Headlines

ತಾಜಾ ಮೆಂತ್ಯ ಸೊಪ್ಪು ಸಿಕ್ರೆ ಮನೆಯಲ್ಲಿಯೇ ಈ ರೀತಿ ಕಸೂರಿ ಮೇಥಿ ತಯಾರಿಸಿ – Kannada News | Make fresh Kasuri Methi at home from fenugreek leaves

ಗಿಡಮೂಲಿಯಾಗಿರುವ ಒಣಗಿದ ಮೆಂತ್ಯೆ ಅಥವಾ ಕಸೂರಿ ಮೇಥಿ (kasuri methi) ಅಡುಗೆಯ ರುಚಿ, ಘಮ ಹೆಚ್ಚಿಸುವುದು ಮಾತ್ರವಲ್ಲ ಆರೋಗ್ಯಕ್ಕೂ ಸಖತ್‌ ಪ್ರಯೋಜನಕಾರಿ. ಹೌದು ಇದರಲ್ಲಿ ಕಬ್ಬಿಣ, ಕ್ಯಾಲ್ಸಿಯಂ, ವಿಟಮಿನ್‌ ಎ ಮತ್ತು ಸಿ ಯಂತಹ ಅಗತ್ಯವಾದ ಪೋಷಕಾಂಶಗಳಿದ್ದು, ಜೀರ್ಣಕ್ರಿಯೆಗೆ, ಮಧುಮೇಹ ನಿಯಂತ್ರಣಕ್ಕೆ,  ತೂಕ ನಷ್ಟಕ್ಕೆ, ಹೃದಯದ ಆರೋಗ್ಯಕ್ಕೆ ಸೇರಿದಂತೆ ಒಟ್ಟಾರೆ ಆರೋಗ್ಯಕ್ಕೆ ತುಂಬಾನೇ ಪ್ರಯೋಜನಕಾರಿ. ಸಾಮಾನ್ಯವಾಗಿ ಬಹುತೇಕ ಎಲ್ಲರೂ ಈ ಕಸೂರಿ ಮೇಥಿಯನ್ನು ಅಂಗಡಿಯಿಂದ ಕೊಂಡುಕೊಳ್ಳುತ್ತಾರೆ. ಇದರ ಬದಲು ತಾಜಾ ಮೆಂತ್ಯ ಎಲೆಗಳನ್ನು ಬಳಸಿ ಶುದ್ಧ ಹಾಗೂ ಕಲಬೆರಕೆಯಿಲ್ಲದ ಕಸೂರಿ ಮೇಥಿಯನ್ನು ಮನೆಯಲ್ಲೇ ತಯಾರಿಸಬಹುದು. ಅದು ಹೇಗೆ ಎಂಬ ಸಂಕ್ಷಿಪ್ತ ಮಾಹಿತಿ ಇಲ್ಲಿದೆ.

ತಾಜಾ ಮೆಂತ್ಯ ಸೊಪ್ಪಿನಿಂದ ಕಸೂರಿ ಮೇಥಿ ಮಾಡುವುದು ಹೇಗೆ?

ಹಂತ- 1: ಕಸೂರಿ ಮೇಥಿ ತಯಾರಿಸಲು, ತಾಜಾ ಮತ್ತು ಹಸಿರಾದ ಮೆಂತ್ಯ ಸೊಪ್ಪು ಬೇಕಾಗುತ್ತವೆ.  ಇದಕ್ಕಾಗಿ ಮಾರುಕಟ್ಟೆಯಿಂದ ತಾಜಾ ಮೆಂತ್ಯ ಸೊಪ್ಪಿನ ಕಟ್ಟನ್ನು ತನ್ನಿ. ನಂತರ ಉತ್ತಮ ಗುಣಮಟ್ಟದ ಎಲೆಗಳನ್ನು ತೊಟ್ಟಿನಿಂದ ಬೇರ್ಪಡಿಸಿ, ಎಲೆಗಳನ್ನು ಮಾತ್ರವೇ ಸಂಗ್ರಹಿಸಿ. ತೊಟ್ಟಿನಿಂದ ಬೇರ್ಪಡಿಸಿದ ಎಲೆಗಳನ್ನು ಸ್ವಚ್ಛ ನೀರಿನಿಂದ ಎರಡು ಮೂರು ಬಾರಿ ತೊಳೆಯಿರಿ.

