Headlines

ಗೊಂದಲದ ಗೂಡಾದ ‘ಡಾನ್ 3’ ಸಿನಿಮಾ; ಮಧ್ಯಸ್ಥಿಕೆ ವಹಿಸಿದ ಸ್ಟಾರ್ ಹೀರೋ – Kannada News | Don 3 Controversy: Aamir Khan Steps In to Resolve Ranveer Singh Farhan Akhtar Dispute

‘ಡಾನ್ 3’ ಸಿನಿಮಾ ಘೋಷಣೆ ಆಗಿ ಸಾಕಷ್ಟು ಸಮಯ ಕಳೆದಿದೆ. ಆದರೆ, ಈವರೆಗೆ ಚಿತ್ರದ ಶೂಟಿಂಗ್ ಶುರುವಾಗಿಲ್ಲ. ಇದಕ್ಕೆ ಕಾರಣವೂ ಇದೆ. ನಿರ್ದೇಶಕ ಫರ್ಹಾನ್ ಅಖ್ತರ್ ಹಾಗೂ ಡಾನ್ ಪಾತ್ರ ಮಾಡಬೇಕಿರೋ ರಣವೀರ್ ಸಿಂಗ್ ಮಧ್ಯೆ ಯಾವುದೂ ಸರಿ ಇಲ್ಲ. ರಣವೀರ್ ಸ್ಕ್ರಿಪ್ಟ್ ವಿಷಯದಲ್ಲಿ ಖುಷಿಯಾಗಿಲ್ಲ ಎನ್ನಲಾಗಿದೆ. ಸಂಭಾವನೆ ವಿಷಯದಲ್ಲೂ ಕಿರಿಕ್ ಆಗಿದೆ. ಹೀಗಿರುವಾಗಲೇ ‘ಡಾನ್ 3’ ಸಿನಿಮಾದ ವಿವಾದ ಬಗೆಹರಿಸಲು ಆಮಿರ್ ಖಾನ್ ಆಗಮಿಸಿದ್ದಾರೆ ಎನ್ನಲಾಗಿದೆ.

ಚಿತ್ರರಂಗದ ಬಗ್ಗೆ ಆಮಿರ್ ಖಾನ್ ಹೆಚ್ಚು ಕಾಳಜಿವಹಿಸುತ್ತಾರೆ. ಏನೇ ಆದರೂ ಸರಿ ಒಳ್ಳೆಯ ಸಿನಿಮಾ ಬರಬೇಕು ಎಂಬುದು ಅವರ ಗುರಿ. ‘ಡಾನ್ 3’ ಸಿನಿಮಾ ಸೆಟ್ಟೇರಿದರೆ ಒಂದಷ್ಟು ಮಂದಿ ಕೆಲಸ ಸಿಗುತ್ತದೆ. ಸಿನಿಮಾ ಹಿಟ್ ಆದರೆ, ಬಾಲಿವುಡ್​​ನಲ್ಲಿ ಒಂದೊಳ್ಳೆಯ ಬಿಸ್ನೆಸ್ ಆಗುತ್ತದೆ ಎಂಬುದು ಆಮಿರ್ ಉದ್ದೇಶ. ಹೀಗಾಗಿ, ಸಿನಿಮಾ ನಿಲ್ಲಬಾರದು ಎಂಬ ಉದ್ದೇಶವನ್ನು ಅವರು ಹೊಂದಿದ್ದಾರೆ.

‘ಡಾನ್ 3’ ಸಿನಿಮಾ ಸೆಟ್ಟೇರುವ ಮೊದಲೇ ಸಾಕಷ್ಟು ಹೂಡಿಕೆ ಮಾಡಲಾಗಿದೆ. ಸಿನಿಮಾದ ಸ್ಕ್ರಿಪ್ಟ್ ಕೆಲಸ, ಟೀಸರ್ ಶೂಟ್ ಸೇರಿದಂತೆ ಸಾಕಷ್ಟು ಖರ್ಚು ಮಾಡಲಾಗಿದೆ. ಈಗ ರಣವೀರ್ ಸಿಂಗ್ ಸಿನಿಮಾದಿಂದ ಹೊರ ನಡೆದಿರುವುದರಿಂದ, ಅವರು 40 ಕೋಟಿ ರೂಪಾಯಿ ಪರಿಹಾರ ನೀಡಬೇಕು ಎಂದು ಫರ್ಹಾನ್ ಬೇಡಿಕೆ ಇಟ್ಟಿದ್ದಾರೆ.

