ಟೆಹ್ರಾನ್, ಫೆ.28: ಇಸ್ರೇಲ್ ಮತ್ತು ಇರಾನ್ ನಡುವಿನ ಯುದ್ಧವು ತಾರಕಕ್ಕೇರಿರುವ ಈ ಸಂದರ್ಭದಲ್ಲಿ, ಇರಾನ್ನ ಪರಮೋಚ್ಚ ನಾಯಕ ಅಯತೊಲ್ಲಾ ಅಲಿ ಖಮೇನಿ ಅವರ ಸಾವಿನ ಕುರಿತಾದ ವದಂತಿಗಳು ಜಗತ್ತಿನಾದ್ಯಂತ ಸಂಚಲನ ಮೂಡಿಸಿವೆ. ಇಸ್ರೇಲ್ನ ಪ್ರಮುಖ ಮಾಧ್ಯಮ ಸಂಸ್ಥೆಗಳು ವರದಿ ಮಾಡಿರುವ ಪ್ರಕಾರ, ಇಸ್ರೇಲ್ ಮತ್ತು ಅಮೆರಿಕ ಇತ್ತೀಚೆಗೆ ಇರಾನ್ನ ಪ್ರಮುಖ ನೆಲೆಗಳ ಮೇಲೆ ನಡೆಸಿದ ವಾಯುದಾಳಿಯಲ್ಲಿ ಖಮೇನಿ ಅವರು ಮೃತಪಟ್ಟಿದ್ದಾರೆ. ಕೆಲವು ವರದಿಗಳು ಖಮೇನಿ ಅವರ ಆರೋಗ್ಯ ಹದಗೆಟ್ಟಿದ್ದು, ಅವರನ್ನು ರಹಸ್ಯ ಸುರಕ್ಷಿತ ತಾಣಕ್ಕೆ ಸ್ಥಳಾಂತರಿಸಲಾಗಿದೆ ಎಂದು ಹೇಳುತ್ತಿವೆ.
ಈ ವದಂತಿಗಳನ್ನು ಇರಾನ್ ಸರ್ಕಾರವು ಸಾರಾಸಗಟಾಗಿ ತಳ್ಳಿಹಾಕಿದೆ. ಇರಾನ್ನ ವಿದೇಶಾಂಗ ಸಚಿವರು ಮತ್ತು ಸರ್ಕಾರದ ವಕ್ತಾರರು ಅಧಿಕೃತ ಹೇಳಿಕೆ ಬಿಡುಗಡೆ ಮಾಡಿದ್ದು, “ನಮ್ಮ ಪರಮೋಚ್ಚ ನಾಯಕ ಅಲಿ ಖಮೇನಿ ಅವರು ಸುರಕ್ಷಿತವಾಗಿದ್ದಾರೆ ಮತ್ತು ಸಂಪೂರ್ಣವಾಗಿ ಜೀವಂತವಾಗಿದ್ದಾರೆ. ಇಸ್ರೇಲ್ ಮಾಧ್ಯಮಗಳು ಸುಳ್ಳು ಸುದ್ದಿ ಹರಡುವ ಮೂಲಕ ಇರಾನ್ ಜನರಲ್ಲಿ ಆತಂಕ ಮೂಡಿಸಲು ಪ್ರಯತ್ನಿಸುತ್ತಿವೆ” ಎಂದು ಹೇಳಿದ್ದಾರೆ.
ಇದನ್ನೂ ಓದಿ: ಎಲ್ಲಿ ಬೀಳುತ್ತೆ, ಎಷ್ಟು ಜೀವ ಹೋಗುತ್ತೆ ಗೊತ್ತಿಲ್ಲ: ಆಕಾಶದಿಂದ ಬಿದ್ದ ಕ್ಷಿಪಣಿ, ಕತಾರ್ನಲ್ಲಿ ಬೆಂಕಿಯ ಜ್ವಾಲೆ
ಯುದ್ಧದ ಸಮಯದಲ್ಲಿ ಎರಡೂ ದೇಶಗಳ ನಡುವೆ ಕೇವಲ ಕ್ಷಿಪಣಿ ದಾಳಿಯಷ್ಟೇ ಅಲ್ಲದೆ, ‘ಸೈಕಲಾಜಿಕಲ್ ವಾರ್’ (Psychological War) ಕೂಡ ನಡೆಯುತ್ತಿದೆ. ಶತ್ರು ದೇಶದ ನಾಯಕ ಸತ್ತಿದ್ದಾನೆ ಎಂದು ಬಿಂಬಿಸುವ ಮೂಲಕ ಆ ದೇಶದ ಸೈನ್ಯ ಮತ್ತು ಜನರ ಆತ್ಮವಿಶ್ವಾಸವನ್ನು ಕುಗ್ಗಿಸುವುದು ಇಂತಹ ವರದಿಗಳ ಹಿಂದಿನ ತಂತ್ರಗಾರಿಕೆಯಾಗಿರುತ್ತದೆ. ಇನ್ನು ನ್ಯೂಯಾರ್ಕ್ ಟೈಮ್ಸ್ ಬಿಡುಗಡೆ ಮಾಡಿದ ಉಪಗ್ರಹ ಛಾಯಾಚಿತ್ರವು ಟೆಹ್ರಾನ್ನಲ್ಲಿರುವ ಖಮೇನಿ ಅವರ ಕಾಂಪೌಂಡ್ಗೆ ಹಾನಿಯಾಗಿರುವುದನ್ನು ತೋರಿಸಿದೆ, ಅದು ಅವರ ಅಧಿಕೃತ ನಿವಾಸವಾಗಿಯೂ ಕಾರ್ಯನಿರ್ವಹಿಸುತ್ತಿದೆ ಎಂದು ವರದಿಯಾಗಿದೆ.
ವಿದೇಶಿ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