ಗರ್ಭಪಾತದ (Abortion) ನಂತರ, ಮಹಿಳೆಯರ ದೇಹದಲ್ಲಿ ಹಲವಾರು ರೀತಿಯ ದೈಹಿಕ ಮತ್ತು ಹಾರ್ಮೋನುಗಳ ಬದಲಾವಣೆಗಳಾಗುತ್ತದೆ. ಈ ಅವಧಿಯಲ್ಲಿ, ಗರ್ಭಾಶಯಕ್ಕೆ ಅದರ ಸಾಮಾನ್ಯ ಸ್ಥಿತಿಗೆ ಮರಳಲು ಮತ್ತು ದೇಹವು ಚೇತರಿಸಿಕೊಳ್ಳಲು ಸಮಯ ಬೇಕಾಗುತ್ತದೆ. ಸರಿಯಾದ ಆರೈಕೆಯಿಲ್ಲದೆ, ಸೋಂಕು, ಅತಿಯಾದ ರಕ್ತಸ್ರಾವ, ದೌರ್ಬಲ್ಯ ಮತ್ತು ಇತರ ಸಮಸ್ಯೆಗಳ ಅಪಾಯ ಹೆಚ್ಚಾಗುತ್ತದೆ. ಈ ಸಮಯದಲ್ಲಿ, ರೋಗನಿರೋಧಕ ವ್ಯವಸ್ಥೆಯು ಸ್ವಲ್ಪ ಸೂಕ್ಷ್ಮವಾಗಿರುತ್ತದೆ, ಆದ್ದರಿಂದ ಶುಚಿತ್ವ ಮತ್ತು ವಿಶ್ರಾಂತಿ ಅತ್ಯಂತ ಮುಖ್ಯ. ಇದರೊಂದಿಗೆ, ಈ ಹಂತದಲ್ಲಿ ಮಹಿಳೆ ಮಾನಸಿಕವಾಗಿ ಮತ್ತು ಭಾವನಾತ್ಮಕ ಬದಲಾವಣೆಗಳನ್ನು ಅನುಭವಿಸುತ್ತಾಳೆ. ಹಾಗಾಗಿ ಗರ್ಭಪಾತದ ನಂತರ ಸರಿಯಾದ ಆರೈಕೆ ಮಾಡುವುದರಿಂದ ಚೇತರಿಕೆ ವೇಗಗೊಳ್ಳುವುದಲ್ಲದೆ, ಭವಿಷ್ಯದಲ್ಲಿ ಬರುವ ಆರೋಗ್ಯ ಸಮಸ್ಯೆಗಳ ಅಪಾಯವನ್ನು ಕಡಿಮೆ ಮಾಡುತ್ತದೆ. ಆದರೆ ಈ ಅವಧಿಯಲ್ಲಿ ಮಾಡುವ ನಿರ್ಲಕ್ಷ್ಯವು ಆರೋಗ್ಯದ ಮೇಲೆ ದೀರ್ಘಕಾಲೀನ ಪರಿಣಾಮಗಳನ್ನು ಬೀರುತ್ತದೆ. ಆದ್ದರಿಂದ, ಗರ್ಭಪಾತದ ನಂತರ ಮಹಿಳೆಯರು ಯಾವುದನ್ನು ಮಾಡಬಾರದು ಎಂಬುದನ್ನು ತಿಳಿದುಕೊಳ್ಳುವುದು ಬಹಳ ಮುಖ್ಯವಾಗುತ್ತದೆ ಈ ಬಗ್ಗೆ ಮತ್ತಷ್ಟು ಮಾಹಿತಿ ಸ್ಟೋರಿಯಲ್ಲಿದೆ.
ಗರ್ಭಪಾತದ ನಂತರ ಮಹಿಳೆಯರು ಈ ತಪ್ಪುಗಳನ್ನು ಮಾಡಬಾರದು?
