ತುಂಬಾನೇ ಶ್ರೀಮಂತ ಅಲ್ಲು ಅರ್ಜುನ್; ಅವರ ಬಳಿ ಇರೋ ದುಬಾರಿ ವಸ್ತುಗಳಿವು

ತುಂಬಾನೇ ಶ್ರೀಮಂತ ಅಲ್ಲು ಅರ್ಜುನ್; ಅವರ ಬಳಿ ಇರೋ ದುಬಾರಿ ವಸ್ತುಗಳಿವು

ಸ್ಟೈಲಿಶ್ ಸ್ಟಾರ್ ಅಲ್ಲು ಅರ್ಜುನ್ (Allu Arjun) ಅವಗೆ ಇಂದು (ಏಪ್ರಿಲ್ 08) ಜನ್ಮದಿನ. ಭಾರತದ ಶ್ರೀಮಂತ ಹೀರೋಗಳಲ್ಲಿ ಅವರೂ ಒಬ್ಬರು., ಅಲ್ಲು ಅರ್ಜುನ್ ಅವರಿಗೆ ದೊಡ್ಡ ಅಭಿಮಾನಿ ಬಳಗ ಇದೆ. ಮಾಸ್ ಛಾಯೆಯುಳ್ಳ ಭಿನ್ನ ಪಾತ್ರಗಳನ್ನು ಪ್ರಯತ್ನಿಸುತ್ತಾರೆ, ಅವರ ಬಳಿ ಸಾಕಷ್ಟು ಹಣ ಇದೆ. ಅವರ ಆಸ್ತಿ ಬಗ್ಗೆ ಇಲ್ಲಿದೆ ವಿವರ.

ಅಲ್ಲು ಅರ್ಜುನ್ ಆಸ್ತಿ 600 ಕೋಟಿ ರೂಪಾಯಿ ಅಷ್ಟಿದೆ ಎನ್ನಲಾಗಿದೆ. ಹೈದರಾಬಾದ್​ನ ಜೂಬ್ಲಿ ಹಿಲ್ಸ್​ನ ಐಶಾರಾಮಿ ಬಂಗಲೆಯನ್ನು ಅಲ್ಲು ಅರ್ಜುನ್ ಹೊಂದಿದ್ದಾರೆ. ಈ ಮನೆಯಲ್ಲಿ ಅಲ್ಲು ಅರ್ಜುನ್, ಪತ್ನಿ ಸ್ನೇಹಾ ರೆಡ್ಡಿ, ಮಕ್ಕಳಾದ ಅಯಾನ್ ಹಾಗೂ ಅರ್ಹಾ ಜೊತೆಗೆ ವಾಸಿಸುತ್ತಾರೆ. ಈ ಬಂಗಲೆ ತುಂಬಾ ದೊಡ್ಡದಿದೆ. ಈ ಮನೆಯ ಮೌಲ್ಯ ಸುಮಾರು 100 ಕೋಟಿ ಎನ್ನಲಾಗುತ್ತದೆ.

ಅಲ್ಲು ಅರ್ಜುನ್ ಅವರು ಸಾಕಷ್ಟು ಕಾರನ್ನು ಹೊಂದಿದ್ದಾರೆ. ಅವರ ಬಳಿ ಇರುವ ಅತ್ಯಂತ ದುಬಾರಿ ಕಾರು ರೇಂಜ್ ರೋವರ್ ವೋಗ್. ಈ ಕಾರಿನ ಬೆಲೆ ಎರಡು ಕೋಟಿಗೂ ಹೆಚ್ಚು. ಇದನ್ನು 2019ರಲ್ಲಿ ಅಲ್ಲು ಅರ್ಜುನ್ ಖರೀದಿಸಿದ್ದರು. ಇದಕ್ಕೆ ಬೀಸ್ಟ್ ಎಂದು ಹೆಸರಿಟ್ಟಿದ್ದಾರೆ. ವೋಲ್ವೊ ಎಕ್ಸ್​ಸಿ 90 ಟಿ8 ಎಕ್ಸಲೆಂಟ್ ಇದ್ದು, ಇದರ ಬೆಲೆ 1.30 ಕೋಟಿ ರುಪಾಯಿ. ಈ ಕಾರನ್ನು ಅಲ್ಲು ಅರ್ಜುನ್ ಹೆಚ್ಚು ಬಳಸುತ್ತಾರೆ. ಇದು ಅವರ ಮೆಚ್ಚಿನ ಕಾರು.

ಅಲ್ಲು ಅರ್ಜುನ್ ಬಳಿ ಶ್ವೇತ ವರ್ಣದ ಜಾಗ್ವಾರ್ ಎಕ್ಸ್​ಜೆ ಎಲ್ ಇದೆ. ಇನ್ನು ಅಲ್ಲು ಅರ್ಜುನ್ ಬಳಿ ಇರುವ ಅತ್ಯಂತ ಹೆಚ್ಚು ಬೆಲೆಯ ವಾಹನವೆಂದರೆ ಅವರ 7 ಕೋಟಿ ಮೌಲ್ಯದ ಕ್ಯಾರಾವ್ಯಾನ್. ಇದನ್ನು ವಿಶೇಷವಾಗಿ ಆರ್ಡರ್ ನೀಡಿ ಅಲ್ಲು ಅರ್ಜುನ್ ನಿರ್ಮಿಸಿಕೊಂಡಿದ್ದಾರೆ.

ಇದನ್ನೂ ಓದಿ: ಅಲ್ಲು ಅರ್ಜುನ್ ಹುಟ್ಟುಹಬ್ಬಕ್ಕೆ ಸಿಗಲಿದೆ ಸರ್ಪ್ರೈಸ್; ಹೊಸ ಸಿನಿಮಾ ಟೈಟಲ್ ಮೇಲೆ ಕಣ್ಣು

ಅಲ್ಲು ಅರ್ಜುನ್ ಉದ್ಯಮಿಯೂ ಹೌದು. ಅನ್ನಪೂರ್ಣ ಸ್ಟುಡಿಯೋಸ್ ನಲ್ಲಿ ಪಾಲುದಾರಿಕೆ ಹೊಂದಿದ್ದಾರೆ. ಆಹಾ ಒಟಿಟಿಯಲ್ಲಿಯೂ ಪಾಲುದಾರರು. ಅವರು ಮಲ್ಟಿಪ್ಲೆಕ್ಸ್ ಆರಂಭಿಸಿದ್ದಾರೆ. ಫಾರ್ಮ್​​ಹೌಸ್​​ಗಳೂ ಅವರ ಬಳಿ ಇವೆ. ಅಲ್ಲು ಅರ್ಜುನ್ ಅವರ ಹೊಸ ಸಿನಿಮಾಗೆ ಇಂದು ಟೈಟಲ್ ಘೋಷಣೆ ಆಗಲಿದೆ. ಇದಕ್ಕೆ ಅಲ್ಲು ಅರ್ಜುನ್ ದೊಡ್ಡ ಮೊತ್ತದ ಸಂಭಾವನೆ ಪಡೆಯಲಿದ್ದಾರೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

Source link

Leave a Reply

Your email address will not be published. Required fields are marked *