Headlines

ಅಮೆರಿಕದ ಬೇಹುಗಾರಿಕೆ ನೀಡಿದ ಮಾಹಿತಿಯಿಂದ ಬೆಚ್ಚಿಬಿದ್ದಿದ್ದರು ಆ್ಯಪಲ್ ಸಿಇಒ ಟಿಮ್ ಕುಕ್ – Kannada News | Apple CEO Tim Cook was shocked when CIA alerted on possible invasion of Taiwan by China

ವಾಷಿಂಗ್ಟನ್, ಫೆಬ್ರುವರಿ 25: ಸುಮಾರು 2 ವರ್ಷದ ಆ್ಯಪಲ್ ಕಂಪನಿ ಅಮೆರಿಕದಲ್ಲಿ ಚಿಪ್ ತಯಾರಿಕೆಗೆ 100 ಬಿಲಿಯನ್ ಡಾಲರ್ ಹೂಡಿಕೆ ಮಾಡುವುದಾಗಿ ಘೋಷಿಸಿತ್ತು. 100 ಬಿಲಿಯನ್ ಡಾಲರ್ ಎಂದರೆ ಸುಮಾರು 9 ಲಕ್ಷ ಕೋಟಿ ರೂ. ಆ್ಯಪಲ್ ಕಂಪನಿಯ ಈ ನಿರ್ಧಾರ ಸಾಧಾರಣದ್ದಾಗಿರಲಿಲ್ಲ. ಅಮೆರಿಕದಲ್ಲಿ ಮ್ಯಾನುಫ್ಯಾಕ್ಚರಿಂಗ್ ಅಂಟೇ ಬೇಡ ಎಂದು ಸುಮ್ಮನ್ನಿದ್ದ ಆ್ಯಪಲ್ ದಿಢೀರನೇ ನಿರ್ಧಾರ ಬದಲಿಸಿದ್ದ ಆಶ್ಚರ್ಯಪಡಬೇಕಾದ ಸಂಗತಿ. ಡೊನಾಲ್ಡ್ ಟ್ರಂಪ್ ಒತ್ತಡಕ್ಕೆ ಟಿಮ್ ಕುಕ್ ಒಳಗಾಗಿರಬಹುದು ಎನ್ನುವುದಕ್ಕೆ ಆಗಿನ್ನೂ ಟ್ರಂಪ್ ಅಧ್ಯಕ್ಷರಾಗಿರಲಿಲ್ಲ. ಹಾಗಿದ್ದರೆ ಆ್ಯಪಲ್ ಕಂಪನಿಯ ಆ ನಿರ್ಧಾರಕ್ಕೆ ಏನು ಕಾರಣ? ವರದಿಗಳ ಪ್ರಕಾರ, ರಹಸ್ಯ ಸಭೆಯೊಂದರಲ್ಲಿ ಟಿಮ್ ಕುಕ್​ಗೆ ಸಿಐಎ ಹೇಳಿದ ಸಂಗತಿಯೊಂದು ಇದಕ್ಕೆ ಕಾರಣ ಎನ್ನಲಾಗಿದೆ.

ಆ್ಯಪಲ್ ಕಂಪನಿ ಅಮೆರಿಕದಲ್ಲಿ ಚಿಪ್ ಮ್ಯಾನುಫ್ಯಾಕ್ಚರಿಂಗ್ ಮಾಡುವುದಾಗಿ ಘೋಷಣೆ ಮಾಡುವ ಸ್ವಲ್ಪ ಮೊದಲು, 2023ರ ಮಧ್ಯಭಾಗದಲ್ಲಿ ಕೆಲ ಪ್ರಮುಖ ಟೆಕ್ ಕಂಪನಿಗಳ ಸಿಇಒಗಳ ಜೊತೆ ಅಮೆರಿಕದ ಗುಪ್ತಚರ ಸಂಸ್ಥೆಯಾದ ಸಿಐಎ ರಹಸ್ಯ ಸಭೆ ನಡೆಸಿತ್ತು. ಆ್ಯಪಲ್ ಸಿಇಒ ಟಿಮ್ ಕುಕ್, ಎನ್​ವಿಡಿಯಾದ ಜೆನ್ಸೆನ್ ಹುವಾಂಗ್, ಎಎಂಡಿಯ ಲಿಸಾ ಸು ಅವರು ಈ ಸಭೆಯಲ್ಲಿ ಇದ್ದರು. ಕ್ವಾಲ್​ಕಾಮ್​ನ ಕ್ರಿಸ್ಟಿಯಾನೋ ಅಮೋನ್ ಅವರು ವಿಡಿಯೋ ಕಾನ್ಫರೆನ್ಸ್ ಮೂಲಕ ಸಭೆಯಲ್ಲಿ ಪಾಲ್ಗೊಂಡಿದ್ದರು. ಚೀನಾ 2027ರಲ್ಲಿ ತೈವಾನ್ ಅನ್ನು ಆಕ್ರಮಿಸಿಕೊಳ್ಳುವ ಸಾಧ್ಯತೆ ಇದೆ ಎಂಬ ಮಾಹಿತಿಯನ್ನು ಸಿಐಎ ಅಧಿಕಾರಿಗಳು ಆ ಸಭೆಯಲ್ಲಿ ಬಿಚ್ಚಿಟ್ಟಿದ್ದರು.

ಇದನ್ನೂ ಓದಿ: ‘ನೆಹರೂ, ಇಂದಿರಾ ಕಾಲದಲ್ಲಿ ವಿದೇಶೀ ಗುಪ್ತಚರರ ಕೈಲಿತ್ತು ಭಾರತ’: ಕಾಂಗ್ರೆಸ್​ಗೆ ಬಿಜೆಪಿ ತಿರುಗೇಟು; ಸುಧಾಂಶು ತ್ರಿವೇದಿ ಸರಣಿ ಟ್ವೀಟ್

ಗುಪ್ತಚರರು ನೀಡಿದ ಈ ಮಾಹಿತಿಯು ಅಮೆರಿಕದ ಟೆಕ್ ಕಂಪನಿಗಳ ಜಂಘಾಬಲ ಉಡುಗುವಂತೆ ಮಾಡಿತ್ತು. ವಿಶ್ವದ ಅತಿಮೌಲ್ಯದ ಮತ್ತು ಅತಿಶಕ್ತಿಶಾಲಿ ಚಿಪ್​ಗಳಲ್ಲಿ ಮ್ಯಾನುಫ್ಯಾಕ್ಚರಿಂಗ್ ಶೇ. 90ರಷ್ಟು ನಡೆಯುವುದು ತೈವಾನ್​ನಲ್ಲೇ. ಅದೇನಾದರೂ ಚೀನಾ ವಶವಾಗಿ ಹೋದರೆ ಚಿಪ್ ಸಪ್ಲೈ ಚೈನ್ ಬಂದ್ ಆದಂತೆಯೇ. ವಿಶ್ವದ ಟೆಕ್ ಸಾಮ್ರಾಜ್ಯದ ಅಧಿಪತಿಯಾಗಿ ಮುಂದುವರಿಯಲು ಅಮೆರಿಕಕ್ಕೆ ಸಾಧ್ಯವಾಗದೇ ಹೋಗುವ ಭಯ.

ಆ್ಯಪಲ್ ಸಿಇಒ ಟಿಮ್ ಕುಕ್ ಅಕ್ಷರಶಃ ಕಂಗಾಲಾಗಿದ್ದರು. ತೈವಾನ್​ನ ಟಿಎಸ್​ಎಂಸಿ (TSMC) ಕಂಪನಿಯು ಆ್ಯಪಲ್​ನ ಎಲ್ಲಾ ಉತ್ಪನ್ನಗಳಿಗೆ ಬೇಕಾದ ವಿಶೇಷ ವಿನ್ಯಾಸದ ಚಿಪ್​ಗಳನ್ನು ತಯಾರಿಸುತ್ತದೆ. ತೈವಾನ್ ಅನ್ನು ಚೀನಾ ಆಕ್ರಮಿಸಿಕೊಂಡರೆ ಆ್ಯಪಲ್ ಕಂಪನಿಯ ಬ್ಯುಸಿನೆಸ್ ಎಲ್ಲವೂ ಚೀನಾ ಮರ್ಜಿಗೆ ಬೀಳಬೇಕಾಗುತ್ತದೆ. ಹೀಗಾಗಿ, ಆ್ಯಪಲ್ ಕಂಪನಿ ಅಮೆರಿಕದೊಳಗೆಯೇ ಚಿಪ್ ತಯಾರಿಕೆಯ ಘಟಕಗಳನ್ನು ಸ್ಥಾಪಿಸಲು ಬಂಡವಾಳ ಹಾಕುತ್ತಿದೆ.

ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

Source link

Leave a Reply

Your email address will not be published. Required fields are marked *