ಟಾಲಿವುಡ್​​ನಲ್ಲಿ ಕೆಟ್ಟ ಅನುಭವ, ತೆಲುಗು ಚಿತ್ರರಂಗದ ಇನ್ನೊಂದು ಮುಖ ತೆರೆದಿಟ್ಟ ಯುವತಿ

ಟಾಲಿವುಡ್​​ನಲ್ಲಿ ಕೆಟ್ಟ ಅನುಭವ, ತೆಲುಗು ಚಿತ್ರರಂಗದ ಇನ್ನೊಂದು ಮುಖ ತೆರೆದಿಟ್ಟ ಯುವತಿ

ಚಿತ್ರರಂಗದಲ್ಲಿ (Movie Industry) ಕೆಲಸ ಮಾಡಬೇಕು, ನಟಿಯಾಗ ಬೇಕು ಎಂಬುದು ಹಲವು ಯುವತಿಯರ ಆಸೆ. ಆದರೆ ಕಾಸ್ಟಿಂಗ್ ಕೌಚ್ ಎಂಬ ಪೆಡಂಭೂತ ಇಂಥಹಾ ಹಲವು ಪ್ರತಿಭಾವಂತ ಯುವತಿಯರನ್ನು ತಡೆಯುತ್ತಿದೆ. ಕಾಸ್ಟಿಂಗ್ ಕೌಚ್ ವಿರುದ್ಧ ಹೋರಾಟಗಳು ನಡೆಯುತ್ತಲೇ ಇವೆ, ಕಾನೂನು ಕಟ್ಟಳೆಗಳನ್ನು ಸಹ ಮಾಡಲಾಗಿದೆ. ಅದರೂ ಸಹ ಇದು ಸಂಪೂರ್ಣ ನಿಂತಿಲ್ಲ. ಇದೀಗ ವಿದೇಶದಲ್ಲಿ ನೆಲೆಸಿರುವ ಭಾರತೀಯ ಮೂಲದ ಯುವತಿಯೊಬ್ಬರು ತಮಗೆ ಟಾಲಿವುಡ್​​ನಲ್ಲಿ ಆದ ಕೆಟ್ಟ ಅನುಭವವನ್ನು ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದಾರೆ.

ಇನ್​​ಸ್ಟಾಗ್ರಾಂನಲ್ಲಿ ‘ಪೀಕು ನೆಮಿಲಿ’ ಹೆಸರಿನಲ್ಲಿ ಯುವತಿಯೊಬ್ಬರು ವಿಡಿಯೋಗಳನ್ನು ಹಂಚಿಕೊಳ್ಳುತ್ತಿರುತ್ತಾರೆ. ಈ ನಟಿ ಇದೀಗ ವಿಡಿಯೋ ಒಂದನ್ನು ಹಂಚಿಕೊಂಡಿದ್ದು, ತೆಲುಗು ಚಿತ್ರರಂಗದಲ್ಲಿ ತಮಗೆ ಎದುರಾದ ಕಾಸ್ಟಿಂಗ್ ಕೌಚ್ ಅನುಭವದ ಬಗ್ಗೆ ಖುದ್ದು ಹೇಳಿಕೊಂಡಿದ್ದಾರೆ. ಅಲ್ಲದೆ, ಇಂಥಹಾ ಅಸುರಕ್ಷಿತ ಮತ್ತು ಭಯದ ವಾತಾವರಣ ಇರುವ ಕಾರಣಕ್ಕೆ ಎಷ್ಟೋ ಮಂದಿ ಯುವತಿಯರು ಚಿತ್ರರಂಗಕ್ಕೆ ಬರುವುದಿಲ್ಲ ಎಂದು ಹೇಳಿದ್ದಾರೆ.

ತಮಗೆ ಇತರೆ ಕೆಲವು ಗೆಳೆಯರಿಂದ ಕೆಲವು ಸಹಾಯಕ ನಿರ್ದೇಶಕರ ನಂಬರ್ ಸಿಕ್ಕಿತು, ನಾನು ಒಬ್ಬರೊಟ್ಟಿಗೆ ಮಾತನಾಡಿದಾಗ ನಿಮ್ಮ ‘ಪೋರ್ಟ್ ಫೋಲಿಯೊ’ ಕಳಿಸಿ ಎಂದರು. ಅದರಂತೆ ನಾನು ನನ್ನ ಚಿತ್ರಗಳನ್ನು ತೆಗೆಸಿಕೊಂಡು ಅವರಿಗೆ ಕಳಿಸಿದೆ. ಬಳಿಕ ಆ ವ್ಯಕ್ತಿ ಕರೆ ಮಾಡಿ, ‘ನೀವು ‘ಕಮಿಟ್​​ಮೆಂಟ್’ ಕೊಡುತ್ತೀರ ಎಂದು ಕೇಳಿದ, ಅದಕ್ಕೆ ನಾನು ನಟನೆ ಬಗ್ಗೆ ಮಾತನಾಡುತ್ತಿದ್ದಾರೆ ಎಂದುಕೊಂಡು, ‘ಹೌದು ನಾನು ಬಹಳ ಕಮಿಟ್​​ಮೆಂಟ್ ಇರುವ ಯುವತಿ, ನಾನು ಪಾತ್ರಕ್ಕಾಗಿ ಸಂಪೂರ್ಣವಾಗಿ ಸಮರ್ಪಿಸಿಕೊಳ್ಳುತ್ತೇನೆ’ ಎಂದೆಲ್ಲ ಹೇಳಿದೆ ಎಂದಿದ್ದಾರೆ ಯುವತಿ.

