
2023 ರ ಏಕದಿನ ವಿಶ್ವಕಪ್ ಫೈನಲ್ ಬಳಿಕ ಟೀಂ ಇಂಡಿಯಾ ಅಹಮದಾಬಾದ್‌ನ ನರೇಂದ್ರ ಮೋದಿ ಮೈದಾನದಲ್ಲಿ ಮತ್ತೊಂದು ಐಸಿಸಿ ಈವೆಂಟ್ನ ಫೈನಲ್ ಆಡಲು ಸಜ್ಜಾಗಿದೆ. ಎಲ್ಲರಿಗೂ ತಿಳಿದಿರುವಂತೆ ಭಾರತ ಹಾಗೂ ನ್ಯೂಜಿಲೆಂಡ್ (India vs New Zealand) ನಡುವಿನ 2026 ರ ಟಿ20 ವಿಶ್ವಕಪ್ ಫೈನಲ್ (T20 World Cup Final) ಪಂದ್ಯ ಅಹಮದಾಬಾದ್‌ನಲ್ಲಿ ನಡೆಯಲಿದೆ. ವಿಶ್ವದ ಅತಿದೊಡ್ಡ ಕ್ರೀಡಾಂಗಣ ಫೈನಲ್ ಕಾಳಗಕ್ಕೆ ತಯಾರಾಗಿ ನಿಂತಿದೆ. ಅದರಲ್ಲೂ ಆತಿಥೇಯ ಭಾರತ ಫೈನಲ್ ಪ್ರವೇಶಿಸಿರುವುದು ಭಾರತೀಯ ಕ್ರಿಕೆಟ್ ಅಭಿಮಾನಿಗಳಿಗೆ ಹಬ್ಬದಂತ್ತಾಗಿದೆ. ಹೀಗಾಗಿ ಕ್ರಿಕೆಟ್ ಅಭಿಮಾನಿಗಳ ದಂಡು ಅಹಮದಾಬಾದ್‌ನ ಪ್ರಯಾಣ ಬೆಳೆಸಲು ಶುರುಮಾಡಿದೆ. ಇದರ ಲಾಭ ಪಡೆಯಲು ಮುಂದಾಗಿರುವ ಅಹಮದಾಬಾದ್‌ನ ಹೋಟೆಲ್ಗಳು ರೂಮ್ ಬಾಡಿಗೆಯನ್ನು ಐದು ಪಟ್ಟು ಹೆಚ್ಚಳ ಮಾಡಿವೆ.
10 ರಿಂದ 75 ಸಾವಿರಕ್ಕೆ ಏರಿಕೆ
ಟಿ20 ವಿಶ್ವಕಪ್‌ನ ಫೈನಲ್ ಪಂದ್ಯ ಮಾರ್ಚ್ 8 ರಂದು ನರೇಂದ್ರ ಮೋದಿ ಕ್ರೀಡಾಂಗಣದಲ್ಲಿ ನಡೆಯಲಿದೆ. ಹೆಚ್ಚಿನ ಅಭಿಮಾನಿಗಳು ಅಹಮದಾಬಾದ್ನತ್ತ ಬರುವುದನ್ನು ಖಚಿತವಾಗಿರುವುದರಿಂದ ಅಹಮದಾಬಾದ್‌ನಲ್ಲಿ ಹೋಟೆಲ್ ಬೆಲೆಗಳು ಕೂಡ ಹೆಚ್ಚಾಗಿದೆ. ಮಾರ್ಚ್ 7 ಮತ್ತು 8 ರಂದು ಹೋಟೆಲ್ನ ರೂಮ್ನ ಬಾಡಿಗೆಗಳು ರೂ. 75 ಸಾವಿರ ತಲುಪಿವೆ. ಈ ಮೊದಲು 10 ಸಾವಿರಕ್ಕೆ ಲಭ್ಯವಿರುವ ಕೋಣೆಯ ಬಾಡಿಗೆ 40 ಸಾವಿರದಿಂದ 75 ಸಾವಿರಕ್ಕೆ ಏರಿಕೆಯಾಗಿದೆ. ಹಯಾತ್ ರೀಜೆನ್ಸಿ ಮತ್ತು ಹೋಟೆಲ್ ಸೇರಿದಂತೆ ಹಲವು ಹೋಟೆಲ್‌ಗಳ ಬಾಡಿಗೆ ಹೆಚ್ಚಾಗಿದೆ. ಮ್ಯಾರಿಯಟ್, ಐಟಿಸಿ ಮತ್ತು ಫಾರ್ಚೂನ್ ಹೋಟೆಲ್‌ಗಳ ಬಾಡಿಗೆಯೂ ಹೆಚ್ಚಾಗಿದೆ.
2026 T20 WC Final Prize Money: ಗೆದ್ದ ತಂಡದ ಮೇಲೆ ಹಣದ ಮಳೆ; ಸೋತ ತಂಡಕ್ಕೂ ಸಿಗಲಿದೆ ಕೋಟಿ
ಐದು ಪಟ್ಟು ಹೆಚ್ಚಳ
ಟಿ20 ವಿಶ್ವಕಪ್ ಫೈನಲ್ ಪಂದ್ಯ ಅಹಮದಾಬಾದ್‌ನಲ್ಲಿ ನಡೆಯುವುದರಿಂದ ಹೋಟೆಲ್ ರೂಮ್ ಬೆಲೆ ಹೆಚ್ಚಾಗುವ ನಿರೀಕ್ಷೆ ಮುಂಚೆಯೇ ಇತ್ತು. ಅದರಲ್ಲೂ ಸೆಮಿಫೈನಲ್ ಪಂದ್ಯದಲ್ಲಿ ಇಂಗ್ಲೆಂಡ್ ತಂಡವನ್ನು ಮಣಿಸಿ ಸತತ ಎರಡನೇ ಬಾರಿಗೆ ಟೀಂ ಇಂಡಿಯಾ ಫೈನಲ್ಗೇರಿದ ಬಳಿಕ ಅಹಮದಾಬಾದ್‌ಗೆ ಬರುವ ಅಭಿಮಾನಿಗಳ ಸಂಖ್ಯೆಯಲ್ಲಿ ಹೆಚ್ಚಾಳವಾಗಿದೆ. ಹೀಗಾಗಿ ಕೊಠಡಿ ದರಗಳು ಮತ್ತಷ್ಟು ಹೆಚ್ಚಾಗುವ ಸಾಧ್ಯತೆಯಿದೆ. ಇದಕ್ಕೂ ಮೊದಲು, 2023 ರ ಏಕದಿನ ವಿಶ್ವಕಪ್‌ನ ಫೈನಲ್ ಪಂದ್ಯದ ಸಮಯದಲ್ಲಿ ಹೋಟೆಲ್ ಬೆಲೆಗಳು ಗಗನಕ್ಕೇರಿದ್ದವು. ಹೋಟೆಲ್ ರೂಮ್ ಬೆಲೆಗಳು ಹೆಚ್ಚಾಗುವುದರ ಜೊತೆಗೆ ದೇಶದ ವಿವಿಧ ಭಾಗಗಳಿಂದ ಅಹಮದಾಬಾದ್‌ಗೆ ತೆರಳುವ ವಿಮಾನಗಳ ದರಗಳು ಸಹ ಹೆಚ್ಚಾಗಿದೆ.
ಮತ್ತಷ್ಟು ಕ್ರೀಡಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