Headlines

ಅವಳಿ ಮಕ್ಕಳನ್ನ ಕೊಂದು ತಾಯಿ ಆತ್ಮಹತ್ಯೆಗೆ ಯತ್ನಿಸಿದ್ಯಾಕೆ? ಸ್ಫೋಟಕ ಮಾಹಿತಿ ಬಿಚ್ಚಿಟ್ಟ SP – Kannada News | Kolar SP Shivanshu Rajput talks about Woman Attempts Suicide after Killed Her Two Children

ಕೋಲಾರ, (ಮಾರ್ಚ್ 02): ಕೌಟುಂಬಿಕ ಕಲಹದ (Family Dispute)  ಹಿನ್ನಲೆಯಲ್ಲಿ ಇಬ್ಬರು ಮಕ್ಕಳೊಂದಿಗೆ  ತಾಯಿ (Mother) ನೀರಿನ ಸಂಪಿಗೆ ಬಿದ್ದು ಆತ್ಮಹತ್ಯೆಗೆ ಯತ್ನಿಸಿದ್ದು, ಅದೃಷ್ಟವಶಾತ್ ತಾಯಿಯನ್ನು ಸ್ಥಳೀಯರೊಬ್ಬರು ರಕ್ಷಣೆ ಮಾಡಿದ್ದಾರೆ. ಆದ್ರೆ, ದುರದೃಷ್ಟವಶಾತ್ ಎರಡು ಅವಳಿ ಕಂದಮ್ಮಗಳು ಸಾವನ್ನಪ್ಪಿವೆ. ಈ ದಾರುಣ ಘಟನೆ ಇಂದು (ಮಾರ್ಚ್ 02) ಕೋಲಾರದಲ್ಲಿ (Kolar) ನಡೆದಿದೆ. ಕೌಟುಂಬಿಕ ಕಲಹದಿಂದ ಬೇಸತ್ತ ಗೃಹಿಣಿಯೊಬ್ಬಳು ತನ್ನ ಇಬ್ಬರು ಅವಳಿ ಗಂಡುಮಕ್ಕಳೊಂದಿಗೆ ಪ್ರಸಿದ್ದ ಹೈದರಾಲಿಯ ಜನ್ಮ ಸ್ಥಳ ಬೂದಿಕೋಟಿಯ ಹೈದರಾಲಿ ಕೋಟೆಗೆ ಬಂದು ಅಲ್ಲಿರುವಂತಹ ಸಂಪಿನಲ್ಲಿ ಬಿದ್ದು ಆತ್ಮಹತ್ಯೆಗೆ ಯತ್ನಿಸಿದ್ದಾಳೆ. ಅದೃಷ್ಟವಶಾತ್ ಅಲ್ಲಿದ್ದ ಪ್ರವಾಸಿ ಮಿತ್ರ ಸಿಬ್ಬಂದಿ ಅನುಮಾನ ಬಂದು ನೋಡಿದ್ದಾರೆ, ಅಷ್ಟೊತ್ತಿಗಾಗಲೇ ಆಕೆ ತನ್ನಿಬ್ಬರು ಮಕ್ಕಳನ್ನು ನೀರಿನಲ್ಲಿ ಮುಳುಗಿಸಿ ಸಾಯಿಸಿದ್ದಳು. ನಂತರ ತಾನೂ ಕೂಡಾ ನೀರಿನಲ್ಲಿ ಮುಳುಗಿ ಆತ್ಮಹತ್ಯಗೆ ಪ್ರಯತ್ನಿಸುತ್ತಿದ್ದ ವೇಳೆ ಪ್ರವಾಸಿ ಮಿತ್ರ ಶ್ರೀನಿವಾಸ್​ ಆಕೆಯನ್ನು ರಕ್ಷಣೆ ಮಾಡಿದ್ದಾರೆ. ಇನ್ನು ಮೃತ ಮಕ್ಕಳು ಹಾಗೂ ಮಹಿಳೆಯನ್ನು ಕೋಡಗುರ್ಕಿ ಗ್ರಾಮದ ಉಷಾ(28) ಹಾಗೂ ಮೂರು ವರ್ಷದ ಮಕ್ಕಳಾದ ಹರ್ಷಿತ್ ಮತ್ತು ಹಿತೇಶ್ ಎಂದು ತಿಳಿದುಬಂದಿದೆ.

