ಗ್ಯಾಸ್ ಕೊರತೆ: ಕೊಡಗಿನಲ್ಲಿ ಸೌದೆ-ಇದ್ದಿಲುಗೆ ಫುಲ್ ಡಿಮ್ಯಾಂಡ್: ಕೆಜಿಗೆ ಎಷ್ಟು ಗೊತ್ತಾ?

ಗ್ಯಾಸ್ ಕೊರತೆ: ಕೊಡಗಿನಲ್ಲಿ ಸೌದೆ-ಇದ್ದಿಲುಗೆ ಫುಲ್ ಡಿಮ್ಯಾಂಡ್: ಕೆಜಿಗೆ ಎಷ್ಟು ಗೊತ್ತಾ?

ಕೊಡಗು, ಏಪ್ರಿಲ್​ 02: ಗಲ್ಫ್ ರಾಷ್ಟ್ರದಲ್ಲಾಗುತ್ತಿರುವ ಯುದ್ಧದಿಂದಾಗಿ ಗ್ಯಾಸ್ ಪೂರೈಕೆಯಲ್ಲಿ (Gas Shortage) ವ್ಯತ್ಯಯವಾಗಿದೆ. ಪ್ರತಿಯೊಂದು ಕ್ಷೇತ್ರವೂ ಸೌದೆ ಒಲೆಗಳತ್ತ ಮುಖ ಮಾಡಿದ್ದಾರೆ. ಹೀಗಾಗಿ ಸೌದೆ, ಇದ್ದಿಲುಗೆ ಭಾರೀ ಬೇಡಿಕೆ ಬಂದಿದೆ. ಗ್ಯಾಸ್​ ಕೊರತೆಯಿಂದಾಗಿ ಇದೀಗ ಸೌದೆ ಮತ್ತು ಇದ್ದಿಲು ಬಳಸಲಾಗುತ್ತಿದೆ. ಹಾಗಾಗಿ ಇದೀಗ ಸೀಸನ್​​ ಅಲ್ಲದಿದ್ದರೂ ಸೌದೆಗೆ ವ್ಯಾಪಕ ಬೇಡಿಕೆ ಸೃಷ್ಟಿಯಾಗುತ್ತಿದೆ.

ಗ್ಯಾಸ್​ ಸಿಲಿಂಡರ್​ಗಳಿಲ್ಲದೇ ಪರದಾಟ

ಇರಾನ್-ಇಸ್ರೆಲ್ ಯುದ್ಧದಿಂದಾಗಿ ಜಾಗತಿಕವಾಗಿ ಆಗಿರುವ ಅಡ್ಡಪರಿಣಾಮಗಳು ಒಂದೆರಡಲ್ಲ. ವಿಶೇಷವಾಗಿ ಅಡುಗೆ ಅನಿಲದ ಮೇಲೆ ಬಹಳಷ್ಟು ವ್ಯತಿರಿಕ್ತ ಪರಿಣಾಮ ಬೀರಿದೆ. ಅದರಲ್ಲೂ ಪ್ರವಾಸೋದ್ಯಮ ಜಿಲ್ಲೆಯಾಗಿರುವ ಕೊಡಗಿನಲ್ಲಿ ಹೋಟೆಲ್, ರೆಸಾರ್ಟ್,​ ಹೋಮ್ ಸ್ಟೇಗಳಲ್ಲಿ ಕಮರ್ಷಿಯಲ್ ಸಿಲಿಂಡರ್​ಗಳಿಲ್ಲದೆ ಎಲ್ಲರೂ ಪರದಾಡುವಂತಾಗಿದೆ.

ಇದನ್ನೂ ಓದಿ: ಕರ್ನಾಟಕದಾದ್ಯಂತ ಆಟೋ ಗ್ಯಾಸ್ ಹಾಹಾಕಾರ: ಬಂಕ್‌ಗಳ ಮುಂದೆ ಕಿಲೋಮೀಟರ್‌ಗಟ್ಟಲೆ ಕ್ಯೂ, ಚಾಲಕರ ಬದುಕು ದುಸ್ತರ

