ಕತಾರ್ ಅನಿಲ ಘಟಕದ ಮೇಲಿನ ಇರಾನ್ ಘಾತಕ ದಾಳಿಯಿಂದ ಭಾರತಕ್ಕೆ ಇನ್ನೆಷ್ಟು ವರ್ಷ ಕಾಡಲಿದೆ ಅನಿಲ ಸಮಸ್ಯೆ

ಕತಾರ್ ಅನಿಲ ಘಟಕದ ಮೇಲಿನ ಇರಾನ್ ಘಾತಕ ದಾಳಿಯಿಂದ ಭಾರತಕ್ಕೆ ಇನ್ನೆಷ್ಟು ವರ್ಷ ಕಾಡಲಿದೆ ಅನಿಲ ಸಮಸ್ಯೆ

ದೋಹಾ,ಮಾರ್ಚ್ 20: ಕತಾರ್​​ನ ನೈಸರ್ಗಿಕ ಅನಿಲ ಘಟಕದ ಮೇಲೆ ಇರಾನ್(Iran) ನಡೆಸಿದ ಘಾತಕ ದಾಳಿಯಿಂದ ವಿಶ್ವದ ಐದು ಬಲಿಷ್ಠ ರಾಷ್ಟ್ರಗಳಿಗೆ ಮುಂದನ ಐದು ವರ್ಷಗಳವರೆಗೆ ಅನಿಲ ಪೂರೈಕೆಯಲ್ಲಿ ಸಮಸ್ಯೆಯಾಗುವ ಸಾಧ್ಯತೆ ಇದೆ. ಈಗ ಬರುತ್ತಿರುವ ವರದಿಗಳ ಪ್ರಕಾರ, ಕತಾರ್​ನಿಂದ ಭಾರತಕ್ಕೆ ರವಾನೆಯಾಗುತ್ತಿರುವ ಅನಿಲಕ್ಕೂ ಸಮಸ್ಯೆಯಾಗುವ ಸಾಧ್ಯತೆ ಇದೆ. ವಿಶ್ವದ ಶೇ.17ರಷ್ಟು ನೈಸಗರ್ಗಕ ಅನಿಲ ಪೂರೈಕೆಯು ಕತಾರ್​​ನ ಇದೊಂದೇ ಘಟಕದಿಂದ ಆಗುತ್ತದೆ.

ವಿಶ್ವದ ಅತ್ಯಂತ ದೊಡ್ಡ ನೈಸಿರ್ಗಿಕ ಅನಿಲ ಘಟಕ ಇದಾಗಿದೆ, ಇರಾನ್ ದಾಳಿಯಿಂದ ಕತಾರ್​ಗೆ ವಾರ್ಷಿಕ ಸುಮಾರು 20 ಬಿಲಿಯನ್ ಡಾಲರ್​​ನಷ್ಟು ಆದಾಯ ನಷ್ಟವಾಗುವ ಸಾಧ್ಯತೆ ಇದೆ. ಹಾಗೆಯೇ ವಾರ್ಷಿಕವಾಗಿ ಸುಮಾರು 12.8 ಮಿಲಿಯನ್ ಟನ್ ಎಲ್​ಎನ್​ಜಿ ಪೂರೈಕೆಯಲ್ಲಿ ಮುಂದಿನ ಮೂರರಿಂದ ಐದು ವರ್ಷಗಳವರೆಗೆ ವ್ಯತ್ಯಯಾಗಬಹುದು ಎಂದು ಅಂದಾಜಿಸಲಾಗಿದೆ.

ಇದನ್ನು ಕತಾರ್​ನ ಇಂಧನ ಇಲಾಖೆಯೇ ಖಾತ್ರಿಪಡಿಸಿದೆ, ಇದರಿಂದ ಭಾರತ, ಚೀನಾ ಸೇರಿದಂತೆ ಕೆಲವು ಏಷ್ಯಾ ಹಾಗೂ ಐರೋಪ್ಯ ರಾಷ್ಟ್ರಗಳು ಸಮಸ್ಯೆಗೆ ಈಡಾಗಬಹುದು. ಇರಾನ್​ನೊಂದಿಗೆ ಕತಾರ್ ಉತ್ತಮ ಸಂಬಂಧವನ್ನೇ ಹೊಂದಿತ್ತು. ಹೀಗಾಗಿ ಕನಸಲ್ಲಿಯೂ ಕತಾರ್​ನ ಅಂತಹ ಪ್ರಮುಖ ಘಟಕಗಳ ಮೇಲೆ ಇರಾನ್ ದಾಳಿ ಮಾಡಲಿದೆ ಎಂದು ಅಲ್ಲಿನ ಆಡಳಿತ ವ್ಯವಸ್ಥೆ ಅಂದಾಜು ಮಾಡಿರಲಿಲ್ಲ. ಹೀಗಾಗಿ ಮುಸ್ಲಿಂ ರಾಷ್ಟ್ರವೊಂದು ಈ ರೀತಿ ದಾಳಿ ಮಾಡಿದೆ ಎಂದು ಕತಾರ್ ಆಕ್ರೋಶಗೊಂಡಿದೆ. ಆದರೆ ಈ ಕೃತ್ಯವು ವಿಶ್ವದ ಪ್ರಮುಖ ರಾಷ್ಟ್ರಗಳಿಗೆ ದುಃಸ್ವಪ್ನವಾಗಿ ಕಾಡಿದೆ.

