
ಬೆಂಗಳೂರು, ಫೆಬ್ರವರಿ 12: ಬಿಕ್ಲು ಶಿವ ಮರ್ಡರ್ ಕೇಸ್‌ನ ಬಲೆಯಲ್ಲಿ ಸಿಲುಕಿದ್ದ ಶಾಸಕ ಭೈರತಿ ಬಸವರಾಜ್ ಲಾಕ್ ಆಗಿದ್ದಾರೆ. ಸುಪ್ರೀಂಕೋರ್ಟ್‌ನಲ್ಲಿ ಜಾಮೀನು ನಿರಾಕರಣೆಯಾಗ್ತಿದ್ದಂತೆ ಬೇರೆ ದಾರಿಯಿಲ್ಲದೇ ಶರಣಾಗಲು ಬರ್ತಿದ್ದ ಬಿಜೆಪಿ ಶಾಸಕನನ್ನ ಬೆಂಗಳೂರಿನ ಕೆಂಪೇಗೌಡ ಏರ್‌ಪೋರ್ಟ್‌ನಲ್ಲಿ ವಶಕ್ಕೆ ಪಡೆಯಲಾಗಿದೆ. ಸದ್ಯ ದೇವನಹಳ್ಳಿ ಪೊಲೀಸರು ಭೈರತಿ ಬಸವರಾಜ್ರನ್ನು ಸಿಐಡಿ ಕಚೇರಿಗೆ ಕರೆದುಕೊಂಡು ಬಂದಿದ್ದು, ಅರೆಸ್ಟ್ ಪ್ರಕ್ರಿಯೆಗಳು ನಡೆದಿವೆ.
ಮತ್ತಷ್ಟು ವಿಡಿಯೋ ಸುದ್ದಿಗಳನ್ನು ನೋಡಲು ಇಲ್ಲಿ ಕ್ಲಿಕ್ ಮಾಡಿ.