ಜಾತಕದಲ್ಲಿ ದೋಷವಿದೆ ಎಂದು ಯುವತಿ ಮೇಲೆ ಅರ್ಚಕ ಮಸಲತ್ತು: ಸಮಸ್ಯೆ ನಿವಾರಣೆ ನೆಪದಲ್ಲಿ ಅತ್ಯಾಚಾರ – Kannada News | A astrologer Arrested for physical assault On Young Woman at Chikkamagaluru

ಚಿಕ್ಕಮಗಳೂರು, (ಫೆಬ್ರವರಿ 04): ಯಾವುದೇ ಶುಭಕಾರ್ಯ ಮಾಡಬೇಕು ಅಂದ್ರು ಶಾಸ್ತ್ರ ಜ್ಯೋತಿಷ್ಯ (astrology) ಕೇಳುವುದು ವಾಡಿಕೆ, ನಂಬಿಕೆ. ಇದೆ ನಂಬಿಕೆಯನ್ನು ಬಂಡವಾಳ ಮಾಡಿಕೊಂಡ ಜ್ಯೋತಿಷಿ ಒಬ್ಬ ಮಾನಗೇಡಿ ಕೆಲಸ ಮಾಡಿದ್ದಾನೆ. ಮದುವೆಯ ಬಗ್ಗೆ ತನ್ನ ಬಳಿ ಜ್ಯೋತಿಷ್ಯ ಕೇಳಲು ಬಂದ ಯುವತಿಯ ಬಾಳಲ್ಲಿ ಜ್ಯೋತಿಷಿ (astrologer )ಚೆಲ್ಲಾಟವಾಡಿದ್ದಾನೆ. ಹೌದು..ಸಮಸ್ಯೆ ನಿವಾರಣೆ ನೆಪದಲ್ಲಿ ಯುವತಿ ಮೇಲೆ ಅತ್ಯಾಚಾರ ಎಸಗಿದ್ದಾನೆ. ಚಿಕ್ಕಮಗಳೂರು (Chikkamagaluru) ಜಿಲ್ಲೆಯ ಮೂಡಿಗೆರೆ ತಾಲೂಕು ಬಣಕಲ್‌ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಈ ಘಟನೆ ನಡೆದಿದೆ.

ಕಾಮುಕ ಅರ್ಚಕ ಕೃಷ್ಣ ರಾವ್ ಎನ್ನುವಾತ ದಾವಣಗೆರೆ ಮೂಲದ ಈ ಕ್ರಿಮಿ, 7 ವರ್ಷಗಳ ಹಿಂದಯೇ ಚಿಕ್ಕಮಗಳೂರು ಜಿಲ್ಲೆ ಮೂಡಿಗೆರೆಯ ಹೊರಟ್ಟಿ ಗ್ರಾಮಕ್ಕೆ ಬಂದು ನೆಲೆಸಿದ್ದು, ಗ್ರಾಮದ ಪಾರ್ವತಿ ಈಶ್ವರ ದೇಗುಲದ ಅರ್ಚಕನಾಗಿ ಕೆಲಸ ಮಾಡಿಕೊಂಡಿದ್ದ. ಜೊತೆ ಜೊತೆಗೆ ಜ್ಯೋತಿಷ್ಯವನ್ನ ಸಹ ಹೇಳುತ್ತಿದ್ದ. ಹೀಗಾಗಿ ದಲಿತ ಸಮುದಾಯದ 23 ವರ್ಷದ ಯುವತಿಯೊಬ್ಳು ಬಂದಿದ್ದು, ಮದ್ವೆ ವಿಷಯದಲ್ಲಿ ತೊಂದರೆ ಆಗುತ್ತಿದೆ ಎಂದು ಅಳಲು ತೋಡಿಕೊಂಡಿದ್ದಾಳೆ. ಆಕೆಯ ಮುಗ್ದತೆಯನ್ನೇ ಬಂಡವಾಳ ಮಾಡಿಕೊಂಡ ಕೃಷ್ಣ ರಾವ್, ಯುವತಿ ಮೇಲೆ ಹಲವು ಸಲ ಅತ್ಯಾಚಾರ ಮಾಡಿದ್ದಾನೆ.

ಇದನ್ನೂ ಓದಿ: ಜ್ಯೋತಿಷಿ ಹೇಳ್ತಿದ್ದವನ ಭವಿಷ್ಯವೇ ತಲೆಕೆಳಗಾಯ್ತು: ಕಮಲಾಕರ್ ಭಟ್‌-ಸುಚಿತ್ರಾಳ ಮತ್ತಷ್ಟು ಶೋಕಿ ಪುರಾಣ ಬಯಲು

ಜಾತಕದಲ್ಲಿ ದೋಷ ಇದೆ ಎಂದು ಹೇಳಿದ್ದು, ಅದನ್ನು ಸಮಸ್ಯೆ ನಿವಾರಣೆ ಹೆಸರಲ್ಲಿ ಯುವತಿ ಮೇಲೆ ಕಳೆದೊಂದು ವರ್ಷದಲ್ಲಿ ಹಲವು ಸಲ ಅತ್ಯಾಚಾರ ಮಾಡಿದ್ದಾನೆ. ಇದೀಗ ಈಗ ಯುವತಿ ಬಣಕಲ್ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದು, ಈ ದೂರನ್ನಾಧರಿಸಿ ಪೊಲೀಸರು, ಆರೋಪಿ ವಿರುದ್ಧ BNS ಕಲಂ 64(2)(m) ಹಾಗೂ ಅತ್ಯಾಚಾರ ತಡೆ ಕಾಯ್ದೆಯಡಿ ಪ್ರಕರಣ ದಾಖಲಿಸಿಕೊಂಡಿದ್ದಾರೆ. ಅದರ ಜೊತೆಗೆ ಅಟ್ರಾಸಿಟಿ ಕೇಸ್ ಕೂಡ ದಾಖಲಿಸಿಕೊಂಡಿದ್ದು, ಆರೋಪಿಯನ್ನ ಬಂಧಿಸಿ ವಿಚಾರಣೆ ನಡೆಸುತ್ತಿದ್ದಾರೆ.

ಕರ್ನಾಟಕದ ಮತ್ತಷ್ಟು ಸುದ್ದಿಗಾಗಿ ಇಲ್ಲಿ ಕ್ಲಿಕ್ ಮಾಡಿ

Source link

Leave a Reply

Your email address will not be published. Required fields are marked *