
ಧನ್ವೀರ್ ಅವರು ಮಾರ್ಚ್ 13ರಂದು ಜೈಲಿಗೆ ತೆರಳಿದ್ದಾರೆ. ಈ ವೇಳೆ ದರ್ಶನ್ ಅವರನ್ನು ಭೇಟಿ ಮಾಡಿ ಹೊರ ಬಂದಿದ್ದಾರೆ. ಈ ಸಂದರ್ಭದ ವಿಡಿಯೋ ಟಿವಿ9 ಕನ್ನಡಕ್ಕೆ ಲಭ್ಯವಾಗಿದೆ. ಧನ್ವೀರ್ಗೆ ದರ್ಶನ್ ಮೇಲೆ ವಿಶೇಷ ಪ್ರೀತಿ ಇದೆ. ಸದಾ ದರ್ಶನ್ಗೆ ಕಾವಲಾಗಿ ನಿಂತಿದ್ದಾರೆ ಧನ್ವೀರ್. ಧನ್ವೀರ್ ಅಭಿನಯದ ‘ಹಯಗ್ರೀವ’ ಚಿತ್ರ ಕೆಲವರಿಂದ ಮೆಚ್ಚುಗೆ ಪಡೆದಿದೆ. ಈ ಬಗ್ಗೆ ದರ್ಶನ್ ಜೊತೆ ಅವರು ಚರ್ಚಿಸಿರಬಹುದು ಎನ್ನಲಾಗಿದೆ.
ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ.