ಇತ್ತ ಪೊಲೀಸರ ಪರದಾಟ, ಅತ್ತ ಪರಪುರುಷನ ಜೊತೆ ಆಟ: ಆಂಟಿಯ ಮತ್ತಷ್ಟು ನೌಟಂಕಿ ಆಟ ಬಯಲು – Kannada News | Tumakuru lady Missing Lady Found With Boy friend: here Is Kunigal Priyanka case Timeline

ಹಾಸನ/ತುಮಕೂರು, (ಫೆಬ್ರವರಿ 15): ಕುಣಿಗಲ್​​ ಮೂಲದ ಪ್ರಿಯಾಂಕಾ ಮಿಸ್ಸಿಂಗ್ (Priyanka Missing Case) ಕಹಾನಿ ರೋಚಕ ತಿರುವು ಪಡೆದುಕೊಂಡಿದೆ. ಮದ್ವೆಗೆಂದು ಹಾಸನದ ಬೇಲೂರಿಗೆ ಬಂದಿದ್ದ ಪ್ರಿಯಾಂಕಾ, ಆತ್ಮಹತ್ಯೆ ಎಂದು ಬಿಂಬಿಸಿ ಪ್ರಿಯಕರ ಡೇವಿಡ್ ಮನೆಯಲ್ಲಿ ಪತ್ತೆಯಾಗಿದ್ದಾಳೆ. ಕೆರೆ ಬಳಿ ಬಟ್ಟೆ, ಬ್ಯಾಗ್, ಚಪ್ಪಲಿ ಪತ್ತೆಯಾಗಿತ್ತು. ಇದರಿಂದ ಮುಳುಗುತಜ್ಞರನ್ನು ಕರೆಸಿ ಕೆರೆಯಲ್ಲಿ ಪರಿಶೀಲನೆ ನಡೆಸಲಾಗಿತ್ತು. ಅಗ್ನಿಶಾಮಕದಳದ ಸಿಬ್ಬಂದಿ ಆಗಮಿಸಿ ಕೆರೆಯ ಪರಶೀಲನೆ ನಡೆಸಿದ್ದರು. ಆದ್ರೆ, ಅತ್ಯಾಚಾರವೂ ಇಲ್ಲ, ಕೊಲೆಯೂ ಅಲ್ಲ, ಮಳ್ಳಿಯ ಬೃಹನ್ನಾಟಕ ಬಯಲಾಗಿದೆ. ಪೊಲೀಸರು ಪ್ರಿಯಾಂಕಾಳ ಪತ್ತೆಗೆ ಪರದಾಡುತ್ತಿದ್ದರೆ, ಮತ್ತೊಂದೆಡೆ ಪ್ರಿಯಾಂಕಾ ಪರಪುರುಷನ ಜೊತೆ ಆಯಾಗಿದ್ದಳು. ಅಸಲಿಗೆ ಗಂಡನನ್ನು ಬಿಟ್ಟು ಪ್ರಿಯಕರ ಡೇವಿಡ್ ಜತೆ ಸಂಸಾರ ಮಾಡಲು ನಿರ್ಧರಿಸಿದ್ದಳು. ಹೀಗಾಗಿ ಈ ಎಲ್ಲಾ ಹೈಡ್ರಾಮಾ ಮಾಡಿದ್ದಾಳೆ ಎನ್ನುವ ಸ್ಫೋಟಕ ಅಂಶ ಬಯಲಿಗೆ ಬಂದಿದೆ.

