
ಮಂಗಳೂರು, ಮಾರ್ಚ್ 17: ಮೂಡಬಿದ್ರೆ ಇನ್ಸ್‌ಪೆಕ್ಟರ್ ಸಂದೇಶ್ ವಿರುದ್ಧ ಸಂತ್ರಸ್ತೆಯೊಬ್ಬರು ಗಂಭೀರ ಆರೋಪಗಳನ್ನು ಮಾಡಿದ್ದಾರೆ. ತಮ್ಮ ಪತಿಯ ಮೇಲೆ ರೌಡಿಶೀಟರ್ ಹಾಕಿ ಬಂಧಿಸುವ ಬೆದರಿಕೆ ಹಾಕಿ ಲಂಚ ಹಾಗೂ ಲೈಂಗಿಕ ಕಿರುಕುಳಕ್ಕೆ ಒತ್ತಾಯಿಸಿದ್ದಾರೆ ಎಂದು ದೂರಿರುವ ಮಹಿಳೆ, ಇನ್ಸ್‌ಪೆಕ್ಟರ್ ಸಂದೇಶ್ ಅವರು ತಮ್ಮ ಹುದ್ದೆಗೆ ಬರಲು ಗೃಹ ಸಚಿವರಿಗೆ 50 ಲಕ್ಷ ರೂಪಾಯಿ ಲಂಚ ನೀಡಿದ್ದಾರೆಂದು ಹೇಳಿಕೊಂಡಿದ್ದಾರೆ. ಹೀಗಾಗಿ 25 ಲಕ್ಷ ರೂಪಾಯಿ ನೀಡವ ಅಥವಾ ಲೈಂಗಿಕ ಸಂಪರ್ಕಕ್ಕೆ ಒಪ್ಪುವ ಆಯ್ಕೆಯನ್ನು ಅವರು ತನಗೆ ನೀಡಿದ್ದು, 50,000 ರೂಪಾಯಿ ಹಣವನ್ನು ಈಗಾಗಲೇ ವಸೂಲಿ ಮಾಡಿರೋದಾಗಿ ತಿಳಿಸಿದ್ದಾರೆ.
ಮತ್ತಷ್ಟು ವಿಡಿಯೋ ನೋಡಲು ಇಲ್ಲಿ ಕ್ಲಿಕ್ ಮಾಡಿ.