ಜೈಲುಗಳಲ್ಲಿ ಅಕ್ರಮ ಚಟುವಟಿಕೆ ತಡೆಗೆ ಅಲೋಕ್ ಕುಮಾರ್ ದಿಟ್ಟ ಕ್ರಮ: ಕೈದಿಗಳ ಭೇಟಿಗೆ ಹೊಸ ರೂಲ್ಸ್

ಜೈಲುಗಳಲ್ಲಿ ಅಕ್ರಮ ಚಟುವಟಿಕೆ ತಡೆಗೆ ಅಲೋಕ್ ಕುಮಾರ್ ದಿಟ್ಟ ಕ್ರಮ:  ಕೈದಿಗಳ ಭೇಟಿಗೆ ಹೊಸ ರೂಲ್ಸ್

ಬೆಂಗಳೂರು, (ಮಾರ್ಚ್ 09): ಕರ್ನಾಟಕದ ಜೈಲುಗಳಲ್ಲಿ ( Karnataka jail) ಅಕ್ರಮ ಚಟುವಟಿಕೆಗಳಿಗೆ ಕಡಿವಾಣ ಹಾಕಲು ಕಾರಾಗೃಹ ಮತ್ತು ಸುಧಾರಣಾ ಸೇವಾ ಇಲಾಖೆಯ ಡಿಜಿಪಿ ಅಲೋಕ್ ಕುಮಾರ್ (Alok Kumar) ದಿಟ್ಟ ಹೆಜ್ಜೆ ಇಟ್ಟಿದ್ದಾರೆ. ವರ್ಷಾನುಗಟ್ಟಲೆ ಒಂದೇ ಕಡೆ ಕೆಲಸ ಮಾಡುತ್ತಿರುವ ಜೈಲು ಸಿಬ್ಬಂದಿಯನ್ನು ವರ್ಗಾವಣೆ ಮಾಡಲು ಪ್ಲಾನ್ ಮಾಡಲಾಗಿದೆ. ಇನ್ನು ಜೈಲಿನಲ್ಲಿ ಕೈದಿಗಳ ಉಟೋಪಚಾರದಲ್ಲೂ ಸಹ ಕೆಲ ಮಹತ್ವದ ಬದಲಾವಣೆ ತಂದಿದ್ದು, ಇದೀಗ ಜೈಲುಗಳಲ್ಲಿರುವ ಕೈದಿಗಳ ವಿಶೇಷ ಸಂದರ್ಶನಕ್ಕೆ ಹೊಸ ರೂಲ್ಸ್ ಮಾಡಿದ್ದಾರೆ. ಕೈದಿಗಳಿಗೆ ಗಂಭೀರ ಅನಾರೋಗ್ಯ, ಗಾಯದಿಂದ ನಡೆಯಲು ಆಗದಿದ್ದಾಗ ತಿಂಗಳಿಗೆ ಒಮ್ಮೆ ಕುಟುಂಬದವರಿಗೆ ಭೇಟಿ ಮಾಡಲು ಅವಕಾಶ ನೀಡಲಾಗಿದೆ. ಈ ಸಂಬಂಧ ಇಂದು (ಮಾರ್ಚ್ 09) ಕಾರಾಗೃಹ ಮತ್ತು ಸುಧಾರಣೆ ಇಲಾಖೆ ಮಾರ್ಗಸೂಚಿ ಬಿಡುಗಡೆ ಮಾಡಿದೆ.

ಕೈದಿಗಳ ಭೇಟಿಗೆ ಹೊಸ ನಿಯಮಗಳು

  • ಕೈದಿಗೆ ಗಂಭೀರ ಅನಾರೋಗ್ಯ ಅಥವಾ ಗಾಯದಿಂದ ನಡೆಯಲು ಸಾಧ್ಯವಾಗದ ವೇಳೆ (ತಿಂಗಳಲ್ಲಿ ಒಮ್ಮೆ ಭೇಟಿಗೆ ಅವಕಾಶ)
  • ಕುಟುಂಬದಲ್ಲಿ ಸಾವು ಅಥವಾ ತುರ್ತು ವೈದ್ಯಕೀಯ ಪರಿಸ್ಥಿತಿ ವೇಳೆ (ಕೈದಿಗೆ ಭೇಟಿ ಮಾಡಿ ಮಾಹಿತಿ ನೀಡಲು ಅವಕಾಶ)
  •  ಬಿಡುಗಡೆಯ ದಿನಾಂಕದ ಎರಡು ತಿಂಗಳು ಮುಂಚೆ (ಕೈದಿ ಸಜೆ ಮುಗಿದಿದ್ದು ಮುಂದಿನ ಜೀವನದ ಬಗ್ಗೆ ಚರ್ಚೆ ನಡೆಸಲು ಭೇಟಿಗೆ ಅವಕಾಶ)
  • ಉದ್ಯೋಗ, ವಾಸಸ್ಥಳ, ಸಲಹೆ ಇತ್ಯಾದಿ ವ್ಯವಸ್ಥೆಗಾಗಿ ಸಂದರ್ಶನಕ್ಕೆ ಅವಕಾಶ.
  • ಕೈದಿಗಳನ್ನ ಭೇಟಿ ಮಾಡುವವರು ವಿಕಲಚೇತನರು ಅಥವಾ ಗರ್ಭಿಣಿಯರಿದ್ದರೆ (ತಿಂಗಳಿನಲ್ಲಿ ಒಮ್ಮೆ ಭೇಟಿಗೆ ಅವಕಾಶ)

ಇದನ್ನೂ ಓದಿ: ಜೈಲಿನಲ್ಲಿ ನಡೆಯುತ್ತಿರುವ ಅಕ್ರಮಗಳಿಗೆ ಬ್ರೇಕ್ ಹಾಕಲು ಹೊಸ ಅಸ್ತ್ರ ಪ್ರಯೋಗಿಸಿದ ಡಿಜಿಪಿ ಅಲೋಕ್ ಕುಮಾರ್

ಹೀಗೆ ಜೈಲಿನಲ್ಲಿರುವ ಕೈದಿಗಳನ್ನು ಕುಟುಂಬಸ್ಥರ ಭೇಟಿಗೆ ಕೆಲ ಮಾರ್ಗಸೂಚಿಗಳನ್ನು ಹೊರಡಿಸಲಾಗಿದೆ. ಇನ್ನು ಈ ರೀತಿ ವಿಶೇಷ ಸಂದರ್ಶನ ಭೇಟಿಗೆ ಮುನ್ನ ಕೆಲ ನಿಯಮಗಳನ್ನು ಸಹ ಪಾಲಿಸಬೇಕೆಂದು ಮಾರ್ಗಸೂಚಿಲ್ಲಿ ತಿಳಿಸಲಾಗಿದೆ. ಹಾಗಾದ್ರೆ, ಕೈದಿ ಭೇಟಿಗೆ ಪಾಲಿಸಬೇಕಾದ ನಿಯಮಗಳೇನು ಎನ್ನುವುದು ಈ ಕೆಳನಂತಿವೆ ನೋಡಿ.

