ಕೊನೆಗೂ ದಾವಣಗೆರೆ ಬಂಡಾಯ ಶಮನ: ಅಧಿಕೃತವಾಗಿ ತಮ್ಮ ನಿಲುವು ಘೋಷಿಸಿದ ಪೈಲ್ವಾನ್

ಕೊನೆಗೂ ದಾವಣಗೆರೆ ಬಂಡಾಯ ಶಮನ: ಅಧಿಕೃತವಾಗಿ ತಮ್ಮ ನಿಲುವು ಘೋಷಿಸಿದ ಪೈಲ್ವಾನ್

ಬೆಂಗಳೂರು/ದಾವಣಗೆರೆ, ಮಾರ್ಚ್ 27): ದಾವಣಗೆರೆ ಉಪ ಚುನಾವಣೆಯಲ್ಲಿ (Davanagere South By Election) ಬಂಡಾಯ ಅಭ್ಯರ್ಥಿಯಾಗಿ ಕಣಕ್ಕಿಳಿದಿದ್ದ ಸಾದಿಕ್ ಪೈಲ್ವಾನ್, ಕಾಂಗ್ರೆಸ್ ಹಿರಿಯ ನಾಯಕರ ಸಂಧಾನದ ಬಳಿಕ ಚುನಾವಣಾ ಕಣದಿಂದ ಹಿಂದೆ ಸರಿದಿದ್ದಾರೆ. ಸಿಎಂ ಸಿದ್ದರಾಮಯ್ಯ ನೇತೃತ್ವದಲ್ಲಿ ನಡೆದ ಸಂಧಾನ ಸಭೆ ಸಕ್ಸಸ್ ಆಗಿದ್ದು, ಯಾವುದೇ ಷರತ್ತುಗಳಿಲ್ಲದೆ ಪಕ್ಷದ ಅಧಿಕೃತ ಅಭ್ಯರ್ಥಿಗೆ ಬೆಂಬಲ ನೀಡುವುದಾಗಿ ಪೈಲ್ವಾನ್ ಘೋಷಿಸಿದ್ದಾರೆ.

ಸಾಧಿಕ್ ಪೈಲ್ವಾನ್ ಅವರು ರಿಜ್ವಾನ್ ಅರ್ಷದ್ ಹಾಗೂ ಸಲೀಂ ಅಹಮ್ಮದ್ ನೇತೃತ್ವದಲ್ಲಿ ಸಿಎಂ ಭೇಟಿ ಮಾಡಿ ಚರ್ಚಿಸಿದ್ದು, ಬಳಿಕ ಡಿಸಿಎಂ ಡಿಕೆ ಶಿವಕುಮಾರ್ ಅವರನ್ನು ಭೇಟಿ ಮಾಡಿ ಮಾತುಕತೆ ನಡೆಸಿದರು. ನಂತರ ನೇರವಾಗಿ ಡಿಕೆ ಶಿವಕುಮಾರ್ ಜೊತೆ ಕೆಪಿಸಿಸಿ ಕಚೇರಿ ತೆರಳಿ ಸುದ್ದಿಗೋಷ್ಠಿಯಲ್ಲಿ ಬಂಡಾಯ ಸ್ಪರ್ಧೆಯಿಂದ ನಾನು ನಿವೃತ್ತಿ ಆಗಿದ್ದೇನೆ ಎಂದು ಘೋಷಣೆ ಮಾಡಿದರು. ಈ ಮೂಲಕ ಕಾಂಗ್ರೆಸ್​​ಗೆ ಕಂಟಕವಾಗಿದ್ದ ಬಂಡಾಯ ಶಮನವಾದಂತಾಗಿದೆ. ಹಾಗಾದ್ರೆ, ಪೈಲ್ವಾನ್ ಏನೆಲ್ಲಾ ಹೇಳಿದ್ದಾರೆ ಎನ್ನುವುದನ್ನು ಕೇಳಿ.

ಇದನ್ನೂ ನೋಡಿ: ಸಿಎಂ ಸಿದ್ದರಾಮಯ್ಯ ಸಂಧಾನ ಸಕ್ಸಸ್: ಪಲ್ಟಿ ಹೊಡೆದ ಪೈಲ್ವಾನ್

Source link

Leave a Reply

Your email address will not be published. Required fields are marked *