ಐಪಿಎಲ್ ಇತಿಹಾಸದಲ್ಲೇ ದಾಖಲೆ: 15,286 ಕೋಟಿ ರೂ.ಗೆ ಮಾರಾಟವಾಯ್ತು ರಾಜಸ್ಥಾನ ರಾಯಲ್ಸ್!

ಐಪಿಎಲ್ ಇತಿಹಾಸದಲ್ಲೇ ದಾಖಲೆ: 15,286 ಕೋಟಿ ರೂ.ಗೆ ಮಾರಾಟವಾಯ್ತು ರಾಜಸ್ಥಾನ ರಾಯಲ್ಸ್!

ಇಂಡಿಯನ್ ಪ್ರೀಮಿಯರ್ ಲೀಗ್ (IPL) ಇತಿಹಾಸದಲ್ಲೇ ಅತ್ಯಂತ ದೊಡ್ಡ ಮೊತ್ತದ ಡೀಲ್ ಒಂದು ನಡೆದಿದೆ. ರಾಜಸ್ಥಾನ ರಾಯಲ್ಸ್ ತಂಡದ ಮಾಲೀಕತ್ವದ ರೇಸ್ ಕೊನೆಗೊಂಡಿದ್ದು, ಅಮೆರಿಕ ಮೂಲದ ಉದ್ಯಮಿ ಕಲ್ ಸೋಮನಿ (Kal Somani) ನೇತೃತ್ವದ ಒಕ್ಕೂಟವು ತಂಡವನ್ನು ಬರೋಬ್ಬರಿ 1.63 ಬಿಲಿಯನ್ ಡಾಲರ್ (ಸುಮಾರು 15,286 ಕೋಟಿ ರೂ.) ಮೌಲ್ಯಕ್ಕೆ ಖರೀದಿಸಿದೆ.ಈ ಒಪ್ಪಂದದೊಂದಿಗೆ ರಾಜಸ್ಥಾನ ರಾಯಲ್ಸ್ ಐಪಿಎಲ್ ಇತಿಹಾಸದಲ್ಲೇ ಅತ್ಯಂತ ದುಬಾರಿ ಫ್ರಾಂಚೈಸಿಯಾಗಿ ಹೊರಹೊಮ್ಮಿದೆ.

ಸೋಮನಿ ಅವರಿಗೆ ವಾಲ್‌ಮಾರ್ಟ್ ಕುಟುಂಬದ ರಾಬ್ ವಾಲ್ಟನ್ ಮತ್ತು ಎನ್‌ಎಫ್‌ಎಲ್ ತಂಡವಾದ ‘ಡೆಟ್ರಾಯಿಟ್ ಲಯನ್ಸ್’ ಮಾಲೀಕರಾದ ಹ್ಯಾಂಪ್ ಕುಟುಂಬ ಸಾಥ್ ನೀಡಿದೆ. ಫೋರ್ಡ್ ಮೋಟಾರ್ ಕಂಪನಿಯ ಸಹ-ಮಾಲೀಕರಾದ ಶೀಲಾ ಫೋರ್ಡ್ ಹ್ಯಾಂಪ್ ಕೂಡ ಈ ಒಕ್ಕೂಟದ ಭಾಗವಾಗಿದ್ದಾರೆ. ಈ ಮಾಲೀಕತ್ವದ ಬದಲಾವಣೆಯು ಐಪಿಎಲ್ 2026ರ ಸೀಸನ್ ನಂತರ ಅಧಿಕೃತವಾಗಿ ಜಾರಿಗೆ ಬರಲಿದೆ.

