ದಕ್ಷಿಣದ ನಿರ್ದೇಶಕನ ಜೊತೆಗೆ ಹೃತಿಕ್ ರೋಷನ್ ಸಿನಿಮಾ

ದಕ್ಷಿಣದ ನಿರ್ದೇಶಕನ ಜೊತೆಗೆ ಹೃತಿಕ್ ರೋಷನ್ ಸಿನಿಮಾ

ಬಾಲಿವುಡ್ (Bollywood) ನಟರಿಗೆ ದಕ್ಷಿಣದ ಸಿನಿಮಾ ನಿರ್ದೇಶಕರುಗಳ ಮೇಲೆ ವಿಶೇಷ ಪ್ರೀತಿ ಬಂದಿದೆ. ಶಾರುಖ್ ಖಾನ್, ಸಲ್ಮಾನ್ ಖಾನ್, ಆಮಿರ್ ಖಾನ್, ಟೈಗರ್ ಶ್ರಾಫ್ ಇನ್ನೂ ಹಲವರು ದಕ್ಷಿಣದ ನಿರ್ದೇಶಕರುಗಳನ್ನೇ ಬಯಸಿ ಅವರೊಟ್ಟಿಗೆ ಸಿನಿಮಾ ಮಾಡುತ್ತಿದ್ದಾರೆ. ಶಾರುಖ್ ಖಾನ್ ಅಂತೂ ದೊಡ್ಡ ಯಶಸ್ಸನ್ನೂ ಗಳಿಸಿದ್ದಾರೆ. ಆದರೆ ಸಲ್ಲು ಭಾಯ್ ಸೋತಿದ್ದಾರೆ. ಆಮಿರ್ ಖಾನ್ ಇನ್ನಷ್ಟೆ ಸಿನಿಮಾ ಶುರು ಮಾಡಬೇಕಿದೆ. ಈ ನಡುವೆ ಹೃತಿಕ್ ರೋಷನ್ ಸಹ ಈ ಪಟ್ಟಿಗೆ ಸೇರ್ಪಡೆ ಆಗಿದ್ದು, ದಕ್ಷಿಣದ ನಿರ್ದೇಶಕರ ಜೊತೆ ಕೆಲಸ ಮಾಡಲು ಮುಂದಾಗಿದ್ದಾರೆ.

ಇತ್ತೀಚಿನ ವರದಿಗಳ ಪ್ರಕಾರ, ತೆಲುಗಿನ ಖ್ಯಾತ ಚಿತ್ರಕಥೆಗಾರ ಕೋನಾ ವೆಂಕಟ್ ಮತ್ತು ನಿರ್ದೇಶಕ ಬಾಬಿ ಕೊಲ್ಲಿ (ಇತ್ತೀಚೆಗೆ ‘ಡಾಕು ಮಹಾರಾಜ್’ ಸಿನಿಮಾ ನಿರ್ದೇಶಕ) ಹೃತಿಕ್ ರೋಷನ್ ಅವರನ್ನು ಭೇಟಿಯಾಗಿ ಒಂದು ದೊಡ್ಡ ಪ್ರಾಜೆಕ್ಟ್ ಬಗ್ಗೆ ಚರ್ಚಿಸಿದ್ದಾರೆ. ಹೃತಿಕ್ ಅವರಿಗೆ ಕಥೆ ತುಂಬಾ ಇಷ್ಟವಾಗಿದೆ ಮತ್ತು ಅವರು ಸಕಾರಾತ್ಮಕವಾಗಿ ಸ್ಪಂದಿಸಿದ್ದಾರೆ ಎಂದು ಕೋನಾ ವೆಂಕಟ್ ತಿಳಿಸಿದ್ದಾರೆ. ಶೀಘ್ರವೇ ಸಿನಿಮಾದ ಘೋಷಣೆ ಸಹ ಆಗಲಿದೆ ಎನ್ನಲಾಗುತ್ತಿದೆ.