ನಾಪತ್ತೆ ಸೀನ್‌ ಕ್ರಿಯೇಟ್ ಮಾಡಿದ್ದ ಪ್ರಿಯಾಂಕಾ

ಪ್ರಿಯಾಂಕಾ ಅನ್ನೋ ಈ ಮಹಿಳೆ ತುಮಕೂರು ಜಿಲ್ಲೆ ಕುಣಿಗಲ್‌ ತಾಲೂಕಿನ ಯಲಿಯೂರು ಗ್ರಾಮದಿಂದ ಚಿಕ್ಕಮಗಳೂರಿಗೆ ಚಿಕ್ಕಮ್ಮನ ಮಗಳ ಮದುವೆಗೆಂದು ಬಂದಿದ್ದಳು. ಮೈಮೇಲೆ 20 ಲಕ್ಷ ರೂಪಾಯಿ ಮೌಲ್ಯದ ಚಿನ್ನಾಭರಣವಿತ್ತು. ಮದ್ವೆ ಮುಗಿಸಿಕೊಂಡು ತವರು ಮನೆಯಿದ್ದ ಹಾಸನದ ಬೇಲೂರಿಗೆ ಹೋಗಿದ್ದಳು. ಅಲ್ಲಿ ತಾಯಿ ಜೊತೆ ಮಾತಾಡಿಕೊಂಡು ಸೀರೆ ಬದಲಿಸಿ ಟಾಪ್ ಹಾಕಿಕೊಂಡಿದ್ದಳು. ಆದ್ರೆ ವಾಪಸ್ ಊರಿನ ಬಸ್ ಹತ್ತಿದ್ದವಳು ದಿಢೀರ್ ನಾಪತ್ತೆಯಾಗಿದ್ದಳು. ನನ್ನ ಹೆಂಡ್ತಿ ಪ್ರಿಯಾಂಕಾ ಎಲ್ಲಿ ಹೋದ್ಲಪ್ಪ ಅಂತಾ ಗಂಡ ತಲೆಕೆಡಿಸಿಕೊಂಡಿದ್ದ. ಸಂಬಂಧಿಕರು ಪೊಲೀಸರಿಗೆ ದೂರು ಕೊಟ್ಟು ಸರಿಯಾಗಿ ತನಿಖೆ ಮಾಡ್ತಿಲ್ಲ ಅಂತಾ ಗಲಾಟೆ ಮಾಡಿದ್ರು. ನಂತರ ಹಾಸನದ ಹೆದ್ದಾರಿ ಬದಿಯಲ್ಲಿರೋ ಕಲ್ಕೆರೆ ಬಳಿ ಈಕೆಯ ಆಧಾರ್‌ ಕಾರ್ಡ್‌ ಸಿಕ್ಕಿತ್ತು. ಕೆರೆಯ ಸುತ್ತಮುತ್ತ ಹುಡುಕಾಡಿದಾಗ ಚಪ್ಪಲಿ, ವ್ಯಾನಿಟಿ ಬ್ಯಾಗ್, ಒಳಉಡುಪು ಸಿಕ್ಕಿತ್ತು. ಹೀಗಾಗಿ ಪ್ರಿಯಾಂಕಾ ಹಾಕಿದ್ದ 20 ರೂ. ಲಕ್ಷದ ಚಿನ್ನಾಭರಣಗಳಿಗಾಗಿ ಯಾರಾದ್ರೂ ಕೊಲೆಮಾಡಿದ್ರಾ? ಇಲ್ಲ ಅತ್ಯಾಚಾರ ಮಾಡಿ ಕೆರೆಯಲ್ಲಿ ಶವ ಬೀಸಾಡಿದ್ರಾ. ಹೀಗೆ ನಾನಾ ಅನುಮಾನಗಳು ಪೊಲೀಸರ ತಲೆಹೊಕ್ಕಿತ್ತು. ಈಕೆಯ ಪತಿರಾಯ ಮತ್ತು ಮನೆಯವರೆಲ್ಲ ಏನಾಯ್ತೋ ಎಂದು ಆತಂಕದಲ್ಲಿದ್ದರು.

ಇದನ್ನೂ ನೋಡಿ; ಮದ್ವೆಗೆಂದು ಹೋಗಿ ಗಂಡನ ಸ್ನೇಹಿತನ ಮನೇಲಿ ಸಿಕ್ಕಿಬಿದ್ದ ಆಂಟಿ: ಶಾಕಿಂಗ್ ಕಾರಣ ಬಿಚ್ಚಿಟ್ಟ SP

ಶವಕ್ಕಾಗಿ ರಾತ್ರಿವರೆಗೂ ಹುಡುಕಿದ್ದ ಮುಳುಗು ತಜ್ಞರ ತಂಡ!

