
ಜೀ ಕನ್ನಡದಲ್ಲಿ (Zee Kannada) ಶೀಘ್ರವೇ ಎರಡೆರಡು ರಿಯಾಲಿಟಿ ಶೋಗಳು ಆರಂಭ ಆಗಲಿವೆ! ಹೌದು, ‘ಸರಿಗಮಪ ಲಿಟ್ಲ್ ಚಾಂಪ್ಸ್’ಗೆ ಆಡಿಷನ್ ನಡೆದಿದ್ದು, ಶೀಘ್ರವೇ ಶೋ ಪ್ರಸಾರ ಆರಂಭಿಸಲಿದೆ. ಅದೇ ರೀತಿ, ‘ಜೋಡಿ ನಂಬರ್ 1’ ಹೆಸರಿನ ರಿಯಾಲಿಟಿ ಶೋ ಕೂಡ ಬರುತ್ತಿದೆ. ಈ ಶೋನಲ್ಲಿ ಯಾರೆಲ್ಲ ಪಾಲ್ಗೊಳ್ಳಲಿದ್ದಾರೆ ಎನ್ನುವ ಪ್ರಶ್ನೆಗೆ ಉತ್ತರ ಸಿಕ್ಕಿದೆ. ಅಮೃತವರ್ಷಿಣಿ ರಜಿನಿ, ಬಿಗ್ ಬಾಸ್ ಧನರಾಜ್ ಮೊದಲಾದವರು ಶೋನ ಭಾಗ ಆಗಲಿದ್ದಾರೆ ಎಂಬುದು ವಿಶೇಷ.
ಜೀ ಕನ್ನಡದಲ್ಲಿ ಹಲವು ರಿಯಾಲಿಟಿ ಶೋಗಳು ಪ್ರಸಾರ ಕಂಡಿವೆ. ಇದರಲ್ಲಿ ಬಹುತೇಕವು ಯಶಸ್ವಿ ಕಂಡಿದೆ. ಅದರಲ್ಲಿ ‘ಸರಿಗಮಪ’ ಕೂಡ ಒಂದು. ಈ ಶೋ ಶೀಘ್ರವೇ ಪ್ರಸಾರ ಕಾಣಲಿದೆ ಎಂಬ ಪ್ರೋಮೋ ಗಮನ ಸೆಳೆದಿದೆ. ಈ ಪ್ರೋಮೋ ರಿಲೀಸ್ ಆದ ಬೆನ್ನಲ್ಲೇ ಮತ್ತೊಂದು ಪ್ರೋಮೋ ಬಿಡುಗಡೆ ಆಗಿದ್ದು, ಇದರಲ್ಲಿ ಜೋಡಿ ನಂಬರ್ 1 ರಿಯಾಲಿಟಿ ಶೋ ಬಗ್ಗೆ ಮಾಹಿತಿ ನೀಡಲಾಗಿದೆ.
View this post on Instagram
ಜನಸಾಮಾನ್ಯರಿಂದ ಹಿಡಿದು ಸೆಲೆಬ್ರಿಟಿ ದಂಪತಿವರೆಗೆ ಕಿತ್ತಾಟ ಇದ್ದೇ ಇರುತ್ತದೆ. ಜೊತೆ ಪ್ರೀತಿ ಕೂಡ ಇರುತ್ತದೆ. ಎಲ್ಲಿ ಜಗಳ ಇರುತ್ತದೆಯೋ ಅಲ್ಲಿ ಪ್ರೀತಿ ಇರುತ್ತದೆ ಎಂಬ ಮಾತಿದೆ. ಇದನ್ನು ತೋರಿಸುವ ರೀತಿಯಲ್ಲಿ ‘ಜೋಡಿ ನಂಬರ್ 1’ ಬರುತ್ತಿದೆ. ಇದಕ್ಕೆ ಟ್ರೆಂಡ್ನಲ್ಲಿರೋ ಜೋಡಿಗಳನ್ನೇ ಆಯ್ಕೆ ಮಾಡಿಕೊಳ್ಳಲಾಗಿದೆ ಎಂಬುದು ವಿಶೇಷ.
ಇದನ್ನೂ ಓದಿ: ‘ಜೀ ಕನ್ನಡ’ದಲ್ಲಿ ಮಾರ್ಚ್ 9ರಿಂದ ‘ಕೃಷ್ಣ ರುಕ್ಕು’; ಇದು ಪ್ರೀತಿ-ದ್ವೇಷದ ಕಥೆ
ಹೌದು, ‘ಜೋಡಿ ನಂಬರ್ 1’ ರಿಯಾಲಿಟಿ ಶೋನಲ್ಲಿ ಧನರಾಜ್ ಹಾಗೂ ಅವರ ಪತ್ನಿ ಪ್ರಜ್ಞಾ ಆಗಮಿಸಲಿದ್ದಾರೆ. ಇವರು ರೀಲ್ಸ್ ಮಾಡಿ ಟ್ರೆಂಡ್ ಆದವರು. ಇನ್ನು, ರಂಜನಿ ಹಾಗೂ ಅರುಣ್ ಗೌಡ ಅವರು ದಾಂಪತ್ಯ ಜೀವನಕ್ಕೆ ಕಾಲಿಟ್ಟವರು. ಮೊದಲು ಫ್ರೆಂಡ್ಸ್ ಆಗಿದ್ದ ಇವರು ಈಗ ಪತಿ-ಪತ್ನಿ ಆಗಿದ್ದಾರೆ. ಇವರು ಕೂಡ ಜೋಡಿ ನಂಬರ್ ಸ್ಪರ್ಧಿಗಳಾಗಿದ್ದಾರೆ. ಕೋಟೆ ಪ್ರಭಾಕರ್-ಮಾಲತಿ, ಜಯರಾಮ್-ಗೀತಾ ಭಾರತಿ, ನಿರೀಕ್ಷಾ-ರುದ್ರ ಶೋನ ಭಾಗ ಆಗಲಿದ್ದಾರೆ.
ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ.