Headlines

ಕಿಲ್ಲರ್ ಬಿಎಂಟಿಸಿಗೆ ಇನ್ನೆಷ್ಟು ಬಲಿ ಬೇಕು?: ಯುವತಿ ತಲೆ ಮೇಲೆ ಹರಿದ BMTC ಎಲೆಕ್ಟ್ರಿಕ್ ಬಸ್ – Kannada News | Bengaluru K.R. Puram Tragedy: BMTC Bus Negligence Kills Hanna on Bike

ಬೆಂಗಳೂರು, ಫೆ.7: ಬೆಂಗಳೂರಿನ ಕೆ.ಆರ್. ಪುರಂ ಮೆಟ್ರೋ ನಿಲ್ದಾಣದ ಬಳಿ ಭೀಕರ ರಸ್ತೆ ಅಪಘಾತ ನಡೆದಿದೆ. ಬೆಳಿಗ್ಗೆ 9:30 ರಿಂದ 10 ಗಂಟೆಯ ಸುಮಾರಿಗೆ ಈ ದುರಂತ ಸಂಭವಿಸಿದೆ. ಹನ್ನಾ ಅವರು ತಮ್ಮ ಸ್ನೇಹಿತನ ಜೊತೆ ಬೈಕ್‌ನಲ್ಲಿ ತೆರಳುತ್ತಿದ್ದಾಗ, ಕೆ.ಆರ್. ಪುರಂ ರೈಲ್ವೆ ನಿಲ್ದಾಣ ಮತ್ತು ಮೆಟ್ರೋ ನಿಲ್ದಾಣದ ಸಮೀಪದ ರಸ್ತೆಯಲ್ಲಿ BMTC ಎಲೆಕ್ಟ್ರಿಕ್ ಬಸ್ (ಮಾರ್ಗ ಸಂಖ್ಯೆ 500/D) ಹಿಂಬದಿಯಿಂದ ಡಿಕ್ಕಿ ಹೊಡೆದಿದೆ. ಡಿಕ್ಕಿ ಹೊಡೆದ ರಭಸಕ್ಕೆ ಬೈಕ್ ನಿಯಂತ್ರಣ ಕಳೆದುಕೊಂಡು ಹಿಂಬದಿ ಕುಳಿತಿದ್ದ ಹನ್ನಾ ನೇರವಾಗಿ ಬಸ್ಸಿನ ಮುಂಭಾಗದ ಚಕ್ರದ ಅಡಿ ಸಿಲುಕಿದ್ದಾರೆ. ಚಾಲಕನ ಅತಿ ವೇಗ ಮತ್ತು ಅಜಾಗರೂಕತೆಯೇ ಈ ಸಾವಿಗೆ ನೇರ ಕಾರಣ ಎಂದು ಪ್ರತ್ಯಕ್ಷದರ್ಶಿಗಳು ಹೇಳಿದ್ದಾರೆ. ಅಪಘಾತದ ನಂತರ ಹನ್ನಾ ಅವರನ್ನು ತಕ್ಷಣವೇ ಕೆ.ಆರ್. ಪುರಂನ ಸರ್ಕಾರಿ ಆಸ್ಪತ್ರೆಗೆ ಕರೆದೊಯ್ಯಲಾಯಿತು. ಆದರೆ ತಲೆಗೆ ಆದ ತೀವ್ರ ಪೆಟ್ಟು ಮತ್ತು ರಕ್ತಸ್ರಾವದಿಂದಾಗಿ ಅವರು ಚಿಕಿತ್ಸೆ ಫಲಕಾರಿಯಾಗದೆ ಕೊನೆಯುಸಿರೆಳೆದಿದ್ದಾರೆ.

ವಿಡಿಯೋ ಸುದ್ದಿಗಳು ಓದಲು ಇಲ್ಲಿ ಕ್ಲಿಕ್ ಮಾಡಿ

ವರದಿ: ನಟರಾಜ್ ಮೆಟ್ರೋ

Source link

Leave a Reply

Your email address will not be published. Required fields are marked *