ನಿಗೂಢವಾಗಿದ್ದ ಮಹಿಳೆ ಪ್ರಿಯಾಂಕಾ ನಾಪತ್ತೆ ಪ್ರಕರಣದ ಬಗ್ಗೆ ಪೊಲೀಸರು ಫುಲ್ ತಲೆಕೆಡಿಸಿಕೊಂಡಿದ್ದು, ಅಗ್ನಿಶಾಮಕ ದಳದವರು, ಮುಳುಗು ತಜ್ಞ ಈಶ್ವರ್ ಮಲ್ಪೆ ತಂಡ ನಿನ್ನೆ ರಾತ್ರಿವರೆಗೂ ಕೆರೆಯಲ್ಲಿ ಶೋಧ ಕಾರ್ಯಾಚರಣೆ ನಡೆಸಿತ್ತು. ಆದ್ರೆ ಎಷ್ಟು ಹುಡುಕಿದ್ರೆ ಏನು ಪ್ರಯೋಜನ. ಯಾಕಂದ್ರೆ ಏನಾಗಿಹೋದ್ಲೋ ಅಂದುಕೊಂಡಿದ್ದ ಪ್ರಿಯಾಂಕಾ ದೊಡ್ಡ ಡ್ರಾಮಾವನ್ನೇ ಮಾಡಿಬಿಟ್ಟಿದ್ದಳು. ಪ್ರಿಯಾಂಕಾಳ ತಾಯಿ ಹುಷಾರಾಗಿ ಹೋಗಿ ಬಾ ಮಗಳೇ ಎಂದು ಹಾಸನದ ಬೇಲೂರಿನಿಂದ ಬಸ್‌ಹತ್ತಿಸಿ ಕಳಿಸಿದ್ದಳು. ಆದ್ರೆ ಮುಂದಿನ ಸ್ಟಾಪ್‌ನಲ್ಲಿ ಬಸ್‌ನಿಂದ ಇಳಿದಿದ್ದ ಪ್ರಿಯಾಂಕಾ ತನ್ನ ಸ್ನೇಹಿತ ಡೇವಿಡ್‌ನ ಬೈಕ್ ಹತ್ತಿದ್ದಳು. ಸ್ವಲ್ಪದೂರ ಹೋಗಿ ರಾತ್ರಿ ವೇಳೆ ಬಟ್ಟೆ ಬದಲಿಸಿಕೊಂಡಿದ್ದ ಪ್ರಿಯಾಂಕಾ, ನಾಪತ್ತೆ ಸೀನ್ ಕ್ರಿಯೇಟ್ ಮಾಡುವ ಸಲುವಾಗಿ ಹೆದ್ದಾರಿ ಬದಿ ಒಂದ್ಕಡೆ ಆಧಾರ್ ಕಾರ್ಡ್ ಬಿಸಾಕಿದ್ರೆ, ಮತ್ತೊಂದ್ಕಡೆ ಚಪ್ಪಲಿ, ಇನ್ನೊಂದಡೆ ವ್ಯಾನಿಟಿ ಬ್ಯಾಗ್ ಎಸೆದಿದ್ದಳು. ಪೊಲೀಸರ ದಿಕ್ಕು ತಪ್ಪಿಸುವ ಸಲುವಾಗಿಯೇ ಕೆರೆ ಬಳಿಯೇ ತಾನು ಧರಿಸಿದ್ದ ಒಳಉಡುಪನ್ನು ಹರಿದು ಬಿಸಾಡಿದ್ದಳು.

ಪ್ರಿಯಾಂಕಾಳ ನೌಟಂಕಿ ಆಟ ಹೇಗಿತ್ತು ಗೊತ್ತಾ?

