ಗ್ಲಾಮರ್ ಕ್ವೀನ್ ತಮನ್ನಾ ಈಗ ಅಪ್ಪಟ ಗೃಹಿಣಿ: 11 ವರ್ಷದ ಬಳಿಕ ರವಿತೇಜ ಜೊತೆ

ಗ್ಲಾಮರ್ ಕ್ವೀನ್ ತಮನ್ನಾ ಈಗ ಅಪ್ಪಟ ಗೃಹಿಣಿ: 11 ವರ್ಷದ ಬಳಿಕ ರವಿತೇಜ ಜೊತೆ

ತಮನ್ನಾ ಭಾಟಿಯಾ (Tamannah Bhatia), ಪ್ರಸ್ತುತ ಭಾರತೀಯ ಚಿತ್ರರಂಗದ ನಂಬರ್ 1 ‘ಐಟಂ ಗರ್ಲ್’. ತಮನ್ನಾ ಭಾಟಿಯಾ ಐಟಂ ಹಾಡಿಗೆ ಡ್ಯಾನ್ಸ್ ಮಾಡಿದರೆಂದರೆ ಆ ಸಿನಿಮಾ ಸೂಪರ್ ಹಿಟ್, ಆ ಹಾಡು ಸಹ ಸೂಪರ್ ಹಿಟ್ ಆಗಿಯೇ ತೀರುತ್ತದೆ ಎಂಬುದು ನಿರ್ಮಾಪಕ, ನಿರ್ದೇಶಕರುಗಳ ನಂಬಿಕೆ. ಇದೇ ಕಾರಣಕ್ಕೆ ತಮನ್ನಾಗೆ ಈಗ ಸಿನಿಮಾಗಳಿಗಿಂತಲೂ ಐಟಂ ಹಾಡುಗಳ ಆಫರ್ ಹೆಚ್ಚು ಬರುತ್ತಿದೆ. ಅದು ಮಾತ್ರವೇ ಅಲ್ಲ, ತಮನ್ನಾ ಭಾಟಿಯಾ ಈಗ ಐಟಂ ಹಾಡಿಗೆ ಅತಿ ಹೆಚ್ಚು ಸಂಭಾವನೆ ಪಡೆವ ನಟಿ ಸಹ ಹೌದು.

ಗ್ಲಾಮರ್ ಕ್ವೀನ್ ಎಂದೇ ಖ್ಯಾತವಾಗಿರುವ ತಮನ್ನಾ ಭಾಟಿಯಾಗೆ ಇದೀಗ ಅವರ ಟ್ರೆಂಡ್​ಗೆ ವಿರುದ್ಧವಾದ ಪಾತ್ರ ದೊರೆತಿದೆ. ತಮನ್ನಾ ಭಾಟಿಯಾ ಅಪ್ಪಟ ಗೃಹಿಣಿಯ ಪಾತ್ರದಲ್ಲಿ ನಟಿಸಲಿದ್ದಾರೆ. ಅದೂ ಪೌರಾಣಿಕ ಮಾದರಿಯ ಕತೆ ಹೊಂದಿರುವ ಸಿನಿಮಾನಲ್ಲಿ. ನಟಿ ತಮನ್ನಾ ಭಾಟಿಯಾ ಸ್ವತಃ ಮಹಾನ್ ದೈವ ಭಕ್ತೆ. ಕುಟುಂಬದೊಂದಿಗೆ ದೇವಾಲಯಗಳಿಗೆ ಭೇಟಿ ಮಾಡುತ್ತಲೇ ಇರುತ್ತಾರೆ. ಇದೀಗ ಅವರಿಗೆ ದೇವರ ಮಹಿಮೆಯ ಕತೆಯುಳ್ಳ ಸಿನಿಮಾನಲ್ಲಿ ನಾಯಕಿ ಪಾತ್ರ ದೊರೆತಿದೆ.

ಇದನ್ನೂ ಓದಿ:ಮತ್ತೊಮ್ಮೆ ರವಿತೇಜ ಜೊತೆಗೆ ನಟಿಸಲಿದ್ದಾರೆ ಶ್ರೀಲೀಲಾ: ಇದು ಮೂರನೇ ಸಿನಿಮಾ

ರವಿತೇಜ ನಟಿಸುತ್ತಿರುವ ‘ಇರುಮುಡಿ’ ಸಿನಿಮಾನಲ್ಲಿ ತಮನ್ನಾ ಭಾಟಿಯಾ ನಾಯಕಿಯಾಗಿ ಆಯ್ಕೆ ಆಗಿದ್ದಾರೆ. ‘ಇರುಮುಡಿ’ ಸಿನಿಮಾದ ಹೆಸರೇ ಸೂಚಿಸುತ್ತಿರುವಂತೆ ಈ ಸಿನಿಮಾ ಅಯ್ಯಪ್ಪ ಸ್ವಾಮಿಯ ಮಹಿಮೆಯ ಕುರಿತಾದ ಕತೆಯನ್ನು ಒಳಗೊಂಡಿದೆ. ಸಿನಿಮಾನಲ್ಲಿ ರವಿತೇಜ ನಾಯಕ, ನಾಯಕಿಯ ಪಾತ್ರದಲ್ಲಿ ತಮನ್ನಾ ಭಾಟಿಯಾ ನಟಿಸಿದ್ದು, ಅವರದ್ದು ತುಸುವೂ ಗ್ಲಾಮರ್​​ಗೆ ಅವಕಾಶ ಇಲ್ಲದ ಅಪ್ಪಟ ಗೃಹಿಣಿಯ ಪಾತ್ರವಂತೆ. ಜೊತೆಗೆ ಈ ಪಾತ್ರ ಸವಾಲಿನದ್ದೂ ಆಗಿರಲಿದೆ.

2015 ರಲ್ಲಿ ಬಿಡುಗಡೆ ಆಗಿದ್ದ ರವಿತೇಜ ನಟನೆಯ ‘ಬೆಂಗಾಲ್ ಟೈಗರ್’ ಸಿನಿಮಾನಲ್ಲಿ ರವಿತೇಜ ಮತ್ತು ತಮನ್ನಾ ಭಾಟಿಯಾ ಒಟ್ಟಿಗೆ ನಟಿಸಿದ್ದರು. ಇದೀಗ 11 ವರ್ಷಗಳ ಬಳಿಕ ಈ ಜೋಡಿ ಒಟ್ಟಿಗೆ ನಟಿಸುತ್ತಿದೆ. ಇದೀಗ ಚಿತ್ರೀಕರಣಗೊಳ್ಳುತ್ತಿರುವ ‘ಇರುಮುಡಿ’ ಸಿನಿಮಾವನ್ನು ಶಿವ ನಿರ್ವಾನ ನಿರ್ದೇಶನ ಮಾಡುತ್ತಿದ್ದಾರೆ. ಮಾಸ್ ಮಲಾಸ ಆಕ್ಷನ್ ಕಾಮಿಡಿ ಸಿನಿಮಾಗಳಲ್ಲೇ ನಟಿಸುತ್ತಿದ್ದ ರವಿತೇಜ ಅವರಿಗೂ ಸಹ ಈ ಸಿನಿಮಾ ಭಿನ್ನವಾದ ಸಿನಿಮಾ ಆಗಿರಲಿದೆ.

ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Source link

Leave a Reply

Your email address will not be published. Required fields are marked *