ಇಟಲಿ, ಬೆಲ್ಜಿಯಂ, ದಕ್ಷಿಣ ಕೊರಿಯಾ ಹಾಗೂ ಚೀನಾಕ್ಕೆ ಅನಿಲ ಪೂರೈಕೆ ಮಾಡುತ್ತಿದ್ದ ಘಟಕದ ಎರಡು ಟ್ರೇನ್​ಗಳ ಮೇಲೆ ಇರಾನ್ ದಾಳಿ ಮಾಡಿದೆ. ಇದರಿಂದ ಈ ದೇಶಗಳೊಂದಿಗೆ ದೀರ್ಘಾವಧಿಗೆ ಮಾಡಿಕೊಂಡಿದ್ದ ಅನಿಲ ಪೂರೈಕೆ ಒಪ್ಪಂದಗಳ ಮೇಲೆ ಪ್ರತಿಕೂಲ ಪರಿಣಾಮ ಬೀರಿದೆ. ಎಲ್​ಎನ್​ಜಿ ಟ್ರೇನ್ ಎಸ್​4 ಮೇಲೆ ದಾಳಿಯು ಹಾನಿ ಮಾಡಿರುವ ಪರಿಣಾಮದಿಂದ ಇಟಲಿ ಹಾಗೂ ಬೆಲ್ಜಿಯಂಗೆ ಆಗುವ ಅನಿಲ ಪೂರೈಕೆಗಳು ಭಾಹಶಃ ಸ್ಥಗಿತಗೊಂಡಿದೆ.

ಮತ್ತಷ್ಟು ಓದಿ: ಅಮೆರಿಕದ ಎಫ್-35 ಫೈಟರ್ ಜೆಟ್ ಮೇಲೆ ಇರಾನ್ ದಾಳಿ; ಇಲ್ಲಿದೆ ವಿಡಿಯೋ

ಇದು ಸರಿಯಾಗಲು ವರ್ಷಗಳೇ ಬೇಕಾಗಬಹುದು. ಎಸ್​6 ಟ್ರೇನ್​ನಿಂದ ದಕ್ಷಿಣ ಕೊರಿಯಾ ಹಾಗೂ ಚೀನಾಕ್ಕೆ ಅನಿಲ ಪೂರೈಕೆಯಾಗುತ್ತಿತ್ತು. ಒಂದೆಡೆ ಈ ದಾಳಿಯಿಂದ ವಿಶ್ವದ ಇತರೆ ರಾಷ್ಟ್ರಗಳಗೆ ಸಮಸ್ಯೆಯಾಗುವುದರ ಜತೆಗೆ ಕತಾರ್​ನ್ನು 10ರಿಂದ 20 ವರ್ಷಗಳ ಹಿಂದಕ್ಕೆ ಕೊಂಡೊಯ್ದಿದೆ ಎಂದು ಕತಾರ್​​ನ ಇಂಧನ ಸಚಿವ ಅಲ್ ಕಾಬಿ ಹೇಳಿದ್ದಾರೆ. ಇರಾನ್ ದಾಳಿಯಿಂದ ಹಾನಿಯಾಗಿರುವ ಘಟಕದ ಪುನರ್​ನಿರ್ಮಾಣಕ್ಕೆ 26 ಬಿಲಿಯನ್ ಡಾಲರ್ ಬೇಕಾಗಬಹುದು ಎಂದು ಕತಾರ್ ಹೇಳಿದೆ.

ಈ ದಾಳಿಯಿಂದ ಕತಾರ್​ನ ಒಟ್ಟಾರೆ ರಫ್ತಿನಲ್ಲಿ ಶೇ.24ರಷ್ಟು ಕುಸಿತವಾಗಿದೆ. ಘಟಕದ ಮೇಲಿನ ಹಾನಿಯಿಂದ ದೀರ್ಘಾವಧಿಯಲ್ಲಿ ಭಾರತದ ಮೇಲೆ ಪ್ರತಿಕೂಲ ಪರಿಣಾಮವಾಗದಿದ್ದರೂ ಅಲ್ಪಾವಧಿಯಲ್ಲಿ ಅನಿಲ ಪೂರೈಕೆಯಲ್ಲಿ ವ್ಯತ್ಯಯವಾಗಬಹುದು. ಏಕೆಂದರೆ ಭಾರತದ ಒಟ್ಟಾರೆ ಎಲ್​ಎನ್​ಜಿ ಆಮದಿನಲ್ಲಿ ಕತಾರ್​ನ ಭಾಗವು ಶೇ.20ರಷ್ಟಿದೆ.

 

ಅಂತಾರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ 

Source link

Leave a Reply

Your email address will not be published. Required fields are marked *