ಹಂತ- 2: ತೊಳೆದ ಮೆಂತ್ಯ ಸೊಪ್ಪನ್ನು ನೀರಿನ ಅಂಶ ಇಲ್ಲದ ರೀತಿಯಲ್ಲಿ ಚೆನ್ನಾಗಿ ಒಣಗಿಸಿ. ಎಲೆಗಳು ಸಂಪೂರ್ಣವಾಗಿ ಒಣಗಿದ ಬಳಿಕ ಮೈಕ್ರೋವೇವ್- ಟ್ರೇ ತೆಗೆದುಕೊಂಡು ಅವುಗಳನ್ನು ಟ್ರೇ ಮೇಲೆ ಸಮವಾಗಿ ಹರಡಿ. ಟ್ರೇ ಅನ್ನು ಮೈಕ್ರೋವೇವ್‌ನಲ್ಲಿ ಇರಿಸಿ 3 ನಿಮಿಷಗಳ ಕಾಲ ಬಿಸಿ ಮಾಡಿ. ನಂತರ ತಟ್ಟೆಯನ್ನು ಹೊರ ತೆಗೆದು ಎಲೆಗಳನ್ನು ತಿರುಗಿಸಿ ಮತ್ತೆ ಬಿಸಿ ಮಾಡಿ. ಈ ಪ್ರಕ್ರಿಯೆಯನ್ನು ಎರಡು ಅಥವಾ ಮೂರು ಬಾರಿ ಪುನರಾವರ್ತಿಸಿ.

 ಹಂತ – 3: ಮೈಕ್ರೋವೇವ್‌ನಿಂದ ಮೆಂತ್ಯ ಎಲೆಗಳನ್ನು ತೆಗೆದ ನಂತರ, ಅವುಗಳನ್ನು ತಣ್ಣಗಾಗಿಸಿ, ಬಳಿಕ ಆ ಒಣಗಿದ ಎಲೆಗಳನ್ನು ಕೊಂಚ ದೊಡ್ಡ ಕಣಗಳಿರುವ ಹಾಗೆ ಅಂಗೈನಿಂದ ಪುಡಿ ಮಾಡಿ. ಹೀಗೆ ಮಾಡಿದರೆ ಕಸೂರಿ ಮೇಥಿ ಸಿದ್ಧ, ತಯಾರಾದ ಈ ಕಸೂರಿ ಮೇಥಿಯನ್ನು ಗಾಳಿಯಾಡದ ಗಾಜಿನ ಡಬ್ಬಿಯಲ್ಲಿ ಸಂಗ್ರಹಿಸಿಡಿ. ಈ ವಿಧಾನವನ್ನು ಬಳಸಿಕೊಂಡು, ನೀವು ಕಸೂರಿ ಮೇಥಿಯನ್ನು ತಯಾರಿಸಿದರೆ ವರ್ಷಗಳ ವರೆಗೆ ಅದರ ಸುವಾಸನೆ ಮತ್ತು ತಾಜಾತನ ಹಾಗೆಯೇ ಇರುತ್ತದೆ.

ಇದನ್ನೂ ಓದಿ: ನೆಲದ ಮೇಲಿನ ಹಠಮಾರಿ ಕಲೆಗಳನ್ನು ಹೋಗಲಾಡಿಸಲು ಜಸ್ಟ್‌ ಟಿಪ್ಸ್‌ ಪಾಲಿಸಿ

 ಈ ವಿಧಾನವನ್ನು ಬಳಸಿಯೂ ಕಸೂರಿ ಮೇಥಿ ತಯಾರಿಸಬಹುದು:

ನೀವು ಮೈಕ್ರೋವೇವ್ ಬಳಸದೆಯೂ ಕಸೂರಿ ಮೇಥಿ ತಯಾರಿಸಬಹುದು. ಮೆಂತ್ಯ ಎಲೆಗಳನ್ನು ಸ್ವಚ್ಛಗೊಳಿಸಿದ ನಂತರ, ಅವುಗಳನ್ನು ವೃತ್ತಪತ್ರಿಕೆ ಅಥವಾ ಕಾಟನ್‌ ಬಟ್ಟೆಯ ಮೇಲೆ ಹರಡಿ, ಅದನ್ನು ಫ್ಯಾನ್ ಗಾಳಿಯಲ್ಲಿ ಒಣಗಿಸಿ ಮತ್ತು ಎಲೆಗಳು ಒಣಗಿದ ನಂತರ ಅವು ಗರಿಗರಿಯಾಗುವವರೆಗೆ ಬಿಸಿಲಿನಲ್ಲಿ ಒಣಗಿಸಿ. ನಂತರ, ಅವುಗಳನ್ನು ಕೈಗಳಿಂದ ಪುಡಿಮಾಡಿ ಗಾಳಿಯಾಡದ ಪಾತ್ರೆಯಲ್ಲಿ ಸಂಗ್ರಹಿಸಿ.

ಜೀವನಶೈಲಿ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

Leave a Reply

Your email address will not be published. Required fields are marked *