Headlines

ಆಕ್ಟರ್ ಶ್ರೀಲೀಲಾ ಮಾತ್ರವಲ್ಲ ಇನ್ನು ಮುಂದೆ ಡಾಕ್ಟರ್ ಶ್ರೀಲೀಲಾ – Kannada News | Sreeleela became graduated she is officially now a doctor

ಶ್ರೀಲೀಲಾ (Sreeleela) ಬೇಡಿಕೆಯ ನಟಿ ಇಂದ ಸ್ಟಾರ್ ನಟಿಯಾಗುವತ್ತ ಹೆಜ್ಜೆ ಇಡುತ್ತಿದ್ದಾರೆ. ಕನ್ನಡತಿ ಶ್ರೀಲೀಲಾ, ಕನ್ನಡ ಸಿನಿಮಾಗಳ ಬಳಿಕ ತೆಲುಗಿಗೆ ಹೋಗಿ ಅಲ್ಲಿ ಬಹುಬೇಗ ಬೇಡಿಕೆಯ ನಟಿಯಾಗಿ ಗುರುತಿಸಿಕೊಂಡರು. ಬಳಿಕ ಬಾಲಿವುಡ್​​ಗೆ ಹೆಜ್ಜೆ ಇಟ್ಟಿದ್ದೇ ತಡ ಒಟ್ಟಿಗೆ ಮೂರು-ನಾಲ್ಕು ಸಿನಿಮಾಗಳನ್ನು ಬಾಚಿಕೊಂಡಿದ್ದಾರೆ. ಇದೀಗ ತಮಿಳಿನಲ್ಲೂ ನಟಿಗೆ ಬಲು ಬೇಡಿಕೆ ಇದೆ. ಅದ್ಭುತ ನೃತ್ಯ ಪ್ರತಿಭೆ ಸೌಂದರ್ಯದ ಜೊತೆಗೆ ಒಳ್ಳೆಯ ನಟಿಯೂ ಆಗಿರುವ ಶ್ರೀಲೀಲಾ ಕೇವಲ ನಟಿ ಮಾತ್ರವಲ್ಲ, ಒಳ್ಳೆಯ ವಿದ್ಯಾರ್ಥಿ ಸಹ. ಇದೀಗ ಶ್ರೀಲೀಲಾ ತಮ್ಮ ವಿದ್ಯಾರ್ಥಿ ಜೀವನ ಮುಗಿಸಿ ವೈದ್ಯೆಯಾಗಿದ್ದಾರೆ.

ಬಾಲ್ಯದಿಂದಲೂ ಅತ್ಯುತ್ತಮ ವಿದ್ಯಾರ್ಥಿನಿ ಆಗಿರುವ ಶ್ರೀಲೀಲಾ, ಸಿನಿಮಾ, ನೃತ್ಯ ಕಾರ್ಯಕ್ರಮಗಳ ನಡುವೆಯೇ ಎಂಬಿಬಿಎಸ್ ಮುಗಿಸಿದ್ದಾರೆ. ಶ್ರೀಲೀಲಾ ನಿನ್ನೆಯಷ್ಟೆ ತಮ್ಮ ವೈದ್ಯ ಪದವಿಯನ್ನು ಗಳಿಸಿಕೊಂಡಿದ್ದಾರೆ. ಮುಂಬೈನ ಡಿವೈ ವೈದ್ಯಕೀಯ ವಿವಿಯಲ್ಲಿ ಆಯೋಜಿಸಲಾಗಿದ್ದ ಪದವಿ ವಿತರಣಾ ಘಟಿಕೋತ್ಸವ ಸಮಾರಂಭದಲ್ಲಿ ಹಲವಾರು ವಿದ್ಯಾರ್ಥಿಗಳ ಜೊತೆಗೆ ಶ್ರೀಲೀಲಾ ಸಹ ತಮ್ಮ ವೈದ್ಯ ಪದವಿಯನ್ನು ಸ್ವೀಕಾರ ಮಾಡಿದ್ದಾರೆ.

