
ಟೆಹ್ರಾನ್, ಏಪ್ರಿಲ್ : ಭಾರತದಲ್ಲಿನ ಇರಾನ್ ರಾಯಭಾರಿ ಮೊಹಮ್ಮದ್ ಫಥಾಲಿ ಇಂದು ಯುನೈಟೆಡ್ ಸ್ಟೇಟ್ಸ್ ಮತ್ತು ಇಸ್ರೇಲ್ನ ನಡವಳಿಕೆ ಮತ್ತು ಹೇಳಿಕೆ ಎರಡರಲ್ಲೂ ಆಧುನಿಕ ಅನಾಗರಿಕತೆ ಗೋಚರಿಸುತ್ತಿದೆ ಎಂದು ಟೀಕಿಸಿದ್ದಾರೆ. ಎಎನ್ಐಗೆ ನೀಡಿದ ಲಿಖಿತ ಸಂದರ್ಶನದಲ್ಲಿ ಈ ಬಗ್ಗೆ ಪ್ರಸ್ತಾಪಿಸಿರುವ ಅವರು, ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಇರಾನ್ ಮೇಲೆ ಬಾಂಬ್ ಹಾಕುವುದಾಗಿ ನೀಡಿದ ಬೆದರಿಕೆ ಮತ್ತು ಟೆಹ್ರಾನ್ ಬಳಿಯ ಪ್ರಮುಖ ಸೇತುವೆಯನ್ನು ನಾಶಪಡಿಸಲಾಗಿದೆ ಎಂಬ ಅವರ ಇತ್ತೀಚಿನ ಹೇಳಿಕೆ ಬಗ್ಗೆ ಮಾತನಾಡಿದ್ದಾರೆ.
“ನಮ್ಮದು ಸಾವಿರಾರು ವರ್ಷಗಳ ಹಿಂದಿನ ನಾಗರಿಕತೆಯನ್ನು ಹೊಂದಿರುವ ರಾಷ್ಟ್ರ. ನಾವು ಎಂದಿಗೂ “ಶಿಲಾಯುಗಕ್ಕೆ” ಹಿಂತಿರುಗುವುದಿಲ್ಲ. ಇಂದು ನಾವು ಟ್ರಂಪ್ ಮತ್ತು ಬೆಂಜಮಿನ್ ನೆತನ್ಯಾಹು ಅವರಂತಹ ವ್ಯಕ್ತಿಗಳ ನಡವಳಿಕೆಯಲ್ಲಿ ಆಧುನಿಕ ಅನಾಗರಿಕತೆಯ ಒಂದು ರೂಪವನ್ನು ನೋಡುತ್ತಿದ್ದೇವೆ. ಮಕ್ಕಳ ಹತ್ಯೆ, ಶಾಲೆಗಳು, ವಿಶ್ವವಿದ್ಯಾಲಯಗಳು, ಆಸ್ಪತ್ರೆಗಳು ಮತ್ತು ಲಸಿಕೆ ಮತ್ತು ಔಷಧ ಉತ್ಪಾದನಾ ಕೇಂದ್ರಗಳ ಮೇಲಿನ ದಾಳಿಗಳು ಹಿಂಸಾತ್ಮಕ ಮತ್ತು ಅಮಾನವೀಯ ವಿಧಾನದ ಸೂಚನೆಗಳಾಗಿವೆ” ಎಂದು ಅವರು ಹೇಳಿದ್ದಾರೆ.
ಇದನ್ನೂ ಓದಿ: ಅಮೆರಿಕ-ಇಸ್ರೇಲ್ ದಾಳಿಯಲ್ಲಿ ಗುಪ್ತಚರ ಮುಖ್ಯಸ್ಥ ಮಜೀದ್ ಸಾವು, ಇರಾನ್ಗೆ ದೊಡ್ಡ ಹಿನ್ನಡೆ
“ಪ್ರಸ್ತುತ ಪರಿಸ್ಥಿತಿಯಲ್ಲಿ ಇರಾನ್ನ ಆದ್ಯತೆಯೆಂದರೆ, ಶತ್ರುಗಳ ಆಕ್ರಮಣ ಮತ್ತು ಪ್ರತಿಕೂಲ ಕ್ರಮಗಳ ವಿರುದ್ಧ ನಮ್ಮ ದೇಶವನ್ನು ರಕ್ಷಿಸುವುದು. 38 ದಿನಗಳಿಂದ ನಾವು ಆಕ್ರಮಣಕಾರರ ವಿರುದ್ಧ ಹೋರಾಡಿ ನಮ್ಮನ್ನು ನಾವು ರಕ್ಷಿಸಿಕೊಳ್ಳುತ್ತಿದ್ದೇವೆ. ಅಮೆರಿಕ ಮತ್ತು ಜಿಯೋನಿಸ್ಟ್ ಆಕ್ರಮಣಕಾರರ ದಾಳಿಗೆ ಸೂಕ್ತ ಪ್ರತಿಕ್ರಿಯೆ ನೀಡುವುದಕ್ಕೆ ನಮ್ಮ ಮೊದಲ ಆದ್ಯತೆ” ಎಂದು ಅವರು ಹೇಳಿದ್ದಾರೆ.
ಇನ್ನಷ್ಟು ಅಂತಾರಾಷ್ಟ್ರೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