ಎರಡು ಮಕ್ಕಳ ತಾಯಿ ಹಿಂದೆ ಬಿದ್ದ ಯುವಕ: ಕೊನೆಗೆ ಆಕೆಯನ್ನ ಕೊಂದೇ ಬಿಟ್ಟ

ಎರಡು ಮಕ್ಕಳ ತಾಯಿ ಹಿಂದೆ ಬಿದ್ದ ಯುವಕ: ಕೊನೆಗೆ ಆಕೆಯನ್ನ ಕೊಂದೇ ಬಿಟ್ಟ

ಬೆಂಗಳೂರು, ಮಾರ್ಚ್​ 19: ವಿವಾಹಿತ ಮಹಿಳೆಯನ್ನು ಯುವಕನೋರ್ವ ಡ್ಯಾಗರ್​ನಿಂದ ಇರಿದು ಬರ್ಬರವಾಗಿ ಹತ್ಯೆ ಮಾಡಿರುವಂತಹ ಘಟನೆ ಬೆಂಗಳೂರಿನ ಗಂಗೊಂಡನಹಳ್ಳಿಯಲ್ಲಿ ನಡೆದಿದೆ. ಫಿರ್ದೋಸ್ ಬಾನು ಕೊಲೆಯಾದ ಎರಡು ಮಕ್ಕಳ ತಾಯಿ. ಹಫೀಸ್​ ಎಂಬಾತನಿಂದ ಕೃತ್ಯವೆಸಲಾಗಿದೆ. ಆಟೋಗ್ಯಾರೇಜ್​ನಲ್ಲಿ ಕೆಲಸ ಮಾಡುತ್ತಿದ್ದ ಹಫೀಸ್​​, ಕೆಲ ತಿಂಗಳಿಂದ ಫೀರ್ದೋಸ್ ಬಾನು ಹಿಂದೆ ಬಿದ್ದಿದ್ದ. ತನ್ನನ್ನು ಲವ್ ಮಾಡುವಂತೆ ಕಾಟ ಕೊಡುತ್ತಿದ್ದ. ಹಫೀಸ್ ಕಾಟ ತಾಳಲಾರದೆ ಫಿರ್ದೋಸ್ ಪೊಲೀಸ್ ಠಾಣೆಗೆ ದೂರು ನೀಡಿದ್ದರು. ಹಫೀಸ್​ಗೆ ಪೊಲೀಸರು ಬುದ್ಧಿವಾದ ಹೇಳಿ ಎಚ್ಚರಿಕೆ ನೀಡಿ ಕಳಿಸಿದ್ದರು. ಕೆಲ ದಿನ ಸುಮ್ಮನಿದ್ದು ಮತ್ತೆ ಹಿಂದೆ ಬಿದ್ದಿದ್ದ. ಆದರೆ ಹಫೀಸ್​ನನ್ನು ಫೀರ್ದೋಸ್ ಅವಾಯ್ಡ್ ಮಾಡಿದ್ದಾರೆ. ಇಂದು ಮಧ್ಯಾಹ್ನ 2ಗಂಟೆಗೆ ಕೆಲಸ ಮಾಡುತ್ತಿದ್ದ ಸ್ಥಳಕ್ಕೆ ಬಂದಿದ್ದ ಹಫೀಸ್, ಈ ವೇಳೆ ಜಗಳ ತೆಗೆದು ಫಿರ್ದೋಸ್ ಬಾನುಗೆ ಇರಿದು ಕೊಲೆಗೈದು ಪರಾರಿಯಾಗಿದ್ದಾನೆ. ಸ್ಥಳಕ್ಕೆ ಚಂದ್ರಾಲೇಔಟ್ ಠಾಣೆ ಪೊಲೀಸರು ಭೇಟಿ ನೀಡಿ ಪರಿಶೀಲನೆ ಮಾಡಿದ್ದಾರೆ. ಕೊಲೆಯಾದ ವಿವಾಹಿತ ಮಹಿಳೆ ಸಂಬಂಧಿ ಘಟನೆ ಬಗ್ಗೆ ಮಾಹಿತಿ ನೀಡಿದ್ದಾರೆ. ವಿಡಿಯೋ ನೋಡಿ.

ಮತ್ತಷ್ಟು ವಿಡಿಯೋ ಸುದ್ದಿಗಳನ್ನು ನೋಡಲು ಇಲ್ಲಿ ಕ್ಲಿಕ್ ಮಾಡಿ.   

Source link

Leave a Reply

Your email address will not be published. Required fields are marked *