ಕೈದಿ ಭೇಟಿಗೆ ಪಾಲಿಸಬೇಕಾದ ನಿಯಮಗಳು

  • ಆಯಾ ಜೈಲು ಮುಖ್ಯಸ್ಥರ ಲಿಖಿತ ಅನುಮತಿ ಕಡ್ಡಾಯ.
  •  ಜೈಲು ಭದ್ರತಾ ಕಾರಣಕ್ಕೆ ಸಿಬ್ಬಂದಿ ತಪಾಸಣೆಗೆ ಸಹಕಾರ ನೀಡಬೇಕು.
  •  ನಿಗಧಿತ ಸಂದರ್ಶನ ಕೊಠಡಿಯಲ್ಲಿ ಮಾತ್ರ ಅವಕಾಶ.
  •  30 ನಿಮಿಷಗಳವರೆಗೆ ಮಾತ್ರ ಸಂದರ್ಶನಕ್ಕೆ ಅವಕಾಶ.
  •  5 ಮಂದಿಗೂ ಮೀರಿ ಭೇಟಿಗೆ ಅವಕಾಶ ಇಲ್ಲ.
  • ಜೈಲು ಅಧಿಕಾರಿಯ ಮೇಲ್ವಿಚಾರಣೆ ಇರಬೇಕು.
  • ಕನಿಷ್ಠ 2 ಕೆಲಸದ ದಿನಗಳ ಮುಂಚೆ ಅರ್ಜಿ ಸಲ್ಲಿಸಬೇಕು.
  • ಅತ್ಯವಶ್ಯಕ ಕಾರಣವಿದ್ರೆ ಕಾರಾಗೃಹ DGP ಅನುಮತಿ ಅಗತ್ಯ.

ಹೀಗೆ ಜೈಲಿನಲ್ಲಿರುವ ಕೈದಿಗಳ ಭೇಟಿಗೆ ಹಾಗೂ ಭೇಟಿಗೆ ಮುನ್ನ ಕುಟುಂಬಸ್ಥರು ಪಾಲಿಸಬೇಕಾದ ನಿಯಮಗಳನ್ನು ಕಾರಾಗೃಹ ಮತ್ತು ಸುಧಾರಣೆ ಇಲಾಖೆ ಜಾರಿತೆ ತಂದಿದೆ.  ಜೈಲಿನಲ್ಲಿ ನಡೆಯುತ್ತಿರುವ ಅಕ್ರಮ ಚಟುವಟಿಕೆಗಳು ಹಾಗೂ ಕೈದಿಗಳಿಗೆ ರಾಜಾತಿಥ್ಯಕ್ಕೆ ಕಡಿವಾಣ ಹಾಕಲು ಡಿಜಿಪಿ ಅಲೋಕ್ ಕುಮಾರ್ ಈ ರೀತಿಯ ಹೊಸ ಹೊಸ ನಿಯಮಗಳನ್ನು ಜಾರಿಗೆ ತರುತ್ತಿದ್ದಾರೆ.

ಇನ್ನು ವರ್ಷಾನುಗಟ್ಟಲ್ಲೇ ಒಂದೇ ಜೈಲಿನಲ್ಲಿ ಕೆಲಸ ನಿರ್ವಹಿಸುವ ಸಿಬ್ಬಂದಿಯನ್ನೂ ಸಹ ಬೇರೆಗೆ ವರ್ಗಾವಣೆ ಮಾಡುವ ಚಿಂತನೆಗಳು ನಡೆದಿವೆ. ಯಾಕಂದ್ರೆ, ಓರ್ವ ಸಿಬ್ಬಂದಿ ಒಂದೇ ಜಾಗದಲ್ಲಿ ವರ್ಷಾನುಗಟ್ಟಲೇ ಇದ್ದರೆ ಕೈದಿಗಳೊಂದಿಗೆ ಅನ್ಯೂನ್ಯತೆಯೊಂದಿಗೆ ಇದ್ದು, ಹಣಕ್ಕಾಗಿ ಅವರಿಗೆ ಬೇಕಾದ ಸೌಲತ್ತುಗಳನ್ನು ಒದಗಿಸುವ ಸಾಧ್ಯತೆಗಳಿವೆ. ಹೀಗಾಗಿ ಕಾರಾಗೃಹ ಮತ್ತು ಸುಧಾರಣೆ ಇಲಾಖೆ ಕಟ್ಟು ನಿಟ್ಟಿನ ಕ್ರಮಕ್ಕೆ ಮುಂದಾಗಿದೆ.

ಕರ್ನಾಟಕದ ಮತ್ತಷ್ಟು ಸುದ್ದಿಗಾಗಿ ಇಲ್ಲಿ ಕ್ಲಿಕ್ ಮಾಡಿ

Source link

Leave a Reply

Your email address will not be published. Required fields are marked *