ಉಷಾ ಮತ್ತು ಮುರಳಿ ದಂಪತಿಗಳ ಮೂರು ವರ್ಷದ ಅವಳಿ ಮಕ್ಕಳಿವರು, ಉಷಾ ಮನೆಯಲ್ಲಿ ಗಲಾಟೆ ಮಾಡಿಕೊಂಡು ಇಂದು ಬೆಳಗ್ಗೆ ಸುಮಾರು 9.30 ಗಂಟೆಗೆ ಬೂದಿಕೋಟಿಗೆ ಆಗಮಿಸಿ ಅಲ್ಲಿರುವಂತಹ ಪ್ರವಾಸತಾಣವಾದ ಹೈದರಾಲಿ ಕೋಟೆಗೆ ತನ್ನ ಇಬ್ಬರು ಅವಳಿ ಮಕ್ಕಳೊಂದಿಗೆ ಒಳಹೋಗಿದ್ದಾರೆ. ಮೊದಲೇ ಸಾಯಬೇಕೆಂದು ನಿರ್ಧಾರ ಮಾಡಿಕೊಂಡು ಬಂದಿದ್ದ ಉಷಾ ಕೋಟೆಯ ಎಲ್ಲಡೆ ಸುತ್ತಾಡಿ ಅಲ್ಲಿಯೇ ಇದ್ದಂತಹ ಸಂಪಿನೊಳಗೆ ತನ್ನ ಇಬ್ಬರು ಅವಳಿ ಮಕ್ಕಳೊಂದಿಗೆ ಹಾರಿ ಆತ್ಮಹತ್ಯೆಗೆ ಯತ್ನಿಸಿದ್ದಾರೆ. ಅಲ್ಲಿಯ ಇದ್ದಂತಹ ಕೆಲ ಪ್ರವಾಸಿಗರು ಕೂಡಲೇ ಉಷಾ ಅವರನ್ನು ರಕ್ಷಣೆ ಮಾಡಿದ್ದಾರೆ. ಆದ್ರೆ ಮಕ್ಕಳಿಬ್ಬರು ರಕ್ಷಣೆ ಮಾಡುವಷ್ಟರಲ್ಲಿ ಅವರ ಪ್ರಾಣಪಕ್ಷಿ ಹಾರಿ ಹೋಗಿದೆ. ಇನ್ನು ತಾಯಿ ಉಷಾ ತನ್ನ ಕೌಟುಂಬಿಕ ಕಲಹಕ್ಕೆ ಮುದ್ದಾದ ಇಬ್ಬರು ಮಕ್ಕಳು ಪ್ರಪಂಚ ನೋಡುವ ಮೊದಲು ಜೀವ ತೆತ್ತಿದ್ದಾರೆ. ಇನ್ನು ಈ ಬಗ್ಗೆ ಕೋಲಾರ ಎಸ್ಪಿ ಮಾತನಾಡಿದ್ದು, ಘಟನೆಗೆ ಬಗ್ಗೆ ಸ್ಫೋಟಕ ಮಾಹಿತಿ ಬಿಚ್ಚಿಟ್ಟಿದ್ದಾರೆ.

ಇದನ್ನೂ ಓದಿ: ಅವಳಿ ಮಕ್ಕಳ ಜೊತೆ ಬಾವಿಗೆ ಹಾರಿದ ತಾಯಿ: ಮಹಿಳೆಯ ರಕ್ಷಣೆ, ಪುಣಾಣಿಗಳು ಸಾವು

Source link

Leave a Reply

Your email address will not be published. Required fields are marked *