ಮದುವೆಗೆಂದು ಬಂದಿದ್ದ ಮಹಿಳೆ ಪ್ರಿಯಾಂಕ ನಿಗೂಢ ನಾಪತ್ತೆ ಪ್ರಕರಣದ ಸಂಪೂರ್ಣ ಟೈಮ್​ ಲೈನ್​ ಟಿವಿ9 ಬಿಚ್ಚಿಡುತ್ತಿದೆ. ಗುರುವಾರ ಮುಂಜಾನೆ 5 ಗಂಟೆಗೆ ಕುಣಿಗಲ್ ನಿಂದ ಬಸ್ ಹತ್ತಿ ಬೇಲೂರಿಗೆ ಬಂದಿಳಿದಿದ್ದ ಪ್ರಿಯಾಂಕಾ, ಗಂಡ ಬೀಳ್ಕೊಡುವ ವೇಳೆಯೇ ಪ್ರಿಯಕರನ ಜೊತೆ ಎಸ್ಕೇಪ್ ಆಗಲು ಪ್ಲಾನ್ ಮಾಡಿದ್ದಳು. ಆದ್ರೆ, ಅದು ಸಾಧ್ಯವಾಗಿಲ್ಲ. ಬೇಲೂರಿಗೆ ಬಂದು ಅಮ್ಮ ಚಿಕ್ಕಮ್ಮನ‌ ಜೊತೆ ಚಿಕ್ಕಮಗಳೂರಿಗೆ ಪ್ರಯಾಣ ಮಾಡಿ ಮದುವೆಯಲ್ಲಿ ಬಾಗಿಯಾಗಿದ್ದಳು. ಮದುವೆ ಮುಗಿಸಿ ಅಮ್ಮನ ಮನೆಗೆ ಬಂದು ಒಂದೆರಡು ಗಂಟೆ ಸಮಯ ಕಳೆದಿದ್ದ ಪ್ರಿಯಾಂಕಾ, ಬೇಲೂರು ತಾಲ್ಲೂಕಿನ ಮತ್ತಾವರದ ತಾಯಿ ಮನೆಯಲ್ಲಿದ್ದು ಸಂಜೆ ವಾಪಸ್ ಊರಿಗೆ ಹೊರಟಿದ್ದಳು. ಬಸ್ ಹತ್ತೋ ವೇಳೆ ತಾಯಿಯನ್ನ ತಬ್ಬಿ ಕಣ್ಣೀರಿಟ್ಟು ಹೊರಟಿದ್ದಳು. ಸಂಜೆ 6-30 ಕ್ಕೆ ಮತ್ತಾವರದಿಂದ ಹತ್ತಿ 7 ಗಂಟೆ 7 ನಿಮಿಷಕ್ಕೆ ಬೇಲೂರಿಗೆ ಬಂದಿದ್ದಳು. ಇತ್ತ ಪ್ರಿಯಕರ ಡೇವಿಡ್ ಸಹ ಪ್ರಿಯಾಂಕಾ ಬರೋ ವೇಳೆಗೆ ಬೈಕ್ ತಗೊಂಡು ಬೇಲೂರಿಗೆ ಬಂದಿದ್ದ.

ಒಳಉಡುಪಿ ಬಿಸಾಡಿ ಹೋಗಿದ್ಯಾಕೆ?

ಪ್ರಿಯಕರನ ಜೊತೆ ಮಾತನಾಡಲು ಬೇರೆ ಸಿಮ್ ಬಳಸುತ್ತಿದ್ದಳು. ಹಾಗಾಗಿಯೇ ಪ್ರಿಯಾಂಕ ಮಾಮೂಲಿ ಸಿಮ್ ಸಿಡಿಆರ್ ತೆಗೆದರೂ ಯಾವುದೇ ಸುಳಿವು ಸಿಗದೆ ಪೊಲೀಸರು ಕಂಗಾಲಾಗಿದ್ದರು. ಕಡೆಗೆ ಒಂದೇ ಮೊಬೈಲ್ ನಲ್ಲಿ ಎರಡು ಸಿಮ್ ಆಪರೇಟ್ ಆಗ್ತಿದ್ದ ಬಗ್ಗೆ ಮಾಹಿತಿ ಸಿಕ್ಕಿತ್ತು. ಇದೇ ಮಾಹಿತಿ ಆದರಿಸಿ ತನಿಖೆಗಿಳಿದಾಗ ಪ್ರಿಯಾಂಕಾಳ ಆಂಟಿಯ ನೌಟಂಕಿ ಆಟ ಬಯಲಾಗಿದೆ. ಬೇಲೂರಿನಿಂದ ಬೈಕ್ ಹತ್ತಿ ಹೊರಟು ದಾರಿ ಮದ್ಯೆ ಬಟ್ಟೆ ಬದಲಾಯಿಸಿದ್ದ ಪ್ರಿಯಾಂಕಾ, ತಾಯಿ ಮನೆಯಿಂದ ಹೊರಟಾಗ ದರಿಸಿದ್ದ ಟಾಪ್, ಪ್ಯಾಂಟ್ ಒಳ ಉಡುಪು ಕಳಚಿ ಕೆರೆ ಬಳಿ ಬಿಸಾಡಿ ಹಾಸನದ ಮೂಲಕ ಅದೇ ದಿನ ಪ್ರಿಯಾಂಕ ಹಾಗು ಡೇವಿಡ್, ಕುಣಿಗಲ್ ತಲುಪಿದ್ದರು. ಬಟ್ಟೆ ರಸ್ತೆಯಲ್ಲಿ ಸಿಕ್ಕರೆ ಎಲ್ಲೆಡೆ ಹುಡುಕಾಡುತ್ತಾರೆ. ತನ್ನ ಬಗ್ಗೆ ಯಾವುದೇ ಸುಳಿವು ಸಿಗದಿದ್ದಾಗ ಯಾರೋ ಕೊಲೆ ಮಾಡಿ ಎಲ್ಲೊ ಬಿಸಾಡಿದ್ದಾರೆ ಎಂದು ಸುಮ್ಮನಾಗ್ತಾರೆ ಎಂದು ಈ ರೀತಿ ಪ್ಲ್ಯಾನ್ ಮಾಡಿದ್ದಳು.