ಇದುವರೆಗೂ ಹೋಟೆಲ್​ಗಳಲ್ಲಿ ಅಡುಗೆ ತಯಾರಿಸಲು ಹೊಗೆ ಮುಕ್ತ ಗ್ಯಾಸನ್ನ ಬಳಸಲಾಗಿತ್ತಿತ್ತು. ಆದರೆ ಇದೀಗ ವಾಣಿಜ್ಯ ಸಿಲಿಂಡರ್​ಗಳ ಕೊರತೆಯಿಂದಾಗಿ ಗ್ಯಾಸ್ ಬಳಸಿ ಅಡುಗೆ ಮಾಡಲಾಗುತ್ತಿಲ್ಲ. ಹಾಗಾಗಿ ಸದ್ಯ ಇದ್ದಿಲುಗಳಿಗೆ ಬೇಡಿಕೆ ಬಂದಿದೆ. ಸಾಂಪ್ರದಾಯಿಕ ಶೈಲಿಯಲ್ಲೇ ಗ್ರಿಲ್ ಚಿಕನ್, ತಂದೂರಿ ಚಿಕನ್ ಮಾಡಲು ಮುಂದಾಗಿದ್ದಾರೆ. ಹಾಗಾಗಿ ಮಡಿಕೇರಿಯಲ್ಲಿ ಇದ್ದಿಲುಗಳಿಗೆ ಬೇಡಿಕೆ ಬಂದಿದೆ.

ಸೌದೆಗೆ ಬೇಡಿಕೆ: ಕೆಜಿಗೆ 8 ರೂ ಮಾರಾಟ

ಇದೇ ವೇಳೆ ಸೌದೆಗೂ ಕೂಡ ಜಿಲ್ಲೆಯಲ್ಲಿ ಭಾರೀ ಬೇಡಿಕೆ ವ್ಯಕ್ತವಾಗಿದೆ. ಇದುವರೆಗೂ ಸಾಮಾನ್ಯವಾಗಿ ಹಳ್ಳಿಗಳಲ್ಲಿ ಮನೆಗಳಲ್ಲಿ ಮಾತ್ರ ಸೌದೆಗಳನ್ನ ಬಳಕೆ ಮಾಡುತ್ತಿದ್ದರು. ಆದರೆ ಇದೀಗ ಹೋಟೆಲ್, ರೆಸಾರ್ಟ್​ಗಳಲ್ಲೂ ಸೌದೆ ಒಲೆಗಳನ್ನ ಬಳಕೆ ಮಾಡಲಾಗುತ್ತಿದೆ. ಹಾಗಾಗಿ ಸೌದೆ ಡಿಪೋಗಳು ಹಾಗೂ ಹಳೆ ಮನೆಯ ಸಾಮಾಗ್ರಿ ಮಾರಾಟ ಕೇಂದ್ರಗಳಲ್ಲೂ ಸೌದೆಗಳಿಗೆ ಬೇಡಿಕೆ ಇದೆ. ಕೆಜಿಗೆ 8 ರೂ ನಂತೆ ಮಾರಾಟ ಮಾಡಲಾಗುತ್ತಿದೆ.

ಇದನ್ನೂ ಓದಿ: ರಾಜ್ಯದಲ್ಲಿ ಗ್ಯಾಸ್ ಸಮಸ್ಯೆ ಮಧ್ಯೆ ಆಘಾತ! ಸಿಲಿಂಡರ್​ ಸಾಗಿಸ್ತಿದ್ದ ಲಾರಿ ಪಲ್ಟಿ

ಜಿಲ್ಲೆಯ ಪ್ರತಿಷ್ಠಿತ ಹೋಟೆಲ್, ರೆಸಾರ್ಟ್​ಗಳ ಬಾಣಸಿಗರೆಲ್ಲರೂ ಹಳೆಯ ಸೌದೆ ಒಲೆಗಳಿಗೆ ಪರಿವರ್ತನೆಯಾಗಿದ್ದಾರೆ. ಅಷ್ಟೇ ಅಲ್ಲದೆ ಈಗ ಕೊಡಗಿನ ಕಾಫಿ ತೋಟಗಳಲ್ಲಿ ಬೇಕಾದಷ್ಟು ಸೌದೆಗಳು ಸಿಗ್ತಾ ಇರೋದು ಬೇಡಿಕೆ ತಕ್ಕಷ್ಟು ಪೂರೈಕೆ ದೊರೆಯುವಂತೆ ಮಾಡಿದೆ. ಹಾಗಾಗಿ ಸದ್ಯಕ್ಕೆ ಕೊಡಗಿನಲ್ಲಿ ಅಡುಗೆಗಂತೂ ಯಾವುದೇ ಅಡ್ಡಿ ಆತಂಕವಿಲ್ಲ.

ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.

Source link

Leave a Reply

Your email address will not be published. Required fields are marked *