ನೆಲಮಂಗಲ, ಫೆಬ್ರವರಿ 05: ಬೆಂಗಳೂರಲ್ಲಿ ರೋಡ್ ರೇಜ್ ಪ್ರಕರಣಗಳು ನಿರಂತರವಾಗಿ ಹೆಚ್ಚುತ್ತಿದ್ದು, ಸಣ್ಣಪುಟ್ಟ ಕಾರಣಗಳಿಗೂ ಸವಾರರು ರೌಡಿಸಂ ಪ್ರದರ್ಶಿಸುತ್ತಿದ್ದಾರೆ. ನೆಲಮಂಗಲದಿಂದ ಕೆಲಸಕ್ಕೆ ತೆರಳುತ್ತಿದ್ದ ಆದಿತ್ಯ ಎಂಬುವವರ ಕಾರಿಗೆ ಮಾದಾವರ ಜಂಕ್ಷನ್ ಬಳಿ ಬೈಕ್ ಸವಾರನೊಬ್ಬ ಅಡ್ಡ ಹಾಕಿ ಕಿರಿಕ್ ತೆಗೆದಿದ್ದಾನೆ. ಬೈಕ್ ಸವಾರನು ಕಾರಿನ ಮಿರರ್ ಅನ್ನು ಮುರಿದು, ಆದಿತ್ಯ ಅವರನ್ನು ನಿಂದಿಸಿ ಬೆದರಿಕೆಯನ್ನೂ ಹಾಕಿದ್ದಾನೆ. ಈ ಘಟನೆ ಕುರಿತು ಮಾದನಾಯಕನಹಳ್ಳಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಕಾರ್ ಚಾಲಕನ ಮೊಬೈಲ್ನಲ್ಲಿ ಘಟನೆ ರೆಕಾರ್ಡ್ ಆಗಿದೆ.
ಮತ್ತಷ್ಟು ವಿಡಿಯೋ ನೋಡಲು ಇಲ್ಲಿ ಕ್ಲಿಕ್ ಮಾಡಿ.