ಸೋಷಿಯಲ್ ಮೀಡಿಯಾದಲ್ಲಿ ಇತ್ತೀಚೆಗೆ “ಜಿಮ್‌ಗೆ ಲವ್ ಇರುವವರು ಹೋಗಬಾರದು, ಇದು ಸಿಂಗಲ್ಸ್‌ಗೆ ಮಾತ್ರ” ಎಂಬ ಮಾತುಗಳು ಮತ್ತು ಮೀಮ್ಸ್‌ಗಳು (Memes) ಸಾಕಷ್ಟು ವೈರಲ್ ಆಗುತ್ತಿವೆ. ಆದರೆ, ವೈಜ್ಞಾನಿಕವಾಗಿ ಇಂತಹ ಯಾವುದೇ ನಿಯಮವಿಲ್ಲ. ಇದು ಕೇವಲ ತಮಾಷೆಗಾಗಿ ಹಾಗೂ ಕೆಲವೊಂದು ‘ಬ್ರೋ ಕೋಡ್’ (Bro Code) ಸಂಸ್ಕೃತಿಯ ಭಾಗವಾಗಿ ವೈರಲ್ ಮಾಡುತ್ತಿದ್ದಾರೆ.
ಅನೇಕ ಫಿಟ್‌ನೆಸ್ ಪ್ರಿಯರು ಜಿಮ್ ಅನ್ನು ತಮ್ಮ ಶಕ್ತಿ ಮತ್ತು ಏಕಾಗ್ರತೆಯ ಕೇಂದ್ರವೆಂದು ಪರಿಗಣಿಸುತ್ತಾರೆ. “ಲವ್” ಅಥವಾ ಸಂಬಂಧದಲ್ಲಿದ್ದಾಗ ಮನಸ್ಸು ಬೇರೆಡೆಗೆ ಹರಿಯಬಹುದು ಹಾಗೂ ಜಿಮ್‌ನಲ್ಲಿ ಸಂಗಾತಿಯೊಂದಿಗೆ ಕಾಲಹರಣ ಮಾಡಬಹುದು ಎಂಬ ಕಾರಣಕ್ಕೆ, ಸಿಂಗಲ್ ಆಗಿದ್ದಾಗ ಮಾತ್ರ ದೇಹದ ಮೇಲೆ ಸಂಪೂರ್ಣ ಗಮನ ಹರಿಸಲು ಸಾಧ್ಯ ಎಂಬುದು ಅನೇಕರ ವಾದ.
ಸಾಮಾನ್ಯವಾಗಿ ಪ್ರೀತಿಯಲ್ಲಿ ಸೋತವರು ತಮ್ಮ ನೋವನ್ನು ಮರೆಯಲು ಮತ್ತು ತಮ್ಮನ್ನು ತಾವು ಉತ್ತಮವಾಗಿ ರೂಪಿಸಿಕೊಳ್ಳಲು ಜಿಮ್ ಸೇರುತ್ತಾರೆ. ಇದನ್ನು “Revenge Body” ಎನ್ನಲಾಗುತ್ತದೆ. ಹೀಗಾಗಿ, ಜಿಮ್ ಎಂಬುದು ಕೇವಲ ದೈಹಿಕ ವ್ಯಾಯಾಮಕ್ಕಲ್ಲ, ಮಾನಸಿಕವಾಗಿ ಗಟ್ಟಿಯಾಗಲು ಬಯಸುವ ‘ಸಿಂಗಲ್ಸ್’ಗೆ ಇರುವ ಜಾಗ ಎಂಬ ಭಾವನೆ ಮೂಡಿದೆ.
ಇದನ್ನೂ ಓದಿ: ‘ವಿಶ್ವದ ಅತ್ಯುತ್ತಮ ಆಗಮನ ನಿಲ್ದಾಣ’ ಪ್ರಶಸ್ತಿ ಪಡೆದ ಕೆಂಪೇಗೌಡ ವಿಮಾನ ನಿಲ್ದಾಣ: ವೇಗ, ಸ್ವಚ್ಛತೆ ಎಲ್ಲದರಲ್ಲೂ ನಂಬರ್ ಒನ್
ಜಿಮ್‌ಗೆ ಜೋಡಿಯಾಗಿ ಬರುವವರು ವರ್ಕೌಟ್ ಮಾಡುವುದಕ್ಕಿಂತ ಹೆಚ್ಚಾಗಿ ಹರಟೆ ಹೊಡೆಯುತ್ತಾರೆ ಅಥವಾ ಫೋಟೋ ಶೂಟ್‌ನಲ್ಲಿ ಬ್ಯುಸಿಯಾಗಿರುತ್ತಾರೆ ಎಂಬ ಟೀಕೆಗಳಿವೆ. ಇದು ಸೀರಿಯಸ್ ಆಗಿ ವರ್ಕೌಟ್ ಮಾಡುವವರಿಗೆ ಕಿರಿಕಿರಿ ಉಂಟುಮಾಡಬಹುದು. ಹಾಗಾಗಿ, “ಸಿಂಗಲ್ಸ್ ಮಾತ್ರ ಬನ್ನಿ” ಎಂಬ ಜೋಕ್ ವೈರಲ್ ಆಗುತ್ತಿದೆ. ಸಿಂಗಲ್ಸ್ ಆಗಿದ್ದಾಗ ಯಾರ ಮೆಸೇಜ್ ಅಥವಾ ಕರೆಗಾಗಿ ಕಾಯುವ ಅವಶ್ಯಕತೆ ಇರುವುದಿಲ್ಲ. ಮೊಬೈಲ್ ಪಕ್ಕಕ್ಕಿಟ್ಟು ಕೇವಲ ತೂಕ ಎತ್ತುವ ಕಡೆ ಗಮನ ಕೊಡಬಹುದು ಎಂಬ ಮಾತಿದೆ.
ಜೀವನಶೈಲಿ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