
ಬೆಂಗಳೂರು, ಮಾರ್ಚ್ 20: ದೇಶದಲ್ಲಿ ಸಿಲಿಂಡರ್ (Cylinder) ಅಭಾವದ ಸರಣಿ ಸಮಸ್ಯೆ ಮುಂದುವರೆದಿದೆ. ಇತ್ತ ಕರ್ನಾಟಕದಲ್ಲೂ ಎಲ್ಪಿಜಿಗಾಗಿ ಹೋಟೆಲ್ ಮಾಲೀಕರು ನಿತ್ಯ ಪರದಾಡುತ್ತಿದ್ದಾರೆ. ಒಂದ್ಕಡೆ ಗೃಹಬಳಕೆ ಸಿಲಿಂಡರ್ ಪಡೆಯಲು ಜನರು ಮುಗಿಬಿದ್ದರೆ, ಮತ್ತೊಂದ್ಕಡೆ ವಾಣಿಜ್ಯ ಸಿಲಿಂಡರ್ ಇಲ್ಲದೆ ಹಲವು ಉದ್ಯಮಗಳು ಬಂದ್ ಆಗುತ್ತಿವೆ. ಈ ಬೆನ್ನಲ್ಲೇ ಸಿಎಂ ಸಿದ್ದರಾಮಯ್ಯ (cm Siddaramaiah) ಮತ್ತೊಮ್ಮೆ ಕೇಂದ್ರ ಸರ್ಕಾರಕ್ಕೆ ಪತ್ರ ಬರೆದಿದ್ದು, ಮಧ್ಯಪ್ರವೇಶಕ್ಕೆ ಆಗ್ರಹಿಸಿದ್ದಾರೆ.
ಕೇಂದ್ರ ಸಚಿವ ಹರ್ದೀಪ್ ಸಿಂಗ್ಗೆ ಸಿಎಂ ಪತ್ರ
ಸಿಎಂ ಸಿದ್ದರಾಮಯ್ಯ ಈ ಹಿಂದೆ ಕೇಂದ್ರ ಸರ್ಕಾರಕ್ಕೆ ಪತ್ರವೊಂದನ್ನ ಬರೆದಿದ್ದರು. ಈಗ ಸಿಲಿಂಡರ್ ಸಮಸ್ಯೆ ಹೆಚ್ಚಾದ ಹಿನ್ನೆಲೆಯಲ್ಲಿ ಮತ್ತೊಂದು ಪತ್ರ ಬರೆದಿದ್ದಾರೆ. ಕೇಂದ್ರ ಸಚಿವ ಹರ್ದೀಪ್ ಸಿಂಗ್ಗೆ ಬರೆದ ಪತ್ರದಲ್ಲಿ ರಾಜ್ಯದ ಸಿಲಿಂಡರ್ಗಳ ಅಭಾವದ ಬಗ್ಗೆ ಉಲ್ಲೇಖಿಸಿದ್ದಾರೆ. 50 ಸಾವಿರ ಸಿಲಿಂಡರ್ಗಳು ಬೇಕು. ಭಾರತಕ್ಕೆ ಬಂದಿರುವ ತೈಲ ಹಡಗುಗಳ ತೈಲವನ್ನ ಸಮರ್ಪಕವಾಗಿ ಹಂಚಿಕೆ ಮಾಡುವಂತೆ ಮನವಿ ಮಾಡಿದ್ದಾರೆ.
ಸಿಎಂ ಸಿದ್ದರಾಮಯ್ಯ ಟ್ವೀಟ್
“I have written to the Union Petroleum Minister Shri @HardeepSPuri seeking urgent intervention to address the severe shortage of commercial LPG in Bengaluru, which is impacting supply and livelihoods across Karnataka.
The State Government has already taken steps to regulate and… pic.twitter.com/tnqM5DfMK1
— CM of Karnataka (@CMofKarnataka) March 20, 2026
ರೆಸ್ಟೋರೆಂಟ್ಗಳು, ಹೋಟೆಲ್ಗಳು, ಅಡುಗೆ ತಯಾರಿಸುವ ಸಂಸ್ಥೆಗಳು ಹಾಗೂ ಪಿಜಿಗಳಲ್ಲಿ ಸಿಲಿಂಡರ್ ಅಭಾವ ಹೆಚ್ಚಾಗಿದೆ. ಹೀಗಾಗಿ 50 ಸಾವಿರ LPG ಸಿಲಿಂಡರ್ಗಳ ಬೇಡಿಕೆಗೆ ಇದೆ. ನಾವು ದಿನಕ್ಕೆ 1000 ಸಿಲಿಂಡರ್ಗಳನ್ನು ಮಾತ್ರ ಪೂರೈಸಲು ಸಮರ್ಥರಾಗಿದ್ದೇವೆ. ಈ ಕಾರಣಕ್ಕೆ ಹೋಟೆಲ್, ಪಿಜಿಗಳು ಮುಚ್ಚುವ ಪರಿಸ್ಥಿತಿ ಎದುರಾಗಿದೆ.
ಇದನ್ನೂ ಓದಿ: ಬೆಂಗಳೂರಿನಲ್ಲಿ ವಾಣಿಜ್ಯ ಬಳಕೆ ಎಲ್ಪಿಜಿ ಸಿಲಿಂಡರ್ ಕೊರತೆ: ಕೇಂದ್ರ ಸಚಿವ ಹರ್ದೀಪ್ ಸಿಂಗ್ ಪುರಿಗೆ ಸಿಎಂ ಸಿದ್ದರಾಮಯ್ಯ ಪತ್ರ
ವಿದ್ಯಾರ್ಥಿಗಳು, ಐಟಿ ನೌಕರರು, ರೈತರು, ಡೈರಿ ಉತ್ಪಾದಕರು ಸೇರಿದಂತೆ ಅನೇಕ ಜನ ಆತಿಥ್ಯ ವಲಯದ ಮೇಲೆ ಅವಲಂಬಿತರಾಗಿದ್ದಾರೆ. ಇದೇ ರೀತಿ ಎಲ್ಪಿಜಿ ಇಲ್ಲದೇ ಆಟೋ ರೀಕ್ಷಗಳಿಗೂ ಸಂಕಷ್ಟ ಶುರುವಾಗಿದೆ. ಭಾರತ 2 ಟ್ಯಾಂಕರ್ಗಳನ್ನ ಸ್ವೀಕರಿಸಿದೆ. ಇದು ಸಮಸ್ಯೆಗಳನ್ನ ನಿವಾರಿಸುತ್ತದೆ. ಹೀಗಾಗಿ ಕರ್ನಾಟಕಕ್ಕೆ ಸಮರ್ಪಕ ಹಂಚಿಕೆ ಮಾಡಿ. ನಮ್ಮ ಲಭ್ಯತೆ ಚಿತಪಡಿಸಿಕೊಳ್ಳಲು ನೀವು ಹಸ್ತಕ್ಷೇಪ ಮಾಡಿ ಎಂದು ಸಿಎಂ ಸಿದ್ದರಾಮಯ್ಯ ಪತ್ರದಲ್ಲಿ ಉಲ್ಲೇಖಿಸಿದ್ದಾರೆ.
ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.