ಐಪಿಒಗೆ ಮುನ್ನ ಫ್ಲಿಪ್​ಕಾರ್ಟ್ ಗ್ರೂಪ್ ಸಿಎಫ್​ಒ ಸ್ಥಾನ ಬಿಟ್ಟ ಶ್ರೀರಾಮ್ ವೆಂಕಟರಾಮ್

ಐಪಿಒಗೆ ಮುನ್ನ ಫ್ಲಿಪ್​ಕಾರ್ಟ್ ಗ್ರೂಪ್ ಸಿಎಫ್​ಒ ಸ್ಥಾನ ಬಿಟ್ಟ ಶ್ರೀರಾಮ್ ವೆಂಕಟರಾಮ್

ನವದೆಹಲಿ, ಮಾರ್ಚ್ 20: ಅಮೆರಿಕದ ಎಂಎನ್​ಸಿ ಕಂಪನಿಯಾದ ವಾಲ್ಮಾರ್ಟ್​ನ ಒಡೆತನದ ಫ್ಲಿಪ್​ಕಾರ್ಟ್ ಸಂಸ್ಥೆಯ (Flipkart) ಎಕ್ಸಿಕ್ಯೂಟಿವ್ ಸ್ಥಾನಪಲ್ಲಟವಾಗುತ್ತಿದೆ. ಫ್ಲಿಪ್​ಕಾರ್ಟ್ ಗ್ರೂಪ್ ಚೀಫ್ ಫೈನಾನ್ಷಿಯಲ್ ಆಫೀಸರ್ ಸ್ಥಾನದಿಂದ ಶ್ರೀರಾಮ್ ವೆಂಕಟರಾಮ್ (Sriram Venkatram) ಅವರು ಕೆಳಗಿಳಿಯಲಿದ್ದಾರೆ. ಭಾರತದ ಅತಿದೊಡ್ಡ ಇಕಾಮರ್ಸ್ ಕಂಪನಿಗಳಲ್ಲಿ ಒಂದೆನಿಸಿರುವ ಫ್ಲಿಪ್​ಕಾರ್ಟ್ ಈ ಸಂಗತಿಯನ್ನು ಶುಕ್ರವಾರ ಪ್ರಕಟಿಸಿದೆ.

ಶ್ರೀರಾಮ್ ವೆಂಕಟರಾಮ್ ಅವರು 2015ರಲ್ಲಿ ಫ್ಲಿಪ್​ಕಾರ್ಟ್ ಸೇರಿದ್ದರು. ಹಲವು ಮುಂಚೂಣಿ ಹುದ್ದೆಗಳನ್ನು ನಿಭಾಯಿಸುತ್ತಾ ಹೋಗಿದ್ದ ಅವರು 2018ರಲ್ಲಿ ಗ್ರೂಪ್​ನ ಸಿಎಫ್​ಒ ಆಗಿ ಕಂಪನಿಯ ಹಣಕಾಸು ವಿಭಾಗದ ಚುಕ್ಕಾಣಿ ಹಿಡಿದು ಜವಾಬ್ದಾರಿ ನಿಭಾಯಿಸಿದ್ದರು.

ಇದನ್ನೂ ಓದಿ: ಶುಕ್ರವಾರ ಗರಿಗೆದರಿದ ಷೇರು ಬಜಾರು; ನಿನ್ನೆ ನೆಲಕಚ್ಚಿದ್ದ ಮಾರುಕಟ್ಟೆ ಇವತ್ತು ಚೇತರಿಸಿಕೊಂಡಿದ್ದು ಯಾಕೆ?

