Headlines

ಕಂಡ ಕಂಡಲ್ಲಿ ಪಾನ್ ಮಸಾಲ ಉಗುಳಿದರೆ 12 ಸಾವಿರ ರೂ. ದಂಡ – Kannada News | London Residents Call for Action Over Spit Stains on City Streets

ಲಂಡನ್, ಜನವರಿ 07: ಭಾರತದ ಬಹುತೇಕ ಬೀದಿಗಳಲ್ಲಿ ಅಲ್ಲಲ್ಲಿ ಪಾನ್ ಮಸಾಲ ಉಗುಳಿರುವ ಕಲೆಗಳು ಕಾಣುತ್ತವೆ. ಆದರೆ ನಮ್ಮ ಜನರು ಲಂಡನ್​ಗೆ ಹೋಗಿ ಅಲ್ಲಿಯೂ ಅದೇ ಕೆಲಸ ಮಾಡುತ್ತಿದ್ದು, ಅಲ್ಲಿನ ಜನರು ಬೇಸರ ವ್ಯಕ್ತಪಡಿಸಿದ್ದಾರೆ, ಅಷ್ಟೇ ಅಲ್ಲದೆ 12 ಸಾವಿರ ರೂ. ವರೆಗೆ ದಂಡ(Penalty) ವಿದಿಸುವಂತೆ ಮನವಿ ಮಾಡಿದ್ದಾರೆ.

ಅವರು ಹಂಚಿಕೊಂಡಿರುವ ವಿಡಿಯೋ ಹಾಗೂ ಫೋಟೊದಲ್ಲಿ ಡಸ್ಟ್​ಬಿನ್ ಡಬ್ಬಿಯಿಂದ ಹಿಡಿದು ಪಾದಚಾರಿ ಮಾರ್ಗಗಳು, ಗೋಡೆಗಳು, ರಸ್ತೆಯ ಪಕ್ಕದಲ್ಲೆಲ್ಲಾ ಪಾನ್ ಮಸಾಲವನ್ನು ಉಗುಳಿರುವುದನ್ನು ಕಾಣಬಹುದು. ಅವುಗಳನ್ನು ಸ್ವಚ್ಛಗೊಳಿಸಲು ಸಾಕಷ್ಟು ಹಣವನ್ನು ಖರ್ಚು ಮಾಡಲಾಗುತ್ತಿದೆ. ಲಂಡನ್‌ನಲ್ಲಿ ವಾಸಿಸುತ್ತಿರುವ ಭಾರತೀಯರೊಬ್ಬರು ಹ್ಯಾರೋ ಮತ್ತು ವೆಂಬ್ಲಿಯ ಹಲವಾರು ಪ್ರದೇಶಗಳ ಈ ಪರಿಸ್ಥಿತಿ ಕುರಿತು ಮಾಹಿತಿ ಹಂಚಿಕೊಂಡಿದ್ದರು.

ಜನರು ಪಾನ್ ಉಗುಳುವುದರಿಂದಾಗಿ ರಸ್ತೆಗಳು ಕೆಂಪು ಬಣ್ಣಕ್ಕೆ ತಿರುಗಿವೆ. ಈ ಪ್ರದೇಶಗಳನ್ನು ಸ್ವಚ್ಛವಾಗಿಡುವ ಅಗತ್ಯತೆಯ ಬಗ್ಗೆ ಮಾತನಾಡಿದ್ದರು. ಸ್ಥಳೀಯ ಪಾನ್ ಅಂಗಡಿ ಮಾಲೀಕರು ಸಹ ಕಳವಳ ವ್ಯಕ್ತಪಡಿಸಿದ್ದು, ಕೆಲವು ಗ್ರಾಹಕರು ಅಜಾಗರೂಕತೆಯಿಂದ ಉಗುಳುವುದು ತಮ್ಮ ವ್ಯವಹಾರದ ಮೇಲೆ ಪರಿಣಾಮ ಬೀರುತ್ತದೆ ಎಂದಿದ್ದಾರೆ.

ಮತ್ತಷ್ಟು ಓದಿ: ಒಂದೇ ಬೈಕ್‌ನಲ್ಲಿ 5 ಜನ ಸವಾರಿ! 31 ಸಾವಿರ ರೂ. ದಂಡ ಹಾಕಿದ ಪೊಲೀಸರು

ಮೊದಲ ಅಪರಾಧಕ್ಕೆ 1000 ಪೌಂಡ್‌ಗಳು ಮತ್ತು ಎರಡನೇ ಅಪರಾಧಕ್ಕೆ 5000 ಪೌಂಡ್‌ಗಳ ದಂಡ ವಿಧಿಸಿ ಎಂದು ಸ್ಥಳೀಯರು ಮನವಿ ಮಾಡಿದ್ದಾರೆ. ಮೂರನೆಯದು 10 ಸಾವಿರ + 1 ವಾರ ಜೈಲು ಶಿಕ್ಷೆ, ಇಂಗ್ಲೆಂಡ್​ನಲ್ಲಿ ಇದು ಜಾರಿಯಾದರೆ ಮುಂದೊಂದು ದಿನ ಭಾರತದಲ್ಲೂ ಇಂಥಾ ನಿಯಮಗಳನ್ನು ಜಾರಿಗೆ ತರಬಹುದು. ಬ್ರೆಂಟ್ ಕೌನ್ಸಿಲ್ ಈಗ ಜನರಿಗೆ ಕಲೆಗಳಿಗಾಗಿ ನೂರು ಪೌಂಡ್ ದಂಡ ವಿಧಿಸುತ್ತಿದೆ.

ತೆರಿಗೆದಾರರಾದ ನಾವು ಈ ಕಲೆಗಳನ್ನು ತೆಗೆದುಹಾಕಲು ಸಾವಿರಾರು ಪೌಂಡ್ ಹಣವನ್ನು ಪಾವತಿಸುತ್ತಿದ್ದೇವೆ. ಗುಟ್ಕಾ-ಪಾನ್ ಮಸಾಲ ರಸ್ತೆಗಳಿಗೆ ಸಾಂಕ್ರಾಮಿಕ ರೋಗದಂತಾಗಿದೆ. ಬಾಲಿವುಡ್ ನಟರು ಅಂತಹ ಉತ್ಪನ್ನಗಳನ್ನು ಜಾಹೀರಾತು ಮಾಡಲು ನಾಚಿಕೆಪಡಬೇಕು ಎನ್ನು ಶೀರ್ಷಿಕೆಯಡಿ ಪೋಸ್ಟ್​ ಮಾಡಿದ್ದಾರೆ.

ಉಗುಳುವುದು ಸಾಮಾನ್ಯವಾಗಿ ಕಂಡುಬರುವ ಮೂರು ಪ್ರದೇಶಗಳಲ್ಲಿ ಅಧಿಕಾರಿಗಳು ಬ್ಯಾನರ್‌ಗಳನ್ನು ಅಳವಡಿಸಿದ್ದಾರೆ ಮತ್ತು ಈ ಸ್ಥಳಗಳಲ್ಲಿ ಅಧಿಕಾರಿಗಳು ಗಸ್ತು ತಿರುಗಲಿದ್ದಾರೆ. ಪಾನ್ ಉಗುಳುವುದು ಕಂಡುಬಂದರೆ ಜನರು 100 ಪೌಂಡ್​ಗಳು(ಸುಮಾರು ರೂ. 12,000) ವರೆಗೆ ದಂಡ ವಿಧಿಸಬಹುದು.

ಅಂತಾರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ 

Source link

Leave a Reply

Your email address will not be published. Required fields are marked *