ಗಂಡನನ್ನ ಬಿಟ್ಟು ಪ್ರಿಯಕರನ ಜತೆ ಇರಲು ಪ್ಲ್ಯಾನ್

ಪ್ರಿಯಾಂಕ ಹಾಗೂ ಡೆವಿಡ್ ಕುಣಿಗಲ್ ನಲ್ಲಿ ಒಂದೇ ಕಂಪನಿಯ ಉದ್ಯೋಗಿಯಾಗಿದ್ದರು. ಪರಿಚಯವಾಗಿ ಬಳಿಕ ಇಬ್ಬರ ನಡುವೆ ಪ್ರೇಮಾಂಕುರವಾಗಿದ್ದು, ಪ್ರೇಮಿಗಳ ದಿನವೇ ಜೊತೆಯಾಗಿ ಇರಲು ನಿರ್ಧರಿಸಿದ್ದರು. ಹೀಗಾಗಿ ಎಲ್ಲರಿಗೂ ದಾರಿ ತಪ್ಫಿಸಿ ಎಸ್ಕೇಪ್ ಆಗುವ ಪ್ಲ್ಯಾನ್ ಮಾಡಿದ್ದರು. ತಾವು ಕೆಲಸ ಮಾಡುತ್ತಿದ್ದ ಕಂಪನಿ ಮಧ್ಯಪ್ರದೇಶಕ್ಕೆ ಶಿಫ್ಟ್ ಆಗುವ ಹಿನ್ನೆಲೆಯಲ್ಲಿ ಈ ಜೋಡಿ ಅಲ್ಲಿಗೆ ತೆರಳಿ ಒಟ್ಟಿಗೆ ಜೀವನ ನಡೆಸಲು ತೀರ್ಮಾನಿಸಿತ್ತು. ಇದರಿಂದ 20 ಲಕ್ಷ ರೂ. ಮೌಲ್ಯದ ಒಡವೆ ಸಮೇತ ಪ್ರಿಯಾಂಕಾ ಪ್ರಿಯಕರನ ಜೊತೆ ಎಸ್ಕೇಪ್ ಆಗಲು ಸ್ಕೆಚ್ ಹಾಕಿದ್ದಳು. ಆದ್ರೆ, ನಿನ್ನೆ(ಫೆಬ್ರವರಿ 14ರ ರಾತ್ರಿ 9 ಗಂಟೆ ವೇಳೆಗೆ ಕುಣಿಗಲ್ ನಲ್ಲಿ ಈ ಜೋಡಿ ಲಾಕ್ ಆಗಿದೆ.

ಕರ್ನಾಟಕದ ಮತ್ತಷ್ಟು ಸುದ್ದಿಗಾಗಿ ಇಲ್ಲಿ ಕ್ಲಿಕ್ ಮಾಡಿ

Source link

Leave a Reply

Your email address will not be published. Required fields are marked *