ಶ್ರೀಲೀಲಾ ವೈದ್ಯಕೀಯ ಪದವಿ ಸ್ವೀಕಾರ ಮಾಡುತ್ತಿರುವ ಹಲವು ಚಿತ್ರಗಳು, ವಿಡಿಯೋಗಳು ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿವೆ. ಶ್ರೀಲೀಲಾ ಅವರು ಪದವಿ ಖುಷಿಯಿಂದ ಪದವಿ ಸ್ವೀಕಾರ ಮಾಡಿರುವ ವಿಡಿಯೋ, ಅದರ ಬಳಿಕ ಸಾಮೂಹಿಕವಾಗಿ ವೈದ್ಯ ಪ್ರತಿಜ್ಞೆ ಸ್ವೀಕಾರ ಮಾಡುತ್ತಿರುವ ವಿಡಿಯೋಗಳು ಇದೀಗ ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿವೆ. ಒಂದು ವಿಡಿಯೋನಲ್ಲಿ ಪ್ರತಿಜ್ಞೆ ಬೋಧಿಸಿದ ಬಳಿಕ ‘ನೀವುಗಳು ಇದೀಗ ಅಧಿಕೃತವಾಗಿ ವೈದ್ಯರು’ ಎಂಬ ಘೋಷಣೆ ಬಂದ ಕೂಡಲೇ ಖುಷಿಯಾಗಿ ನಗುತ್ತಿರುವ ಶ್ರೀಲೀಲಾ ಅವರ ವಿಡಿಯೋ ಇದೀಗ ಸಖತ್ ವೈರಲ್ ಆಗಿದೆ.

ಇದನ್ನೂ ಓದಿ:‘ಹ್ಯಾಟ್ರಿಕ್ ಹೀರೋ’ ಜೊತೆ ನಟಿಸಲಿದ್ದಾರೆ ಶ್ರೀಲೀಲಾ

ಸಿನಿಮಾ ನಟ-ನಟಿಯರು ಅಲ್ಪ ಜ್ಞಾನಿಗಳು, ಒಳ್ಳೆಯ ಓದಿನ ಹಿನ್ನೆಲೆ ಇರುವವರು ಬಹಳ ಕಡಿಮೆ ಎನ್ನಲಾಗುತ್ತದೆ. ಆದರೆ ಕೆಲವು ನಟ-ನಟಿಯರು ನಿಜಕ್ಕೂ ಒಳ್ಳೆಯ ಓದಿನ ಹಿನ್ನೆಲೆ ಉಳ್ಳವರಾಗಿದ್ದಾರೆ. ದಕ್ಷಿಣ ಭಾರತದ ಜನಪ್ರಿಯ ನಟಿ ಸಾಯಿ ಪಲ್ಲವಿ ಸಹ ವೈದ್ಯೆ ಆಗಿದ್ದಾರೆ. ಇದೀಗ ಶ್ರೀಲೀಲಾ ಸಹ ವೈದ್ಯೆ ಆಗಿದ್ದಾರೆ. ಸಾಕಷ್ಟು ಎಂಜಿನಿಯರ್ ಪದವಿಧರರು ಸಹ ಚಿತ್ರರಂಗದಲ್ಲಿ ಇದ್ದಾರೆ.

ಸಿನಿಮಾಗಳ ವಿಷಯಕ್ಕೆ ಬರುವುದಾದರೆ ಶ್ರೀಲೀಲಾ ಪ್ರಸ್ತುತ ತೆಲುಗಿನ ಪವನ್ ಕಲ್ಯಾಣ್ ನಟನೆಯ ‘ಉಸ್ತಾದ್ ಗಬ್ಬರ್ ಸಿಂಗ್’ ಸಿನಿಮಾನಲ್ಲಿ ನಟಿಸಿದ್ದಾರೆ. ತಮಿಳಿನಲ್ಲಿ ಧನುಶ್ ನಟನೆಯ ಸಿನಿಮಾ ಹಾಗೂ ಪ್ರದೀಪ್ ರಂಗನಾಥನ್ ನಟನೆಯ ಹೊಸ ಸಿನಿಮಾನಲ್ಲಿ ನಟಿಸುತ್ತಿದ್ದಾರೆ. ಹಿಂದಿಯಲ್ಲಿ ‘ಆಶಿಖಿ 3’, ರಣ್ವೀರ್ ಸಿಂಗ್ ಜೊತೆಗೆ ಹೊಸ ಸಿನಿಮಾ ಇದರ ಜೊತೆಗೆ ಇನ್ನೂ ಎರಡು ಸಿನಿಮಾಗಳಲ್ಲಿ ನಟಿಸಲಿದ್ದಾರೆ. ಒಟ್ಟಾರೆ ಶ್ರೀಲೀಲಾ ಸಖತ್ ಬ್ಯುಸಿ ಆಗಿದ್ದಾರೆ.

ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Published On – 7:02 pm, Wed, 11 February 26

Source link

Leave a Reply

Your email address will not be published. Required fields are marked *