
ನವದೆಹಲಿ, ಏಪ್ರಿಲ್ 9: ಅಲ್ಲಿ ಸಾಲಾಗಿ ಕಾರುಗಳನ್ನು ನಿಲ್ಲಿಸಲಾಗಿತ್ತು. ಅವುಗಳ ಹಿಂದೆ ಎತ್ತರವಾದ ಕಾಂಪೌಂಡ್ ಇತ್ತು. ಶಿಥಿಲವಾಗಿದ್ದ ಆ ಕಾಂಪೌಂಡ್ ಗೋಡೆ ಇನ್ನೇನು ಬೀಳುವುದರಲ್ಲಿತ್ತು. ಇದರ ಸುಳಿವು ಸಿಕ್ಕೊಡನೆ ಮಹಿಳೆ ಓಡಿಹೋಗಿ ತನ್ನ ಕಾರನ್ನು ಆ ಸ್ಥಳದಿಂದ ತೆಗೆದಿದ್ದಾರೆ. ಆಕೆ ಕಾರನ್ನು ತೆಗೆದ ಕೆಲವೇ ಸೆಕೆಂಡುಗಳಲ್ಲಿ ಆ ಗೋಡೆ ಮಗುಚಿಬಿದ್ದಿದೆ. ಅಲ್ಲಿದ್ದ ಕಾರುಗಳೆಲ್ಲ ಆ ಗೋಡೆಯಡಿ ಹೂತುಹೋಗಿವೆ. ಆ ಮಹಿಳೆ ತನ್ನ ಪ್ರಾಣವನ್ನೂ ಲೆಕ್ಕಿಸದೆ ಕಾರನ್ನು ತೆಗೆಯಲು ಓಡಿರುವ ವಿಡಿಯೋ ವೈರಲ್ ಆಗಿದೆ. ಈ ಘಟನೆ ನಡೆದಿದ್ದು ಎಲ್ಲಿ ಎಂಬುದು ತಿಳಿದುಬಂದಿಲ್ಲ.
ಇನ್ನಷ್ಟು ರಾಷ್ಟ್ರೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