ಆರ್‌ಎಂಎಲ್ ಆಸ್ಪತ್ರೆಯ ಅಸೋಸಿಯೇಟ್ ಪ್ರೊಫೆಸರ್ ಡಾ. ಸಲೋನಿ ಚಡ್ಡಾ ಹೇಳುವ ಪ್ರಕಾರ, ಗರ್ಭಪಾತದ ನಂತರ ಅತಿಯಾಗಿ ಕೆಲಸ ಮಾಡಬಾರದು ಏಕೆಂದರೆ ದೈಹಿಕ ಪರಿಶ್ರಮ, ರಕ್ತಸ್ರಾವವನ್ನು ಹೆಚ್ಚಿಸುತ್ತದೆ. ಜೊತೆಗೆ ವೈದ್ಯರ ಸಲಹೆಯಿಲ್ಲದೆ ಔಷಧಿಗಳನ್ನು ತೆಗೆದುಕೊಳ್ಳುವುದು ಅಥವಾ ನಿಗದಿತ ಔಷಧಿಗಳ ಕೋರ್ಸ್ ಅನ್ನು ಪೂರ್ಣಗೊಳಿಸದಿರುವುದು ಸಹ ಹಾನಿಕಾರಕವಾಗಿದೆ. ಅನೇಕರು ನೋವು, ಸೌಮ್ಯ ಜ್ವರ ಅಥವಾ ಅಸಹಜ ರಕ್ತಸ್ರಾವವನ್ನು ಸಾಮಾನ್ಯವೆಂದು ಭಾವಿಸಿ ನಿರ್ಲಕ್ಷಿಸುತ್ತಾರೆ, ಇದು ಸರಿಯಲ್ಲ. ಅಷ್ಟೇ ಅಲ್ಲ, ಶುಚಿತ್ವದಲ್ಲಿ ನಿರ್ಲಕ್ಷ್ಯ ಅಥವಾ ದೀರ್ಘಕಾಲದವರೆಗೆ ಒದ್ದೆಯಾದ ಬಟ್ಟೆಗಳನ್ನು ಧರಿಸುವುದರಿಂದ ಸೋಂಕುಗಳು ಉಂಟಾಗಬಹುದು. ವೈದ್ಯರು ಸೂಚಿಸಿದ ವಿಶ್ರಾಂತಿ ಅವಧಿಯನ್ನು ನಿರ್ಲಕ್ಷಿಸುವುದು ಮತ್ತು ತಪಾಸಣೆಗಳನ್ನು ತಪ್ಪಿಸುವುದು ಸಹ ಸಾಮಾನ್ಯ ತಪ್ಪುಗಳೆಂದು ಪರಿಗಣಿಸಲಾಗುತ್ತದೆ. ಹೆಚ್ಚುವರಿಯಾಗಿ, ಮಾನಸಿಕ ಒತ್ತಡವನ್ನು ನಿಗ್ರಹಿಸುವುದು ಅಥವಾ ಭಾವನಾತ್ಮಕ ಬೆಂಬಲವನ್ನು ಪಡೆಯದಿರುವುದು ಚೇತರಿಕೆಯನ್ನು ನಿಧಾನಗೊಳಿಸುತ್ತದೆ. ಇವುಗಳನ್ನು ತಪ್ಪಿಸುವುದರಿಂದ ದೇಹ ಬೇಗ ಗುಣಮುಖವಾಗಲು ಅವಕಾಶ ನೀಡುತ್ತದೆ.
ಇದನ್ನೂ ಓದಿ: ಪದೇ ಪದೇ ಗರ್ಭಪಾತವಾಗುವುದಕ್ಕೆ ಕಾರಣವೇನು? ಅದನ್ನು ತಡೆಯಲು ಈ ರೀತಿ ಮಾಡಿ
ಗರ್ಭಪಾತದ ನಂತರ ಆಹಾರ ಹೇಗಿರಬೇಕು?
ಸಾಮಾನ್ಯವಾಗಿ ಗರ್ಭಪಾತದ ನಂತರ, ಪೌಷ್ಟಿಕ ಮತ್ತು ಸಮತೋಲಿತ ಆಹಾರ ಸೇವನೆ ಮಾಡುವುದು ಬಹಳ ಮುಖ್ಯ. ಹಸಿರು ತರಕಾರಿ, ಹಣ್ಣು, ಬೇಳೆಕಾಳುಗಳು, ಹಾಲು ಮತ್ತು ಮೊಸರು ಮುಂತಾದ ಕಬ್ಬಿಣ, ಪ್ರೋಟೀನ್ ಮತ್ತು ವಿಟಮಿನ್‌ಗಳಲ್ಲಿ ಸಮೃದ್ಧವಾಗಿರುವ ಆಹಾರಗಳನ್ನು ಸೇವನೆ ಮಾಡಬೇಕು ಇದು ದೇಹವನ್ನು ಬಲಪಡಿಸುತ್ತವೆ. ಜೊತೆಗೆ ಸಾಕಷ್ಟು ಪ್ರಮಾಣದಲ್ಲಿ ನೀರು ಕುಡಿಯಬೇಕು. ತುಂಬಾ ಎಣ್ಣೆಯುಕ್ತ, ಜಂಕ್ ಅಥವಾ ಅತಿಯಾದ ಮಸಾಲೆಯುಕ್ತ ಆಹಾರ ಸೇವನೆ ಮಾಡುವುದನ್ನು ತಪ್ಪಿಸುವುದು ಒಳ್ಳೆಯದು. ಜೊತೆಗೆ ಆಲ್ಕೋಹಾಲ್ ಮತ್ತು ಧೂಮಪಾನ ಮಾಡುವುದು ಕೂಡ ಒಳ್ಳೆಯದಲ್ಲ. ಏಕೆಂದರೆ ಇವೆಲ್ಲವೂ ಚೇತರಿಸಿಕೊಳ್ಳಲು ಸಮಯ ತೆಗೆದುಕೊಳ್ಳುತ್ತದೆ. ಅತಿಯಾದ ಕೆಫೀನ್ ಸೇವನೆಯು ಸಹ ಹಾನಿಕಾರಕವಾಗಿದೆ.
ಆರೋಗ್ಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