ಇಲ್ಲಿದೆ ನೋಡಿ ಎಕ್ಸ್​​ ಪೋಸ್ಟ್​;

ಗಾಯದ ಕಾರಣದಿಂದಾಗಿ ಇಂಗ್ಲೆಂಡ್‌ನ ಸ್ಟಾರ್ ಆಲ್‌ರೌಂಡರ್ ಸ್ಯಾಮ್ ಕರನ್ ಐಪಿಎಲ್ 2026 ರಿಂದ ಹೊರಬಿದ್ದಿದ್ದಾರೆ. ಇದು ತಂಡಕ್ಕೆ ದೊಡ್ಡ ಹಿನ್ನಡೆಯಾಗಿದೆ. ಕರನ್ ಅವರ ಬದಲಿಗೆ ಶ್ರೀಲಂಕಾದ ಟಿ20 ನಾಯಕ ದಾಸುನ್ ಶಾನಕ ಅವರನ್ನು 2 ಕೋಟಿ ರೂ. ಮೊತ್ತಕ್ಕೆ ರಾಜಸ್ಥಾನ ರಾಯಲ್ಸ್ ತಂಡಕ್ಕೆ ಸೇರಿಸಿಕೊಳ್ಳಲಾಗಿದೆ. ದಾಸುನ್ ಶನಕ 6 ಟೆಸ್ಟ್, 71 ಏಕದಿನ ಮತ್ತು 131 T20I ಗಳಲ್ಲಿ ಶ್ರೀಲಂಕಾವನ್ನು ಪ್ರತಿನಿಧಿಸಿದ್ದಾರೆ ಮತ್ತು ಅಂತರರಾಷ್ಟ್ರೀಯ ಕ್ರಿಕೆಟ್‌ನಲ್ಲಿ 3350 ಕ್ಕೂ ಹೆಚ್ಚು ಅಂತರರಾಷ್ಟ್ರೀಯ ರನ್ ಮತ್ತು 86 ವಿಕೆಟ್‌ಗಳನ್ನು ಗಳಿಸಿದ್ದಾರೆ. ಈ ಹಿಂದೆ ಇವರು ಗುಜರಾತ್ ಟೈಟಾನ್ಸ್ ಪರ ಆಡಿದ್ದರು.”ಸ್ಯಾಮ್ ಕರನ್ ಅವರನ್ನು ಕಳೆದುಕೊಂಡಿರುವುದು ಬೇಸರದ ಸಂಗತಿ. ಆದರೆ ದಾಸುನ್ ಶಾನಕ ಅವರಂತಹ ಅನುಭವಿ ಫಿನಿಶರ್ ತಂಡದ ಸಮತೋಲನವನ್ನು ಕಾಪಾಡಲಿದ್ದಾರೆ,” ಎಂದು ತಂಡದ ನಿರ್ದೇಶಕ ಕುಮಾರ್ ಸಂಗಕ್ಕಾರ ತಿಳಿಸಿದ್ದಾರೆ.

ಇದನ್ನೂ ಓದಿ: ಐಪಿಎಲ್ ಅಭಿಮಾನಿಗಳೇ ಗಮನಿಸಿ! ಪಂದ್ಯದ ದಿನ ಚಿನ್ನಸ್ವಾಮಿ ಸ್ಟೇಡಿಯಂ ಸುತ್ತಮುತ್ತ ಈ ರಸ್ತೆಗಳು ಬಂದ್!

ಐಪಿಎಲ್ 2025ರಲ್ಲಿ ಚೆನ್ನೈ ಸೂಪರ್ ಕಿಂಗ್ಸ್ (CSK) ತಂಡದಲ್ಲಿದ್ದ ಸ್ಯಾಮ್ ಕರನ್ ಮತ್ತು ರವೀಂದ್ರ ಜಡೇಜಾ ಅವರನ್ನು ಆರ್‌ಆರ್ ತಂಡವು ಪಡೆದುಕೊಂಡಿತ್ತು. ಪ್ರತಿಯಾಗಿ ಸಂಜು ಸ್ಯಾಮ್ಸನ್ ಅವರನ್ನು ಸಿಎಸ್‌ಕೆ ತಂಡಕ್ಕೆ ಟ್ರೇಡ್ ಮಾಡಲಾಗಿತ್ತು ಎಂಬುದು ಗಮನಾರ್ಹ.

ರಾಜ್ಯದ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

 

Source link

Leave a Reply

Your email address will not be published. Required fields are marked *