ಕೋಗಿಲು ಬೆನ್ನಲ್ಲೇ ನಾಗವಾರ ಬಳಿ ಬೃಹತ್ ಒತ್ತುವರಿ ತೆರವು ಕಾರ್ಯಾಚರಣೆ: 30ಕ್ಕೂ ಹೆಚ್ಚು ಮನೆ, ಶೆಡ್, ಗ್ಯಾರೇಜ್ ಧ್ವಂಸ – Kannada News | Major Encroachment Eviction Drive Near Nagawara After Kogilu Operation, Over 30 Houses Demolished in Bengaluru

ಸಾರಾಯಿ ಪಾಳ್ಯದಲ್ಲಿ ಬಿಡಿಎಗೆ ಸೇರಿದ ಜಾಗ ಮರುಸ್ವಾಧೀನ

ಬೆಂಗಳೂರು, ಜನವರಿ 9: ಕೋಗಿಲು ಲೇಔಟ್​ನಲ್ಲಿ (Kogilu Layout) ಸರ್ಕಾರದ ಭೂಮಿ ಒತ್ತುವರಿ ಮಾಡಿದ್ದವರಿಗೆ ಬಿಗ್ ಶಾಕ್ ನೀಡಿದ ಬೆನ್ನಲ್ಲೇ ನಾಗವಾರದಲ್ಲೂ ಒತ್ತುವರಿ ತೆರವು ಕಾರ್ಯಾಚರಣೆ ತೀವ್ರಗೊಂಡಿದೆ. ನಾಗವಾರದ ಥಣಿಸಂದ್ರ ಬಳಿಯ ಸಾರಾಯಿ ಪಾಳ್ಯದಲ್ಲಿ ಬಿಡಿಎಗೆ (BDA) ಸೇರಿದ ಸರ್ವೆ ಸಂಬರ್ 28 ರ 2 ಎಕರೆ ಜಾಗವನ್ನು ಮರುಸ್ವಾಧೀನಪಡಿಸಿಕೊಳ್ಳಲಾಗಿದೆ. ಈ ಜಾಗದಲ್ಲಿದ್ದ 30ಕ್ಕೂ ಹೆಚ್ಚು ಮನೆ, ಶೆಡ್ ಹಾಗೂ ಗ್ಯಾರೇಜ್​ಗಳನ್ನು ಜೆಸಿಬಿ ಬಳಸಿ ಕಾರ್ಯಾಚರಣೆ ನಡೆಸಿ ಕೆಡವಲಾಗಿದೆ.

ಇನ್ನು ಬಿಡಿಎ ಒತ್ತುವರಿ ತೆರವು ಕಾರ್ಯಾಚರಣೆ ವಿರುದ್ಧ ಸ್ಥಳೀಯ ನಿವಾಸಿಗಳು ಭಾರೀ ಆಕ್ರೋಶ ಹೊರಹಾಕಿದ್ದಾರೆ. ಸುಮಾರು 20 ವರ್ಷಗಳಿಂದ ಇಲ್ಲೇ ವಾಸ ಮಾಡುತ್ತಿರುವುದಾಗಿ ಹೇಳುತ್ತಿರುವ ನಿರಾಶ್ರಿತರು ಅಗತ್ಯ ದಾಖಲೆಗಳನ್ನ ಹೊಂದಿದ್ದರೂ, ಯಾವುದೇ ಮುನ್ಸೂಚನೆ ಅಥವಾ ನೋಟಿಸ್ ನೀಡದೇ ಅಮಾನವೀಯತೆ ತೋರಿದ್ದಾರೆ ಎಂದು ಆರೋಪ ಮಾಡಿದ್ದಾರೆ. ಆದರೆ, ನಿಯಮಾನುಸಾರ ಮತ್ತು ಕೋರ್ಟ್ ಆದೇಶನಕ್ಕನುಗುಣವಾಗಿಯೇ ಕಾರ್ಯಾಚರಣೆ ನಡೆದಿದೆ ಎಂದು ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.

ಇದನ್ನೂ ಓದಿ: ಬೆಂಗಳೂರಿನಲ್ಲಿ ಮತ್ತೆ ಗರ್ಜಿಸಿದ ಜೆಸಿಬಿ: ಕೋಗಿಲು ಆಯ್ತು ಈಗ ಥಣಿಸಂದ್ರದಲ್ಲಿ ಆಪರೇಷನ್ ಒತ್ತುವರಿ

ಮೇಲ್ನೋಟಕ್ಕೆ ಕೋಗಿಲು ಲೇಔಟ್ ರೀತಿಯಲ್ಲಿಯೇ ಸರ್ಕಾರಿ ಜಾಗವನ್ನು ಸುಳ್ಳು ದಾಖಲೆಗಳನ್ನು ಸೃಷ್ಟಿಸಿ ಮಾರಾಟ ಮಾಡಲಾಗಿರುವ ಆರೋಪಗಳೂ ಇವೆ. ಆದರೆ ಇದು ಸರ್ಕಾರಿ ಜಾಗ ಎಂಬುದು ಗೊತ್ತಿದ್ದರೂ ಒಂದಷ್ಟು ಮಂದಿಗೆ ಇ ಖಾತಾ, ರಿಜಿಸ್ಟ್ರೇಷನ್ ಪತ್ರಗಳನ್ನು ಮಾಡಿಕೊಟ್ಟವರು ಯಾರು? ಇಷ್ಟು ಮನೆಗಳು ತಲೆ ಎತ್ತುವ ತನಕ ಅಧಿಕಾರಿಗಳು ಏನು ಮಾಡುತ್ತಿದ್ದರು ಎಂಬ ವಿಚಾರವೂ ಗೊತ್ತಾಗಬೇಕಿದೆ.

ವರದಿ: ಲಕ್ಷ್ಮಿ ನರಸಿಂಹ, ಟಿವಿ9 ಬೆಂಗಳೂರು

ಕರ್ನಾಟಕದ ಇನ್ನಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

Leave a Reply

Your email address will not be published. Required fields are marked *