ಆರ್​​ಸಿಬಿ ಹೆಸರು ಬದಲಾವಣೆ ವಿಷಯ; ಅಭಿಮಾನಿಗಳಿಗೆ ಗುಡ್​ನ್ಯೂಸ್ ಕೊಟ್ಟ ಅನನ್ಯಾ ಬಿರ್ಲಾ

ಆರ್​​ಸಿಬಿ ಹೆಸರು ಬದಲಾವಣೆ ವಿಷಯ; ಅಭಿಮಾನಿಗಳಿಗೆ ಗುಡ್​ನ್ಯೂಸ್ ಕೊಟ್ಟ ಅನನ್ಯಾ ಬಿರ್ಲಾ

ಯುನೈಟೆಡ್‌ ಸ್ಪಿರಿಟ್ಸ್‌ ಲಿಮಿಟೆಡ್‌ ಆರ್​​​ಸಿಬಿ (RCB) ತಂಡವನ್ನು ಆದಿತ್ಯ ಬಿರ್ಲಾ ಗ್ರೂಪ್​​​ಗೆ ಮಾರಾಟ ಮಾಡಿದೆ. 16,706 ಕೋಟಿ ರೂಪಾಯಿಗೆ ಈ ಡೀಲ್ ಪೂರ್ಣಗೊಂಡಿದೆ. ಟೈಮ್ಸ್ ಆಫ್ ಇಂಡಿಯಾ ಸೇರಿ ಕೆಲವು ಕಂಪನಿಗಳು ಆದಿತ್ಯಾ ಬಿರ್ಲಾಗೆ ಬೆಂಬಲ ನೀಡಿವೆ. ಈ ಮಧ್ಯೆ ಆರ್​​​ಸಿಬಿ ಹೆಸರು ಬದಲಾವಣೆ ಆಗುವ ಬಗ್ಗೆ ಸಾಕಷ್ಟು ಚರ್ಚೆ ನಡೆಯುತ್ತಿತ್ತು. ಈ ವದಂತಿ ಬಗ್ಗೆ ಅನನ್ಯಾ ಬಿರ್ಲಾ ಸ್ಪಷ್ಟನೆ ಕೊಟ್ಟಿದ್ದಾರೆ. ಈ ವಿಷಯಗಳಿಗೆ ಅಭಿಮಾನಿಗಳು ಖುಷಿಪಟ್ಟಿದ್ದಾರೆ.

ರಾಯಲ್ ಚಾಲೆಂಜ್ ವಿಸ್ಕಿ ಬ್ರ್ಯಾಂಡ್ ಪ್ರಚಾರ ಮಾಡುವ ಉದ್ದೇಶದಿಂದ ವಿಜಯ್ ಮಲ್ಯ ಅವರು ರಾಯಲ್ ಚಾಲೆಂಜ್ ಹೆಸರನ್ನು ಆಯ್ಕೆ ಮಾಡಿಕೊಂಡಿದ್ದರು. ಮಲ್ಯ ಬೆಂಗಳೂರಿನವರು. ಹೀಗಾಗಿ, ತಂಡದಲ್ಲಿ ಬೆಂಗಳೂರು ಬರುವಂತ ನೋಡಿಕೊಂಡರು. ಎಲ್ಲವನ್ನೂ ಸೇರಿಸಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ಎಂದು ಹೆಸರು ಇಟ್ಟರು. ಈ ಹೆಸರು ಈಗ ಅಭಿಮಾನಿಗಳ ಜೊತೆ ಭಾವನಾತ್ಮಕವಾಗಿ ಕನೆಕ್ಟ್ ಆಗಿದೆ. ಹೀಗಾಗಿ, ಹೆಸರು ಬದಲಿಸಿದಂತೆ ಕೋರಿಕೊಳ್ಳಲಾಗುತ್ತಿತ್ತು. ಇದಕ್ಕೆ ಅನನ್ಯಾ ಪಾಸಿಟಿವ್ ಆಗಿ ಪ್ರತಿಕ್ರಿಯಿಸಿದ್ದಾರೆ.

ಈ ಮೊದಲು ಆರ್​​ಸಿಬಿ ಹೆಸರು ಇಂಗ್ಲಿಷ್​ ಅಲ್ಲಿ ‘Royal Challengers Bangalore’ ಎಂದಿತ್ತು. ನಂತರ Bangalore ಅನ್ನು Bengaluru ಎಂದು ಬದಲಿಸಲಾಯಿತು. ಈ ಮೂಲಕ ಕನ್ನಡಿಗರ ಭಾವನೆಗೆ ಬೆಲೆ ಕೊಡಲಾಗಿತ್ತು. ಈಗ ಹೊಸ ಮಾಲೀಕರು ತಂಡ ಬದಲಿಸುತ್ತಾರೆ ಎಂದು ಹೇಳಲಾಗುತ್ತಾ ಬರಲಾಯಿತು. ಆದರೆ, ಆ ರೀತಿ ಇಲ್ಲ ಎಂಬುದು ಅನನ್ಯಾ ಸ್ಪಷ್ಟನೆ. ‘ಆರ್​​​ಸಿಬಿ ಹೆಸರು ಬದಲಾಗುವುದಿಲ್ಲ’ ಎಂದು ಇನ್​​ಸ್ಟಾ ಸ್ಟೇಟಸ್​​​ನಲ್ಲಿ ಹಂಚಿಕೊಳ್ಳಲಾದ ಪೋಸ್ಟ್​ ಅನ್ನು ಅನನ್ಯಾ ಶೇರ್ ಮಾಡಿಕೊಂಡಿದ್ದಾರೆ. ಈ ಮೂಲಕ ಅಭಿಮಾನಿಗಳ ಆತಂಕವನ್ನು ದೂರ ಮಾಡಿದ್ದಾರೆ.

ಇದನ್ನೂ ಓದಿ: ​​RCB ಮಾರಾಟದ ಬೆನ್ನಲ್ಲೇ ಮಹತ್ವದ ಕೋರಿಕೆ ಇಟ್ಟ ವಿಜಯ್ ಮಲ್ಯ

ಇಷ್ಟು ದಿನಗಳ ಕಾಲ ಹೈದರಾಬಾದ್ ತಂಡ ಮಾಲೀಕರಾದ ಕಾವ್ಯಾ ಮಾರನ್ ಅವರು ಸಾಕಷ್ಟು ಮಿಂಚುತ್ತಿದ್ದಾರೆ. ಅವರಿಗೆ ಕಾಂಪಿಟೇಷನ್ ಕೊಡೋಕೆ ಅನನ್ಯಾ ಬಂದಿದ್ದಾರೆ ಎಂಬ ಮಾತು ಕೂಡ ಕೇಳಿ ಬಂದಿದೆ. ಹೀಗಾಗಿ, ಆರ್​​ಸಿಬಿ ಪಂದ್ಯಗಳಲ್ಲಿ ಇವರು ಹೈಲೈಟ್ ಆಗಬಹುದು.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

 

Source link

Leave a Reply

Your email address will not be published. Required fields are marked *