Headlines

ಗಂಗೂಲಿಯಿಂದ ಅಮೀರ್​ ಖಾನ್​ವರೆಗೆ; ನಾಳೆ ‘ಡ್ಯುಯೊಲಾಗ್ ವಿತ್ ಬರುಣ್ ದಾಸ್’ 4ನೇ ಸೀಸನ್ ಆರಂಭ – Kannada News | Duologue with Barun Das returns with season 4 featuring legends including sourav ganguly aamir khan

ನವದೆಹಲಿ, ಫೆಬ್ರವರಿ 27: ‘ಡ್ಯುಯೊಲಾಗ್ ವಿತ್ ಬರುಣ್ ದಾಸ್’ (Duologue with Barun Das) 4ನೇ ಸೀಸನ್‌ ನಾಳೆ ಪ್ರೇಕ್ಷಕರ ಮುಂದೆ ಬರಲಿದೆ. ಈ ಹೊಸ ಸೀಸನ್ ಫೆಬ್ರವರಿ 28ರಂದು ಪ್ರದರ್ಶನಗೊಳ್ಳಲಿದೆ. ಮೊದಲ 3 ಸೀಸನ್‌ಗಳ ಯಶಸ್ಸಿನ ನಂತರ, ಈ ಬಾರಿ ಈ ಕಾರ್ಯಕ್ರಮವನ್ನು ಇನ್ನೂ ದೊಡ್ಡ ಪ್ರಮಾಣದಲ್ಲಿ ಪ್ರಸ್ತುತಪಡಿಸಲಾಗುತ್ತಿದೆ. ಈ ಬಾರಿ ಇದು ಮನರಂಜನೆ ನೀಡುವುದಲ್ಲದೆ, ನಿಮ್ಮನ್ನು ಚಿಂತಿಸುವಂತೆ ಮಾಡುವ ಸಂಭಾಷಣೆಗಳನ್ನು ಈ ಶೋ ಒಳಗೊಂಡಿರುತ್ತದೆ. ಈ ಕಾರ್ಯಕ್ರಮವು ಬೇರೆ ಟಾಕ್ ಶೋಗಳಿಗಿಂತ ಭಿನ್ನವಾಗಿದೆ. ಏಕೆಂದರೆ ಇದು ಕೇವಲ ಪ್ರಶ್ನೆಗಳು ಮತ್ತು ಉತ್ತರಗಳನ್ನು ಒಳಗೊಂಡಿರುವುದಿಲ್ಲ, ಆಳವಾದ ವಿಚಾರ ವಿನಿಮಯವನ್ನು ಕೂಡ ಒಳಗೊಂಡಿರುತ್ತದೆ.

ಈ ವಿಶೇಷ ಕಾರ್ಯಕ್ರಮವನ್ನು ಟಿವಿ9 ನೆಟ್‌ವರ್ಕ್ ಎಂಡಿ ಮತ್ತು ಸಿಇಒ ಬರುಣ್ ದಾಸ್ ನಡೆಸಿಕೊಡಲಿದ್ದಾರೆ. ಅವರ ಸಂಭಾಷಣೆಯ ಶೈಲಿ ಸರಳವಾದರೂ ಆಳವಾಗಿದ್ದು, ಅತಿಥಿಗಳು ಮುಕ್ತವಾಗಿ ಮನಬಿಚ್ಚಿ ಮಾತನಾಡಲು ಅವಕಾಶ ಕಲ್ಪಿಸಿಕೊಡುತ್ತದೆ. ಕ್ರೀಡೆ, ಸಿನಿಮಾ, ಫ್ಯಾಷನ್ ಮತ್ತು ಇತರ ಕ್ಷೇತ್ರಗಳ ಪ್ರಮುಖ ವ್ಯಕ್ತಿಗಳು ಈ ಸೀಸನ್​​ನಲ್ಲಿ ಆಗಮಿಸಿ, ತಮ್ಮ ಅನುಭವಗಳನ್ನು ಹಂಚಿಕೊಳ್ಳಲಿದ್ದಾರೆ.

ಇದನ್ನೂ ಓದಿ: Duologue NXTನಲ್ಲಿ ಬರುಣ್ ದಾಸ್ ಜೊತೆ ತಮ್ಮ ಭಾವನೆ ಹಂಚಿಕೊಳ್ಳಲಿದ್ದಾರೆ ಪೂಜಾ ಜೈನ್ ಗುಪ್ತಾ

ಈ ಸೀಸನ್‌ನಲ್ಲಿ ಹಲವು ವೈವಿಧ್ಯಮಯ ಕ್ಷೇತ್ರಗಳ ದಿಗ್ಗಜರು ಭಾಗವಹಿಸಲಿದ್ದಾರೆ. ಈ ವೈವಿಧ್ಯತೆಯೇ ಕಾರ್ಯಕ್ರಮದ ದೊಡ್ಡ ಶಕ್ತಿ. ‘ಡ್ಯುಯೊಲಾಗ್ ವಿತ್ ಬರುಣ್ ದಾಸ್’ 4ನೇ ಸೀಸನ್ ಭಾರತೀಯ ಕ್ರಿಕೆಟ್ ದಂತಕಥೆ ಸೌರವ್ ಗಂಗೂಲಿ ಅವರೊಂದಿಗೆ ಆರಂಭವಾಗಲಿದೆ. ನಂತರ ಕ್ರೀಡೆ ಮತ್ತು ಮನರಂಜನೆ ಎರಡರಲ್ಲೂ ಹೆಸರು ಮಾಡಿರುವ ಟೆನಿಸ್ ಆಟಗಾರ ಮತ್ತು ನಟ ವಿಜಯ್ ಅಮೃತರಾಜ್ ಭಾಗವಹಿಸಲಿದ್ದಾರೆ. ಇದಾದ ನಂತರ ಫುಟ್ಬಾಲ್ ದಂತಕತೆಯಾದ ಲೋಥರ್ ಮ್ಯಾಥ್ಯೂಸ್, ಪ್ರಸಿದ್ಧ ಫ್ಯಾಷನ್ ಪರ್ಸನಾಲಿಟಿ ಬಿಯಾಂಕಾ ಬಾಲ್ಟಿ ತಮ್ಮ ಸ್ಪೂರ್ತಿದಾಯಕ ಕಥೆಯನ್ನು ಹಂಚಿಕೊಳ್ಳಲಿದ್ದಾರೆ. ಈ ಸೀಸನ್‌ನ ಅಂತಿಮ ಸಂಚಿಕೆಯಲ್ಲಿ ಖ್ಯಾತ ಬಾಲಿವುಡ್ ನಟ ಅಮೀರ್ ಖಾನ್ ಭಾಗವಹಿಸಲಿದ್ದಾರೆ.

ಇನ್ನಷ್ಟು ರಾಷ್ಟ್ರೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

Leave a Reply

Your email address will not be published. Required fields are marked *