ಇದನ್ನೂ ಓದಿ:‘ಟಾಕ್ಸಿಕ್’ ಬಿಡುಗಡೆ ದಿನಾಂಕ ಮುಂದಕ್ಕೆ; ಮತ್ತೊಬ್ಬ ಬಾಲಿವುಡ್ ಹೀರೋಗೆ ಚಿಂತೆ ಶುರು

ಹೃತಿಕ್ ರೋಷನ್ ಅವರು ಈಗಾಗಲೇ ದಕ್ಷಿಣದ ಪ್ರತಿಷ್ಠಿತ ನಿರ್ಮಾಣ ಸಂಸ್ಥೆ ಹೊಂಬಾಳೆ ಫಿಲ್ಮ್ಸ್ ಜೊತೆ ಒಂದು ದೊಡ್ಡ ಬಜೆಟ್ ಚಿತ್ರಕ್ಕಾಗಿ ಒಪ್ಪಂದ ಮಾಡಿಕೊಂಡಿದ್ದಾರೆ. ಇದರ ಬಗ್ಗೆ ಶೀಘ್ರದಲ್ಲೇ ಅಧಿಕೃತ ಘೋಷಣೆ ಹೊರಬೀಳುವ ನಿರೀಕ್ಷೆಯಿದೆ. ಬಾಬಿ ಮತ್ತು ಕೋನಾ ವೆಂಕಟ್ ಹೇಳುತ್ತಿರುವ ಸಿನಿಮಾ ಇದೇ ಇರಬಹುದೇ ಎಂಬ ಕುತೂಹಲವೂ ಇದೆ. ಪ್ರಸ್ತುತ ಹೃತಿಕ್ ರೋಷನ್ ಅವರು ತಮ್ಮದೇ ನಿರ್ದೇಶನದ ‘ಕೃಷ್ 4’ ಸಿನಿಮಾದ ತಯಾರಿಯಲ್ಲಿದ್ದಾರೆ ಎನ್ನಲಾಗುತ್ತಿದೆ. ಅದರ ಜೊತೆಗೆ ಯಶ್ ರಾಜ್ ಫಿಲಮ್ಸ್ ಜೊತೆಗೆ ಹೊಸ ಸಿನಿಮಾ ಒಂದನ್ನು ಸಹ ಅವರು ಸಹಿ ಮಾಡಿದ್ದಾರೆ ಎಂಬ ಮಾತುಗಳು ಸಹ ಕೇಳಿ ಬರುತ್ತಿವೆ.

ಶಾರುಖ್ ಖಾನ್ ಅವರು ಅಟ್ಲಿ ಜೊತೆಗೆ ‘ಜವಾನ್’ ಸಿನಿಮಾ ಮಾಡಿ ಭಾರಿ ಯಶಸ್ಸು ಗಳಿಸಿದರು. ಇನ್ನು ಸಲ್ಮಾನ್ ಖಾನ್, ತಮಿಳಿನ ಮುರುಗದಾಸ್ ಜೊತೆಗೆ ಇತ್ತೀಚೆಗೆ ‘ಸಿಖಂಧರ್’ ಸಿನಿಮಾ ಮಾಡಿದರು ಆ ಸಿನಿಮಾ ಅಟ್ಟರ್ ಫ್ಲಾಪ್ ಆಯ್ತು. ಇದೀಗ ಮತ್ತೊಬ್ಬ ದಕ್ಷಿಣದ ನಿರ್ದೇಶಕನ ಸಿನಿಮಾ ಎಸ್ ಹೇಳಿದ್ದಾರೆ ಎನ್ನಲಾಗುತ್ತಿದೆ. ಇನ್ನು ಆಮಿರ್ ಖಾನ್ ಅವರು ತಮಿಳಿನ ಖ್ಯಾತ ನಿರ್ದೇಶಕ ಲೋಕೇಶ್ ಕನಗರಾಜ್ ಅವರ ಮುಂದಿನ ಸಿನಿಮಾನಲ್ಲಿ ನಟಿಸಲಿದ್ದಾರೆ. ಈಗ ಹೃತಿಕ್ ರೋಷನ್ ಸಹ ಇದೇ ಪಟ್ಟಿ ಸೇರಿಕೊಂಡಿದ್ದಾರೆ. ಹೃತಿಕ್​​ಗೆ ಜಯ ಸಿಗುತ್ತದೆಯೇ ಇಲ್ಲವೇ ಕಾದು ನೋಡಬೇಕಿದೆ.

ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Source link

Leave a Reply

Your email address will not be published. Required fields are marked *