ದೇವನಹಳ್ಳಿ, ಫೆಬ್ರವರಿ 12: ಬೆಂಗಳೂರಿನ ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಕಾಫಿ ಬಿಲ್ ಕೇಳಿದ್ದಕ್ಕೆ ಮೂವರು ಪೊಲೀಸ್ ಕಾನ್‌ಸ್ಟೆಬಲ್‌ಗಳು ಕ್ಯಾಂಟೀನ್ ಸಿಬ್ಬಂದಿ ಮೇಲೆ ಹಲ್ಲೆ ಮಾಡಿರುವ ಘಟನೆ ನಡೆದಿದೆ. ವಿಮಾನ ನಿಲ್ದಾಣದ ಆಲ್ಫಾ ಕ್ಯಾಂಟೀನ್‌ನಲ್ಲಿ ರಾತ್ರಿ ಬೀಟ್ ಡ್ಯೂಟಿಯಲ್ಲಿದ್ದ ಗಂಗರಾಜು, ಬಾಳಪ್ಪ ಮತ್ತು ಕುಮಾರ್ ಎಂಬ ಮೂವರು ಪೊಲೀಸರು ಕಾಫಿ ಕುಡಿದ ನಂತರ ಕ್ಯಾಂಟೀನ್ ಸಿಬ್ಬಂದಿ ಬಿಲ್ ಕೇಳಿದ್ದಾರೆ. ಇದರಿಂದ ಸಿಟ್ಟಿಗೆದ್ದ ಪೊಲೀಸರು, ನಾವು ಪೊಲೀಸರು, ನಮಗೆ ಬಿಲ್ ಏಕೆ ಎಂದು ದರ್ಪದಿಂದ ವರ್ತಿಸಿದ್ದಾರೆ. ಪೊಲೀಸರು ಕ್ಯಾಂಟೀನ್ ಸಿಬ್ಬಂದಿಯನ್ನು ಅವಾಚ್ಯ ಶಬ್ದಗಳಿಂದ ನಿಂದಿಸಿ, ಹಲ್ಲೆ ನಡೆಸಿದ್ದಾರೆ. ಸಿಸಿಟಿವಿ ಕ್ಯಾಮೆರಾದಲ್ಲಿ ಈ ದೃಶ್ಯ ಸೆರೆಯಾಗಿದೆ.
ಮತ್ತಷ್ಟು ವಿಡಿಯೋ ಸುದ್ದಿಗಳನ್ನು ನೋಡಲು ಇಲ್ಲಿ ಕ್ಲಿಕ್ ಮಾಡಿ.