಯುವತಿಯ ಪೋಷಕರು ಮತ್ತು ಸಂಬಂಧಿಕರು ಸಿನಿಮೀಯ ರೀತಿಯಲ್ಲಿ ದಾಳಿ ನಡೆಸಿ ಬೇರ್ಪಡಿಸಿರುವ ಘಟನೆ ಹಾನಗಲ್ ತಾಲೂಕಿನ ತಿಳವಳ್ಳಿ ಗ್ರಾಮದಲ್ಲಿ ನಡೆದಿದೆ. “ನಾನು ಪ್ರೀತಿಸಿ ಮದುವೆಯಾಗಿದ್ದೇನೆ, ನನಗೆ ನನ್ನ ಗಂಡ ಬೇಕು” ಎಂದು ಯುವತಿ ಗೋಳಾಡಿದರೂ ಕಿವಿಗೊಡದ ಪೋಷಕರು ಆಕೆಯನ್ನು ಹೊಡೆದು ಎಳೆದೊಯ್ದಿದ್ದಾರೆ.

ಮಣಿಕಂಠ ಮತ್ತು ಸೃಷ್ಟಿ ಎಂಬುವವರು ಕಳೆದ ಕೆಲವು ಕಾಲದಿಂದ ಪ್ರೀತಿಸುತ್ತಿದ್ದರು. ಪೋಷಕರ ವಿರೋಧದ ನಡುವೆಯೂ ಈ ಜೋಡಿ ಇತ್ತೀಚೆಗೆ ರಿಜಿಸ್ಟರ್ ಮ್ಯಾರೇಜ್ ಮಾಡಿಕೊಂಡಿದ್ದರು. ಮದುವೆಯಾದ ಬಳಿಕ ಸೃಷ್ಟಿ ತನ್ನ ಪತಿ ಮಣಿಕಂಠನ ಮನೆಯಲ್ಲಿದ್ದರು. ವಿಷಯ ತಿಳಿಯುತ್ತಿದ್ದಂತೆಯೇ ಸೃಷ್ಟಿಯ ತಂದೆ ಮತ್ತು ಸಂಬಂಧಿಕರು ಮಣಿಕಂಠನ ಮನೆಗೆ ನುಗ್ಗಿದ್ದಾರೆ. ಅಲ್ಲಿ ಸೃಷ್ಟಿಯನ್ನು ಬಲವಂತವಾಗಿ ಹೊಡೆದು, ಎಳೆದಾಡಿ ಕಾರಿಗೆ ಹಾಕಿಕೊಂಡು ಹೋಗಿದ್ದಾರೆ.

ಇದನ್ನೂ ಓದಿ: ಮೌಲ್ವಿ ಮೇಲೆ ಹಿಂದೂ ಯುವಕರ ಹಲ್ಲೆ: ಸಾವಿರಾರು ಮುಸ್ಲಿಮರಿಂದ ಬೃಹತ್ ಪ್ರತಿಭಟನೆ, ಪೊಲೀಸ್ ಠಾಣೆಗೆ ಮುತ್ತಿಗೆ ಯತ್ನ

ಇಲ್ಲಿದೆ ನೋಡಿ ವಿಡಿಯೋ:

“ಅಪ್ಪಾ ನಾನು ಮದುವೆಯಾಗಿದ್ದೇನೆ, ನನ್ನನ್ನು ಬಿಟ್ಟುಬಿಡಿ” ಎಂದು ಸೃಷ್ಟಿ ಕಣ್ಣೀರಿಟ್ಟು ಬೇಡಿಕೊಂಡ ದೃಶ್ಯಗಳು ಮೊಬೈಲ್‌ನಲ್ಲಿ ಸೆರೆಯಾಗಿದ್ದು, ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿವೆ. ಈ ಘಟನೆ ಕುರಿತು ದೂರು ನೀಡಲು ಹೋದರೆ ಆಡೂರು ಪೊಲೀಸ್ ಠಾಣೆಯ ಅಧಿಕಾರಿಗಳು ದೂರು ಸ್ವೀಕರಿಸಲು ನಿರಾಕರಿಸಿದ್ದಾರೆ ಎಂದು ಮಣಿಕಂಠ ಆರೋಪಿಸಿದ್ದಾರೆ. ಕಾನೂನುಬದ್ಧವಾಗಿ ಮದುವೆಯಾಗಿದ್ದರೂ ರಕ್ಷಣೆ ನೀಡಬೇಕಾದ ಪೊಲೀಸರೇ ನಿರ್ಲಕ್ಷ್ಯ ವಹಿಸಿರುವುದು ಸಾರ್ವಜನಿಕರ ಆಕ್ರೋಶಕ್ಕೆ ಕಾರಣವಾಗಿದೆ.

ವರದಿ: ಅಣ್ಣಪ್ಪ ಬಾರ್ಕಿ

ರಾಜ್ಯದ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Published On – 8:56 pm, Wed, 4 March 26

Source link

Leave a Reply

Your email address will not be published. Required fields are marked *