
ಬಾಲಿವುಡ್ನ ಖ್ಯಾತ ರೋಶನ್ ಕುಟುಂಬದಿಂದ ಮತ್ತೊಬ್ಬ ಪ್ರತಿಭೆ ಚಿತ್ರರಂಗಕ್ಕೆ ಬರಲು ಸಿದ್ಧವಾಗುತ್ತಿದೆ. ಹೃತಿಕ್ ರೋಷನ್ ಮತ್ತು ಸುಸೇನ್ ಖಾನ್ ಅವರ ಕಿರಿಯ ಪುತ್ರ, 17ರ ಪ್ರಾಯದ ಹೃದಾನ್ ರೋಷನ್ (Hridaan Roshan) ಅವರು ಸಿನಿಮಾ ನಿರ್ಮಾಣದಲ್ಲಿ ಉನ್ನತ ಶಿಕ್ಷಣ ಪಡೆಯಲು ಅಮೆರಿಕಕ್ಕೆ ಹಾರುತ್ತಿದ್ದಾರೆ. ಅಲ್ಲಿನ ಪ್ರತಿಷ್ಠಿತ ವಿಶ್ವವಿದ್ಯಾಲಯದಲ್ಲಿ ಸಿನಿಮಾ ಮೇಕಿಂಗ್ ಕಲಿಯುತ್ತಿದ್ದಾರೆ. ಈ ಬಗ್ಗೆ ಮಾಹಿತಿ ಸಿಕ್ಕಿದೆ. ಶಿಕ್ಷಣ ಮುಗಿಸಿದ ಬಳಿಕ ಅವರು ಕೂಡ ತಂದೆ ಹೃತಿಕ್ ರೋಷನ್ (Hrithik Roshan) ರೀತಿಯೇ ಚಿತ್ರರಂಗದಲ್ಲಿ ಭವಿಷ್ಯ ಕಟ್ಟಿಕೊಳ್ಳಲಿದ್ದಾರೆ.
ಹೃದಾನ್ ಅವರು ಅಮೆರಿಕದ ಪ್ರಸಿದ್ಧ ‘ಲ ಫಿಲ್ಮ್ ಮತ್ತು ಟೆಲಿವಿಷನ್ ಪ್ರೊಡಕ್ಷನ್ ಕೋರ್ಸ್ಗೆ ದಾಖಲಾಗಿದ್ದಾರೆ. ಈ ವಿಶ್ವವಿದ್ಯಾಲಯವು ವಿಶ್ವದಾದ್ಯಂತ ಸಿನಿಮಾ ರಂಗಕ್ಕೆ ಅನೇಕ ದಿಗ್ಗಜರನ್ನು ನೀಡಿದ ಖ್ಯಾತಿ ಹೊಂದಿದೆ. ಹೃದಾನ್ ಅವರ ಶಾಲೆಯಾದ ‘ಅಮೆರಿಕನ್ ಸ್ಕೂಲ್ ಆಫ್ ಬಾಂಬೆ’ ಈ ಸುದ್ದಿಯನ್ನು ಇನ್ಸ್ಟಾಗ್ರಾಮ್ನಲ್ಲಿ ಹಂಚಿಕೊಳ್ಳುವ ಮೂಲಕ ಹೃದಾನ್ಗೆ ಅಭಿನಂದನೆ ಸಲ್ಲಿಸಿದೆ.
‘ಹೃದಾನ್ ಯುಎಸ್ಸಿಯಲ್ಲಿ ಸಿನಿಮಾ ಕಲಿಯಲಿದ್ದಾರೆ ಎಂಬುದು ನಮಗೆ ಆಶ್ಚರ್ಯವೇನಲ್ಲ. ನಿಮ್ಮ ಬಗ್ಗೆ ನಮಗೆ ಹೆಮ್ಮೆಯಿದೆ’ ಎಂದು ಶಾಲೆಯು ಸೋಶಿಯಲ್ ಮೀಡಿಯಾ ಖಾತೆಯಲ್ಲಿ ಪೋಸ್ಟ್ ಮಾಡಲಾಗಿದೆ. ಇದಕ್ಕೆ ಹೃತಿಕ್ ಅವರ ಕುಟುಂಬದವರು ಮತ್ತು ಸ್ನೇಹಿತರು ಮೆಚ್ಚುಗೆ ಸೂಚಿಸಿದ್ದಾರೆ.
View this post on Instagram
ಹೃದಾನ್ ಅವರ ರಕ್ತದಲ್ಲೇ ಸಿನಿಮಾ ಇದೆ ಎನ್ನಬಹುದು. ಅವರ ತಂದೆ ಹೃತಿಕ್ ರೋಷನ್ ಜಾಗತಿಕ ಮಟ್ಟದ ನಟರಾಗಿದ್ದರೆ, ತಾತ ರಾಕೇಶ್ ರೋಷನ್ ಖ್ಯಾತ ನಟ ಮತ್ತು ಯಶಸ್ವಿ ನಿರ್ದೇಶಕ. ಇನ್ನು ತಾಯಿಯ ಕಡೆಯಿಂದ ಸಂಜಯ್ ಖಾನ್ ಕೂಡ ಚಿತ್ರರಂಗದ ದೊಡ್ಡ ಹೆಸರು. ಈಗ ಹೃದಾನ್ ಚಿತ್ರನಿರ್ಮಾಣದ ತಾಂತ್ರಿಕ ಮಗ್ಗಲುಗಳನ್ನು ಕಲಿಯುತ್ತಿರುವುದು ಅವರು ಭವಿಷ್ಯದಲ್ಲಿ ತಂದೆಯಂತೆ ನಟರಾಗುತ್ತಾರೋ ಅಥವಾ ತಾತನಂತೆ ನಿರ್ದೇಶಕರಾಗುತ್ತಾರೋ ಎಂಬ ಕುತೂಹಲ ಮೂಡಿಸಿದೆ.
ಇದನ್ನೂ ಓದಿ: ಹೃತಿಕ್ ರೋಷನ್ಗೆ ವಿಚಿತ್ರ ರೋಗ; ಇದ್ದಕ್ಕಿದ್ದಂತೆ ಕೆಲಸ ನಿಲ್ಲಿಸುತ್ತವೆ ಕಾಲುಗಳು
ವಿಶೇಷವೆಂದರೆ, ಹೃತಿಕ್ ರೋಷನ್ ಕೂಡ ಶೀಘ್ರದಲ್ಲೇ ಕ್ಯಾಮೆರಾ ಹಿಂದೆ ನಿಲ್ಲಲು ಸಜ್ಜಾಗುತ್ತಿದ್ದಾರೆ. ತಮ್ಮ ಜನಪ್ರಿಯ ‘ಕ್ರಿಶ್’ ಸರಣಿಯ ಮುಂದಿನ ಭಾಗವನ್ನು ಹೃತಿಕ್ ಅವರೇ ನಿರ್ದೇಶಿಸುವ ಸಾಧ್ಯತೆ ಇದೆ ಎನ್ನಲಾಗುತ್ತಿದೆ. ಒಂದೆಡೆ ತಂದೆ ನಿರ್ದೇಶನದತ್ತ ಮುಖ ಮಾಡುತ್ತಿದ್ದರೆ, ಇನ್ನೊಂದೆಡೆ ಮಗ ಫಿಲ್ಮ್ ಮೇಕಿಂಗ್ ಕಲಿಯುತ್ತಿರುವುದು ರೋಶನ್ ಕುಟುಂಬದ ಸಿನಿಮಾ ಪ್ರೇಮಕ್ಕೆ ಸಾಕ್ಷಿಯಾಗಿದೆ.
ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ.