
ಆಹಾರ ಮತ್ತು ನೀರು (Water) ಎರಡೂ ಕೂಡ ದೇಹದ ಆರೋಗ್ಯಕ್ಕೆ ಅತ್ಯಂತ ಮುಖ್ಯ. ಆದರೆ ಅವುಗಳನ್ನು ಯಾವ ಸಮಯದಲ್ಲಿ, ಹೇಗೆ ಸೇವನೆ ಮಾಡಬೇಕು ಎಂದು ತಿಳಿದಿರಬೇಕಾಗುತ್ತದೆ. ಇಲ್ಲವಾದಲ್ಲಿ ಈ ರೀತಿಯ ಅಭ್ಯಾಸ ಆರೋಗ್ಯದ ಮೇಲೆ ಪರಿಣಾಮ ಬೀರುತ್ತದೆ. ಆಯುರ್ವೇದದ ಪ್ರಕಾರ, ಆಹಾರ ಸೇವಿಸುವ ಸಮಯ ಮತ್ತು ನೀರು ಕುಡಿಯುವ ಸಮಯವು ಜೀರ್ಣಕ್ರಿಯೆಗೆ (Digestion) ಬಹಳ ಮಹತ್ವದ್ದಾಗಿದ್ದು ಇದು ಸರಿಯಾಗಿ ಆಗದಿದ್ದಲ್ಲಿ ಹೊಟ್ಟೆ ಭಾರವಾಗುವುದು, ಅನಿಲ (ಗ್ಯಾಸ್) ಉಂಟಾಗುವುದು, ಅಜೀರ್ಣ, ಹೊಟ್ಟೆ ಉಬ್ಬುವುದು ಅಥವಾ ಆಸಿಡಿಟಿ ಮುಂತಾದ ಸಮಸ್ಯೆಗಳು ಕಾಣಿಸಬಹುದು. ಹಾಗಾದರೆ ಊಟ ಮಾಡುವಾಗ ಅಥವಾ ಊಟವಾದ ಎಷ್ಟು ಹೊತ್ತಿನ ನಂತರ ನೀರು ಕುಡಿಯಬೇಕು? ಎಂಬುದನ್ನು ಸ್ಟೋರಿ ಮೂಲಕ ತಿಳಿದುಕೊಳ್ಳಿ.
ಊಟದ ಜೊತೆ ಅಥವಾ ಎಷ್ಟು ಹೊತ್ತಿನ ನಂತರ ನೀರು ಕುಡಿಯಬೇಕು?
ಡಾ. ಆರ್.ಪಿ. ಪರಾಶರ್ ಎಂಬುವರು ಹೇಳುವ ಪ್ರಕಾರ, ಆಯುರ್ವೇದದಲ್ಲಿ ಊಟದ ಸಮಯದಲ್ಲಿ ಹೆಚ್ಚು ಪ್ರಮಾಣದಲ್ಲಿ ನೀರು ಕುಡಿಯುವುದನ್ನು ತಪ್ಪಿಸಲು ಸಲಹೆ ನೀಡಲಾಗಿದೆ. ಅಗತ್ಯವಿದ್ದರೆ ಊಟದ ಸಮಯದಲ್ಲಿ ಸ್ವಲ್ಪ ಪ್ರಮಾಣದಲ್ಲಿ ಬೆಚ್ಚಗಿನ ನೀರನ್ನು ಮಾತ್ರ ಕುಡಿಯಬಹುದು. ಸಾಮಾನ್ಯವಾಗಿ ಊಟ ಮಾಡಿದ ಸುಮಾರು 30 ನಿಮಿಷಗಳ ನಂತರ ನೀರು ಕುಡಿಯುವುದು ಉತ್ತಮ ಎಂದು ಪರಿಗಣಿಸಲಾಗಿದೆ. ಇದರಿಂದ ಜೀರ್ಣಕ್ರಿಯೆ ಸರಿಯಾಗಿ ನಡೆಯಲು ಸಹಾಯವಾಗುತ್ತದೆ. ಅದೇ ರೀತಿ, ಊಟಕ್ಕೆ ಸುಮಾರು 30 ನಿಮಿಷಗಳ ಮೊದಲು ನೀರು ಕುಡಿಯುವುದೂ ಕೂಡ ಜೀರ್ಣಕ್ರಿಯೆಗೆ ಒಳ್ಳೆಯದು ಎಂದು ಆಯುರ್ವೇದ ಹೇಳುತ್ತದೆ.
