‘ಬಿಗ್ ಬಾಸ್’ ಫಿನಾಲೆ ವಾರ ನಡೆಯುತ್ತಿದೆ. ಈ ವೇಳೆ ಅಭಿಮಾನಿಗಳು ದೊಡ್ಡ ಸಂಖ್ಯೆಯಲ್ಲಿ ಚಿಯರ್ ಮಾಡಿದರು. ಇನ್ನು, ಗಿಲ್ಲಿ ಟ್ಯಾಟೂ ಹಾಕಿಸಿಕೊಂಡ ಅಭಿಮಾನಿ ಕೂಡ ಆಗಮಿಸಿದ್ದರು. ಇದನ್ನು ನೋಡಿ ಗಿಲ್ಲಿ ಭಾವುಕರಾದರು. ಅಲ್ಲದೆ, ‘ಯಾವುದೇ ಸಂದರ್ಭದಲ್ಲಿ ಆಟದ ದಿಕ್ಕನ್ನು ಬದಲಿಸೋ ತಾಕತ್ತು ಇರೋದು ಜೋಕರ್ಗೆ ಮಾತ್ರ’ ಎಂದು ಬಿಗ್ ಬಾಸ್ ಹೇಳುತ್ತಿದ್ದಂತೆ, ‘ಡಮಾಲ್ ಡಿಮಿಲ್ ಡಕ್ಕಾ ಗಿಲ್ಲಿ ಗೆಲ್ಲೋದು ಪಕ್ಕಾ’ ಎಂದು ನೆರೆದಿದ್ದವರು ಕೂಗಿದರು. ಬಿಗ್ ಬಾಸ್ ಮನೆಯಲ್ಲೇ ಅವರು ಗೆಲ್ಲೋ ಸೂಚನೆ ಸಿಕ್ಕಿದೆ ಎಂದು ಹೇಳಲಾಗುತ್ತಿದೆ.
ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ.