
2026 ರ ಟಿ20 ವಿಶ್ವಕಪ್ (ICC T20 World Cup 2026) ಮುಗಿದ ಒಂದು ದಿನದ ನಂತರ ಎಂದಿನಂತೆ ಐಸಿಸಿ ಟೂರ್ನಮೆಂಟ್ನ ಅತ್ಯುತ್ತಮ ತಂಡವನ್ನು (Team of the Tournament) ಪ್ರಕಟಿಸಿದೆ. ಈ ತಂಡದಲ್ಲಿ ಭಾರತದ 4 ಆಟಗಾರರು ಸ್ಥಾನ ಪಡೆದಿದ್ದಾರೆ. ಆದಾಗ್ಯೂ ಫೈನಲ್ನಲ್ಲಿ ಟೀಂ ಇಂಡಿಯಾ ವಿರುದ್ಧ ಸೋತ ರನ್ನರ್ ಅಪ್ ನ್ಯೂಜಿಲೆಂಡ್ ತಂಡದ ಯಾವುದೇ ಆಟಗಾರನಿಗೆ ಈ ತಂಡದಲ್ಲಿ ಸ್ಥಾನ ಸಿಕ್ಕಿಲ್ಲ. ಟಿ20 ವಿಶ್ವಕಪ್ ಇತಿಹಾಸದಲ್ಲಿ ಅತ್ಯಂತ ವೇಗದ ಶತಕ ಬಾರಿಸಿದ ಫಿನ್ ಅಲೆನ್ ಕೂಡ ಈ ತಂಡಕ್ಕೆ ಆಯ್ಕೆಯಾಗಿಲ್ಲ. ಆಶ್ಚರ್ಯಕರ ಸಂಗತಿಯೆಂದರೆ ಜಿಂಬಾಬ್ವೆಯ ಯುವ ಓಪನರ್ ಬ್ರಿಯಾನ್ ಬೆನೆಟ್ ಕೂಡ ತಂಡದಲ್ಲಿ ಸ್ಥಾನ ಪಡೆದಿಲ್ಲ. ಹಾಗಿದ್ದರೆ, ಈಗ ಈ ತಂಡದಲ್ಲಿ ಯಾವ 11 ಆಟಗಾರರು ಸ್ಥಾನ ಪಡೆದಿದ್ದಾರೆ ಎಂಬುದನ್ನು ನೋಡುವುದಾದರೆ..
ಐಸಿಸಿ ಟೂರ್ನಮೆಂಟ್ ತಂಡ ಪ್ರಕಟ
ಐಸಿಸಿ ಆಯ್ಕೆ ಮಾಡಿರುವ ಟಿ20 ವಿಶ್ವಕಪ್ ತಂಡದಲ್ಲಿ ಆರಂಭಿಕ ಆಟಗಾರರಾಗಿ ಪಾಕಿಸ್ತಾನದ ಆರಂಭಿಕ ಸಾಹಿಬ್ಜಾದಾ ಫರ್ಹಾನ್ ಮತ್ತು ಭಾರತದ ಆರಂಭಿಕ ಸಂಜು ಸ್ಯಾಮ್ಸನ್ ಆಯ್ಕೆಯಾಗಿದ್ದಾರೆ. ಇವರಿಬ್ಬರು ಈ ಆವೃತ್ತಿಯಲ್ಲಿ ಅತ್ಯಧಿಕ ರನ್ ಗಳಿಸಿದ ಆಟಗಾರರ ಪಟ್ಟಿಯಲ್ಲಿ ಸ್ಥಾನ ಪಡೆದಿದ್ದಾರೆ. ಇನ್ನು ಮೂರನೇ ಕ್ರಮಾಂಕದಲ್ಲಿ ಮತ್ತೊಬ್ಬ ಭಾರತೀಯ ಆಟಗಾರ ಇಶಾನ್ ಕಿಶನ್ ಸ್ಥಾನ ಪಡೆದಿದ್ದರೆ, ದಕ್ಷಿಣ ಆಫ್ರಿಕಾ ತಂಡದ ನಾಯಕ ಐಡೆನ್ ಮಾರ್ಕ್ರಾಮ್ಗೆ ನಂತರದ ಸಿಕ್ಕಿದೆ. ಇದರ ಜೊತೆಗೆ ಐಸಿಸಿಯ ಈ ತಂಡದ ನಾಯಕತ್ವವೂ ಮಾರ್ಕ್ರಾಮ್ ಪಾಲಾಗಿದೆ.
ಆಲ್ರೌಂಡರ್ಗಳ ಕೋಟಾದಲ್ಲಿ ಭಾರತದ ಸ್ಟಾರ್ ಆಲ್ರೌಂಡರ್ ಹಾರ್ದಿಕ್ ಪಾಂಡ್ಯ ಆಯ್ಕೆಯಾಗಿದ್ದರೆ, ಅವರ ಜೊತೆಗೆ ಇಂಗ್ಲೆಂಡ್ ಸ್ಪಿನ್ ಆಲ್ರೌಂಡರ್ ವಿಲ್ ಜಾಕ್ಸ್ ಕೂಡ ಈ ತಂಡದಲ್ಲಿ ಅವಕಾಶ ಪಡೆದಿದ್ದಾರೆ. ಹಾಗೆಯೇ ವೆಸ್ಟ್ ಇಂಡೀಸ್ ಆಲ್ರೌಂಡರ್ ಜೇಸನ್ ಹೋಲ್ಡರ್ ಕೂಡ ಸ್ಥಾನ ಪಡೆಯುವಲ್ಲಿ ಯಶಸ್ವಿಯಾಗಿದ್ದಾರೆ. ಉಳಿದಂತೆ ಬೌಲಿಂಗ್ ವಿಭಾಗದಲ್ಲಿ ಜಸ್ಪ್ರೀತ್ ಬುಮ್ರಾ, ಲುಂಗಿ ಎನ್ಗಿಡಿ, ಆದಿಲ್ ರಶೀದ್ ಮತ್ತು ಬ್ಲೆಸಿಂಗ್ ಮುಜರಬಾನಿ ಸ್ಥಾನ ಪಡೆದಿದ್ದಾರೆ. ಇವರಲ್ಲದೆ, ಅಮೆರಿಕದ ಶಾಡ್ಲಿ ವ್ಯಾನ್ ಸ್ಕೈಕ್ವಿಕ್ ಅವರನ್ನು ತಂಡದಲ್ಲಿ ಸೇರಿಸಿಕೊಳ್ಳಲಾಗಿದೆ.
Presenting the #T20WorldCup 2026 Team of the Tournament
More
https://t.co/b4x8qMPUL1 pic.twitter.com/NGInFcYa7S
— ICC (@ICC) March 9, 2026
ಐಸಿಸಿ ಟಿ20 ವಿಶ್ವಕಪ್ ತಂಡ: ಸಾಹಿಬ್ಜಾದಾ ಫರ್ಹಾನ್ (ಪಾಕಿಸ್ತಾನ), ಸಂಜು ಸ್ಯಾಮ್ಸನ್ (ಭಾರತ), ಇಶಾನ್ ಕಿಶನ್ (ಭಾರತ), ಐಡೆನ್ ಮಾರ್ಕ್ರಾಮ್ (ದಕ್ಷಿಣ ಆಫ್ರಿಕಾ), ಹಾರ್ದಿಕ್ ಪಾಂಡ್ಯ (ಭಾರತ), ವಿಲ್ ಜಾಕ್ಸ್ (ಇಂಗ್ಲೆಂಡ್), ಜೇಸನ್ ಹೋಲ್ಡರ್, ಜಸ್ಪ್ರೀತ್ ಬುಮ್ರಾ (ಭಾರತ), ಲುಂಗಿ ಎನ್ಗಿಡಿ (ದಕ್ಷಿಣ ಆಫ್ರಿಕಾ), ಆದಿಲ್ ರಶೀದ್ (ಇಂಗ್ಲೆಂಡ್) ಮತ್ತು ಬ್ಲೆಸ್ಸಿಂಗ್ ಮುಜರಬಾನಿ (ಜಿಂಬಾಬ್ವೆ).
ಮತ್ತಷ್ಟು ಕ್ರೀಡಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