ಇದನ್ನೂ ಓದಿ:ತಗ್ಗದ ‘ಧುರಂಧರ್ 2’ ಚಿತ್ರದ ಅಬ್ಬರ; ಮುಂದಕ್ಕೆ ಹೋದ ದೊಡ್ಡ ಸಿನಿಮಾಗಳು

ಬಳಿಕ ಆ ವ್ಯಕ್ತಿ ಮತ್ತೆ ಕರೆ ಮಾಡಿ, ಒಬ್ಬ ಜನಪ್ರಿಯ ನಿರ್ಮಾಪಕ ನಿಮ್ಮನ್ನು ಭೇಟಿ ಮಾಡಲು ರೆಡಿ ಆಗಿದ್ದಾರೆ, ರೆಸಾರ್ಟ್ ಒಂದರಲ್ಲಿ ನಿಮ್ಮ ಮೀಟಿಂಗ್ ಫಿಕ್ಸ್ ಮಾಡಿದ್ದೇನೆ, ನೀವು ಫ್ಲೈಟ್ ಹತ್ತಿ ಬಂದುಬಿಡಿ ಎಂದನಂತೆ. ಅಲ್ಲದೆ, ಪರೋಕ್ಷವಾಗಿ ನಿರ್ಮಾಪಕನ ಜೊತೆಗೆ ಸಮಯ ಕಳೆಯಬೇಕು ಎಂದು ಸಹ ಹೇಳಿದ್ದಾಗಿ ಯುವತಿ ಹೇಳಿಕೊಂಡಿದ್ದಾರೆ.ಯುವತಿಗೆ ಆತನ ಉದ್ಧೇಶ ಅರ್ಥ ಆಗುತ್ತಿದ್ದಂತೆ ಕಾಲ್ ಕಟ್ ಮಾಡಿ, ಆ ವ್ಯಕ್ತಿಯನ್ನು ಬ್ಲಾಕ್ ಮಾಡಿದರಂತೆ. ಬೇರೆ ಬೇರೆ ಸಂಖ್ಯೆಗಳಿಂದ ಆ ವ್ಯಕ್ತಿ ಮತ್ತೆ ಕರೆ ಮಾಡಿದಾಗಲೂ ಸಹ ಯುವತಿ ಬ್ಲಾಕ್ ಮಾಡಿದ್ದಾರೆ.

 

View this post on Instagram

 

A post shared by ✨ (@piku_nemali)

ಇದೀಗ ಯುವತಿಯ ವಿಡಿಯೋ ವೈರಲ್ ಆಗಿದೆ. ತೆಲುಗು ಚಿತ್ರರಂಗದ ನಟಿ ಜಾನ್ಸಿ ಸಹ ವಿಡಿಯೋಕ್ಕೆ ಕಮೆಂಟ್ ಮಾಡಿದ್ದು, ತೆಲುಗು ಚಿತ್ರರಂಗದ ಲೈಂಗಿಕ ದೌರ್ಜನ್ಯ ತಡೆ ಸಮಿತಿಗೆ ದೂರು ದಾಖಲಿಸುವಂತೆ ಸಲಹೆ ನೀಡಿದ್ದಾರೆ. ಜಾನ್ಹವಿ ಸಹ ಈ ಸಮಿತಿಯ ಸದಸ್ಯೆ ಆಗಿದ್ದು, ಈ ಬಗ್ಗೆ ತನಿಖೆ ನಡೆಸಿ, ತಪ್ಪಿತಸ್ಥರಿಗೆ ಶಿಕ್ಷೆ ನೀಡುವ ಭರವಸೆಯನ್ನು ಯುವತಿಗೆ ನೀಡಿದ್ದಾರೆ. ಆದರೆ ಯುವತಿ ಯಾವುದೇ ದೂರು ನೀಡಿದ್ದು ವರದಿ ಆಗಿಲ್ಲ.

ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Source link

Leave a Reply

Your email address will not be published. Required fields are marked *