ಇದನ್ನೂ ಓದಿ: ರಾತ್ರಿ ಈ ಆಹಾರಗಳ ಸೇವನೆ ಮಾಡುವ ಅಭ್ಯಾಸವಿದ್ಯಾ? ಹಾಗಿದ್ರೆ ನೀವು ವಿಷ ಸೇವಿಸುತ್ತಿದ್ದೀರಿ ಎಂದರ್ಥ!
ಊಟ ಮಾಡಿದ ತಕ್ಷಣ ನೀರು ಕುಡಿಯುವುದರಿಂದಾಗುವ ಸಮಸ್ಯೆಗಳು:
ಸಾಮಾನ್ಯವಾಗಿ ಊಟ ಮಾಡಿದ ತಕ್ಷಣ ಹೆಚ್ಚಿನ ಪ್ರಮಾಣದಲ್ಲಿ ನೀರು ಕುಡಿಯುವುದರಿಂದ ಜೀರ್ಣಕ್ರಿಯೆ ಮೇಲೆ ಪರಿಣಾಮ ಬೀಳಬಹುದು. ಹೊಟ್ಟೆಯಲ್ಲಿ ಇರುವ ಜೀರ್ಣರಸಗಳು ನೀರಿನಿಂದ ತೆಳ್ಳಗಾಗುವ ಸಾಧ್ಯತೆ ಇದೆ. ಇದರಿಂದ ಆಹಾರ ಸರಿಯಾಗಿ ಜೀರ್ಣವಾಗಲು ಅಡಚಣೆ ಉಂಟಾಗಬಹುದು. ಇದರ ಪರಿಣಾಮವಾಗಿ ಕೆಲವರಿಗೆ ಹೊಟ್ಟೆ ಭಾರವಾಗುವುದು, ಗ್ಯಾಸ್, ಅಜೀರ್ಣ ಅಥವಾ ಆಸಿಡಿಟಿ ಸಮಸ್ಯೆಗಳು ಕಾಣಿಸಬಹುದು. ಕೆಲವರಿಗೆ ಊಟದ ನಂತರ ಸುಸ್ತು ಅಥವಾ ದಣಿದಂತಹ ಅನುಭವವಾಗಬಹುದು. ಆದರೆ ಪ್ರತಿಯೊಬ್ಬರ ಜೀರ್ಣಶಕ್ತಿ ವಿಭಿನ್ನವಾಗಿರುವುದರಿಂದ, ದೇಹದ ಸೂಚನೆಗಳನ್ನು ಗಮನಿಸಿ ಆಹಾರ ಮತ್ತು ನೀರಿನ ಅಭ್ಯಾಸಗಳನ್ನು ಸಮತೋಲನದಲ್ಲಿ ಇಡುವುದು ಅಗತ್ಯವಾಗಿದೆ.
ಜೀರ್ಣಕ್ರಿಯೆಗೆ ಸರಿಯಾಗಿ ಆಗಲು ಏನು ಮಾಡಬೇಕು?
ಉತ್ತಮ ಜೀರ್ಣಕ್ರಿಯೆಗೆ ನೀರು ಕುಡಿಯುವ ಸಮಯ ಮಾತ್ರವಲ್ಲದೆ ಸಂಪೂರ್ಣ ಜೀವನಶೈಲಿಯೂ ಮಹತ್ವದ್ದಾಗಿದೆ. ಆಹಾರವನ್ನು ನಿಧಾನವಾಗಿ ಮತ್ತು ಚೆನ್ನಾಗಿ ಜಗಿದು ತಿನ್ನುವುದು ಜೀರ್ಣಕ್ರಿಯೆಯನ್ನು ಸುಧಾರಿಸುತ್ತದೆ. ಇದರ ಜೊತೆಗೆ ಸಮತೋಲನಯುತ ಆಹಾರ, ಸಾಕಷ್ಟು ಪ್ರಮಾಣದಲ್ಲಿ ನೀರು ಕುಡಿಯುವುದು, ಸರಿಯಾದ ದಿನಚರಿ, ಪ್ರತಿದಿನ ಸ್ವಲ್ಪ ವ್ಯಾಯಾಮ ಮತ್ತು ಸರಿಯಾಗಿ ನಿದ್ರೆ ಮಾಡುವುದರಿಂದಲೂ ಕೂಡ ದೇಹದ ಆರೋಗ್ಯವನ್ನು ಕಾಪಾಡಲು ಸಹಾಯ ಮಾಡುತ್ತವೆ.
ಆರೋಗ್ಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