
ನವದೆಹಲಿ, ಏಪ್ರಿಲ್ 6: ವಿಕ್ಸ್ ಚಾಕೋಲೇಟ್ ಖರೀದಿ ಮಾಡಲು ಅಂಗಡಿಗೆ ಬಂದ ಕಳ್ಳನೊಬ್ಬ ಅಂಗಡಿಯ ಮಾಲೀಕಳ ಕುತ್ತಿಗೆಯಿಂದ ಚಿನ್ನದ ಸರವನ್ನು ಎಳೆದುಕೊಂಡಿದ್ದಾನೆ. ದಿನಸಿ ಅಂಗಡಿಯಲ್ಲಿ ನಡೆದ ಈ ಚಿನ್ನದ ಸರ ಕಿತ್ತುಕೊಂಡ ಘಟನೆ ಅಲ್ಲಿನ ಸಿಸಿಟಿವಿಯಲ್ಲಿ ಸೆರೆಯಾಗಿದೆ. ಅದರಲ್ಲಿ ಕಳ್ಳನ ಮುಖವೂ ಸ್ಪಷ್ಟವಾಗಿ ದಾಖಲಾಗಿದೆ. ಸಂಜೆ ದಿನಸಿ ಅಂಗಡಿಗೆ ಬಂದ ಅಪರಿಚಿತನೊಬ್ಬ ವಿಕ್ಸ್ ಚಾಕೋಲೇಟ್ಗಳನ್ನು ಕೇಳಿದ. ಇದಕ್ಕೆ ಅಂಗಡಿಯಲ್ಲಿದ್ದ ಮಹಿಳೆ ಅವನಿಗೆ ವಿಕ್ಸ್ ಕೊಟ್ಟಳು. ಆಗ ಚಿಲ್ಲರೆ ಹಣ ನೀಡಲು ಹತ್ತಿರ ಬಂದ ಆ ಕಳ್ಳ ಆಕೆಯ ಕುತ್ತಿಗೆಯಲ್ಲಿದ್ದ ಚಿನ್ನದ ಸರವನ್ನು ಕಟ್ ಮಾಡಿಕೊಂಡು ಓಡಿದ್ದಾನೆ. ಆತ ದಿಢೀರೆಂದು ಈ ರೀತಿ ಮಾಡಿದ್ದರಿಂದ ಆಘಾತಕ್ಕೊಳಗಾದ ಮಹಿಳೆ ಗಂಡನನ್ನು ಕರೆದಿದ್ದಾಳೆ. ನಂತರ ಕುಟುಂಬ ಸದಸ್ಯರು ಹೊರಬಂದು ಕಳ್ಳನನ್ನು ಹಿಡಿಯಲು ಓಡಿಹೋಗಿದ್ದಾರೆ. ಆದರೆ, ಕಳ್ಳ ತಪ್ಪಿಸಿಕೊಂಡಿದ್ದಾನೆ. ಇದು ಎಲ್ಲಿ ನಡೆದಿದೆ ಎಂಬುದು ಸ್ಪಷ್ಟವಾಗಿಲ್ಲ. ಈ ವೀಡಿಯೊ ಸಾಮಾಜಿಕ ಮಾಧ್ಯಮಗಳಲ್ಲಿ ವೈರಲ್ ಆಗುತ್ತಿದೆ.
ಇನ್ನಷ್ಟು ರಾಷ್ಟ್ರೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