ಈ ಮಧ್ಯೆ ರಣವೀರ್ ಸಿಂಗ್ ಅವರು ಹೊಸ ಆರೋಪ ಮಾಡಿದ್ದಾರೆ. ‘ಫರ್ಹಾನ್ ಅಖ್ತರ್​​ಗೆ ಡಾನ್ ಪಾತ್ರದಲ್ಲಿ ಹೃತಿಕ್​​ನ ಆಯ್ಕೆ ಮಾಡಿಕೊಳ್ಳುವ ಆಲೋಚನೆ ಇದೆ’ ಎಂದಿದ್ದಾರೆ. ಆದರೆ, ಹೃತಿಕ್ ಈ ವಿಷಯವನ್ನು ಅಲ್ಲಗಳೆದಿದ್ದಾರೆ. ಈ ಎಲ್ಲಾ ಬೆಳವಣಿಗೆಯಿಂದ ‘ಡಾನ್ 3’ ಗೊಂದಲದ ಗೂಡಾಗಿದೆ.

ಸದ್ಯದ ಮಾಹಿತಿ ಪ್ರಕಾರ ಆಮಿರ್ ಖಾನ್ ಅವರು ರಣವೀರ್ ಹಾಗೂ ಫರ್ಹಾನ್ ಒಡೆತನದ ಎಕ್ಸೆಲ್ ಎಂಟರ್​​ಟೇನ್​ಮೆಂಟ್ ಸಮಸ್ಯೆಯನ್ನು ಬಗೆಹರಿಸುವ ಪ್ರಯತ್ನದಲ್ಲಿ ಇದ್ದಾರೆ. ಆಮಿರ್ ತಮ್ಮದೇ ಮನೆಯಲ್ಲಿ ಸಿನಿಮಾಗೆ ಸಂಬಂಧಿಸಿದವರನ್ನು ಕರೆಸಿ ಸಭೆ ಆಯೋಜನೆ ಮಾಡಿದ್ದರು ಎಂದು ಹೇಳಲಾಗುತ್ತಾ ಇದೆ. ಈ ಸಮಸ್ಯೆಗೆ ಪರಿಹಾರ ಸಿಕ್ಕರೆ ಒಂದೊಳ್ಳೆಯ ಸಿನಿಮಾ ನಿರೀಕ್ಷಿಸಬಹುದು.

ಇದನ್ನೂ ಓದಿ: ‘ಧುರಂಧರ್’ ಫಲಿತಾಂಶದ ಮೇಲೆ ನಿರ್ಧಾರವಾಗಲಿದೆ ‘ಡಾನ್ 3’ ಸಿನಿಮಾ ಭವಿಷ್ಯ

ಸದ್ಯದ ಬೆಳವಣಿಗೆಯಿಂದ ಶಾರುಖ್ ಖಾನ್ ಅಭಿಮಾನಿಗಳು ಖುಷಿಪಟ್ಟಿದ್ದಾರೆ. ಏಕೆಂದರೆ, ಶಾರುಖ್ ಖಾನ್ ಅವರು ‘ಡಾನ್’ ಹಾಗೂ ‘ಡಾನ್ 2’ ಸಿನಿಮಾಗಳಲ್ಲಿ ನಟಿಸಿದ್ದರು. ‘ಡಾನ್ 3’ ಚಿತ್ರದಲ್ಲಿ ಅವರಿಲ್ಲ ಎಂಬ ಸುದ್ದಿ ಕೇಳಿ ಅಭಿಮಾನಿಗಳು ಬೇಸರ ಮಾಡಿಕೊಂಡಿದ್ದರು.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

Source link

Leave a Reply

Your email address will not be published. Required fields are marked *