ರವಿ ಅಯ್ಯರ್ ಅವರು ಫ್ಲಿಪ್​ಕಾರ್ಟ್​ನ ನೂತನ ಸಿಎಫ್​ಒ

ಫ್ಲಿಪ್​ಕಾರ್ಟ್​ನ ಮಾರ್ಕೆಟ್​ಪ್ಲೇಸ್ ವಿಭಾಗದ ಸಿಎಫ್​ಒ ಆಗಿರುವ ರವಿ ಅಯ್ಯರ್ ಅವರು ಗ್ರೂಪ್ ಸಿಎಫ್​ಒ ಆಗಿ ಶ್ರೀರಾಮ್ ವೆಂಕಟರಾಮ್ ಸ್ಥಾನವನ್ನು ತುಂಬಲಿದ್ದಾರೆ. ಅಯ್ಯರ್ ಅವರು 2014ರಿಂದಲೂ ಫ್ಲಿಪ್​ಕಾರ್ಟ್​ನಲ್ಲಿದ್ದಾರೆ. ಇತ್ತೀಚಿನ ಕೆಲ ವರ್ಷಗಳಿಂದ ಇವರನ್ನು ಉನ್ನತ ಹುದ್ದೆಗೆ ಅಣಿಗೊಳಿಸುವ ಕೆಲಸ ಕಂಪನಿಯಲ್ಲಿ ನಡೆದಿದೆ. ಆ ನಿಟ್ಟಿನಲ್ಲಿ ಮಾರ್ಕೆಟ್​ಪ್ಲೇಸ್ ಬ್ಯುಸಿನೆಸ್​ನ ಸಿಎಫ್​ಒ ಆಗಿ ಅವರಿಗೆ ಬಡ್ತಿ ಕೊಡಲಾಗಿತ್ತು. ಗ್ರೂಪ್ ಸಿಎಫ್​ಒ ಆಗಲು ಬೇಕಾದ ಪ್ರತ್ಯಕ್ಷ ಅನುಭವ ಗಳಿಸಲು ಅವರಿಗೆ ಆ ಸ್ಥಾನ ಕೊಡಲಾಗಿದ್ದಿರಬಹುದು.

ಅದೇ ವೇಳೆ, ಶ್ರೀರಾಮ್ ವೆಂಕಟರಾಮ್ ಅವರೂ ಕೂಡ ಆರು ತಿಂಗಳಿಂದ ಕಂಪನಿಯ ಕಾರ್ಯಗಳಲ್ಲಿ ಮತ್ತು ನಿರ್ಧಾರಗಳಲ್ಲಿ ತೀರಾ ಸಕ್ರಿಯವಾಗಿ ತೊಡಗಿಸಿಕೊಳ್ಳುವುದನ್ನು ಕಡಿಮೆಗೊಳಿಸಿದ್ದರು. ರವಿ ಅಯ್ಯರ್ ಅವರನ್ನು ಆ ಸ್ಥಾನಕ್ಕೆ ಅಣಿಗೊಳಿಸುವ ಪ್ರಯತ್ನ ಅದಾಗಿದ್ದಿರಬಹುದು.

ಇದನ್ನೂ ಓದಿ: ಪ್ರೀಮಿಯಮ್ ಪೆಟ್ರೋಲ್ ಬೆಲೆ 2 ರೂ ಹೆಚ್ಚಳ; ಮಾಮೂಲಿ ಪೆಟ್ರೋಲ್ ದರದಲ್ಲಿ ಇಲ್ಲ ಬದಲಾವಣೆ

ಬೆಂಗಳೂರಿನಲ್ಲಿ ಮುಖ್ಯಕಚೇರಿ ಹೊಂದಿರುವ ಫ್ಲಿಪ್​ಕಾರ್ಟ್ ಭಾರತದ ಮುಖ್ಯ ಇಕಾಮರ್ಸ್ ಕಂಪನಿ. ಬನ್ಸಾಲ್ ಸಹೋದರರು ಸ್ಥಾಪಿಸಿದ ಕಂಪನಿ ಇದು. ಅಮೆರಿಕದ ರೀಟೇಲ್ ಮಾರಾಟ ಕಂಪನಿಯಾದ ವಾಲ್ಮಾರ್ಟ್ ಫ್ಲಿಪ್​ಕಾರ್ಟ್ ಅನ್ನು ಖರೀದಿಸಿತ್ತು. ಸದ್ಯ ಕಲ್ಯಾಣ್ ಕೃಷ್ಣಮೂರ್ತಿ ಅವರು ಗ್ರೂಪ್ ಸಿಇಒ ಆಗಿದ್ದಾರೆ. ಫ್ಲಿಪ್​ಕಾರ್ಟ್ ಈ ವರ್ಷ ಐಪಿಒ ಆಫರ್ ಮಾಡುತ್ತಿದ್ದು ಷೇರು ಮಾರುಕಟ್ಟೆ ಪ್ರವೇಶಿಸಲು ಸಜ್ಜಾಗಿದೆ.

ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

Source link

Leave a Reply

Your email address will not be published. Required fields are marked *