‘ಕೆಡಿ’ ಸಿನಿಮಾನಲ್ಲಿ ಕಿಚ್ಚ ಸುದೀಪ್: ಕಾಲ ಭೈವರವ ಅವತಾರ ರಿವೀಲ್

‘ಕೆಡಿ’ ಸಿನಿಮಾನಲ್ಲಿ ಕಿಚ್ಚ ಸುದೀಪ್: ಕಾಲ ಭೈವರವ ಅವತಾರ ರಿವೀಲ್

ಧ್ರುವ ಸರ್ಜಾ (Dhruva Sarja) ನಟನೆಯ ‘ಕೆಡಿ’ ಸಿನಿಮಾದ ಹಾಡು ಇತ್ತೀಚೆಗೆ ಭಾರಿ ವಿವಾದ ಸೃಷ್ಟಿಸಿತು. ಲೋಕಸಭೆಯಲ್ಲಿ ಸಹ ಈ ಬಗ್ಗೆ ಚರ್ಚೆಗಳು ನಡೆದವು. ಸಿನಿಮಾದ ಹಾಡನ್ನು ಸಹ ಹಿಂಪಡೆಯಲಾಯ್ತು. ಇದು ಸಿನಿಮಾಕ್ಕೆ ದೊಡ್ಡ ಹಿನ್ನಡೆ ಎಂಬ ಚರ್ಚೆಗಳು ನಡೆದವು. ಇದೀಗ ‘ಕೆಡಿ’ ಸಿನಿಮಾದಿಂದ ಹೊಸ ಅಪ್​​ಡೇಟ್ ಹೊರಬಿದ್ದಿದೆ. ‘ಕೆಡಿ’ ಸಿನಿಮಾನಲ್ಲಿ ಕಿಚ್ಚ ಸುದೀಪ್ ನಟಿಸಿದ್ದು, ಇದೀಗ ಅವರ ಪೋಸ್ಟರ್ ಒಂದನ್ನು ಹೊರಬಿಡಲಾಗಿದೆ.

ಸುದೀಪ್ ಅವರು ‘ಕೆಡಿ’ ಸಿನಿಮಾದ ವಿಶೇಷ ಪಾತ್ರದಲ್ಲಿ ನಟಿಸಿದ್ದಾರೆ. ಸುದೀಪ್ ಪಾತ್ರದ ಹೆಸರು ‘ಕಾಲಭೈರವ’. ‘ಕಾಲ ಭೈರವ’ನ ಪೋಸ್ಟರ್ ಅನ್ನು ಇದೀಗ ಚಿತ್ರತಂಡ ಬಿಡುಗಡೆ ಆಗಿದೆ. ವಾರಣಾಸಿಯ ಹಿನ್ನೆಲೆಯಲ್ಲಿ ಸುದೀಪ್ ಅವರು ರುದ್ರಾಕ್ಷಿ ಮಾಲೆ ಹಿಡಿದು ಸ್ಟೈಲ್ ಆಗಿ ನಿಂತಿರುವ ಚಿತ್ರವನ್ನು ಕೆವಿಎನ್ ಪ್ರೊಡಕ್ಷನ್ಸ್ ಹಂಚಿಕೊಂಡಿದೆ. ‘ಕಾಲ ಭೈವರ’ ಈ ಹೆಸರೇ ಭಯ ಹುಟ್ಟಿಸುತ್ತದೆ’ ಎಂಬ ಟ್ಯಾಗ್ ಲೈನ್ ಅನ್ನು ಸಹ ನೀಡಲಾಗಿದೆ.

ಪ್ರೇಮ್ ಅವರ ‘ದಿ ವಿಲನ್’ ಸಿನಿಮಾನಲ್ಲಿ ಸುದೀಪ್ ನಟಿಸಿದ್ದರು. ಇದೀಗ ‘ಕೆಡಿ’ ಸಿನಿಮಾದ ಅತಿಥಿ ಪಾತ್ರದಲ್ಲಿ ನಟಿಸುತ್ತಿದ್ದಾರೆ. ಧ್ರುವ ಸರ್ಜಾ ನಟನೆಯ ಸಿನಿಮಾನಲ್ಲಿ ಮೊದಲ ಬಾರಿಗೆ ಕಿಚ್ಚ ಕಾಣಿಸಿಕೊಳ್ಳುತ್ತಿದ್ದಾರೆ. ಈಗಾಗಲೇ ‘ಕೆಡಿ’ ಸಿನಿಮಾನಲ್ಲಿ ಹಲವು ಸ್ಟಾರ್ ನಟ, ನಟಿಯರು ಇದ್ದಾರೆ. ಇದೀಗ ಆ ತಂಡಕ್ಕೆ ಸುದೀಪ್ ಸಹ ಸೇರಿಕೊಂಡಿದ್ದಾರೆ. ಸಂಜಯ್ ದತ್, ಶಿಲ್ಪಾ ಶೆಟ್ಟಿ, ರಮೇಶ್ ಅರವಿಂದ್, ಅಭಿಜಿತ್, ರವಿಚಂದ್ರನ್ ಇನ್ನೂ ಹಲವರು ಸಿನಿಮಾದ ವಿಶೇಷ ಪಾತ್ರಗಳಲ್ಲಿ ನಟಿಸುತ್ತಿದ್ದಾರೆ.

ಇದನ್ನೂ ಓದಿ:ಸಾಗರದ ಮಾರಿಕಾಂಬಾ ಜಾತ್ರೆಗೆ ತಾರೆಯರ ಮೆರುಗು; ಧ್ರುವ ಸರ್ಜಾ, ರಚಿತಾ ರಾಮ್ ಭೇಟಿ

ಸುದೀಪ್ ಅವರು ತಮ್ಮ ಆಪ್ತರ ಸಿನಿಮಾಗಳಲ್ಲಿ ಅತಿಥಿ ಪಾತ್ರಗಳಲ್ಲಿ ನಟಿಸುತ್ತಲೇ ಬಂದಿದ್ದಾರೆ. ಹೊಸಬರ ಸಿನಿಮಾಗಳಲ್ಲಿಯೂ ಸುದೀಪ್ ಅವರು ಕೆಲಸ ಮಾಡಿದ್ದಾರೆ. ಈ ಹಿಂದೆ ಆರ್ ಚಂದ್ರು ನಿರ್ದೇಶನ ಮಾಡಿದ್ದ ‘ಕಬ್ಜ’ ಸಿನಿಮಾನಲ್ಲಿಯೂ ಸುದೀಪ್ ಅವರು ಅತಿಥಿ ಪಾತ್ರದಲ್ಲಿ ನಟಿಸಿದ್ದರು. ಆ ಪಾತ್ರ ಮುಖ್ಯವಾದ ಪಾತ್ರವಾಗಿತ್ತು. ಈಗ ‘ಕೆಡಿ’ ಸಿನಿಮಾನಲ್ಲಿಯೂ ಸಹ ಸುದೀಪ್ ಕಾಣಿಸಿಕೊಂಡಿದ್ದಾರೆ.

ಧ್ರುವ ಸರ್ಜಾ ನಾಯಕನಾಗಿ ನಟಿಸಿರುವ ಈ ಸಿನಿಮಾವನ್ನು ಕೆವಿಎನ್ ಪ್ರೊಡಕ್ಷನ್ಸ್ ನಿರ್ಮಾಣ ಮಾಡಿದ್ದು, ಸಿನಿಮಾ ನಿರ್ದೇಶನ ಮಾಡಿರುವುದು ಪ್ರೇಮ್. ಸಿನಿಮಾ ಏಪ್ರಿಲ್ 30ರಂದು ಬಿಡುಗಡೆ ಆಗಲಿದೆ.

ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Source link

Leave a Reply

Your email address will not be published. Required fields are marked *