Headlines

ದಪ್ಪ ಆಗಿದ್ದಕ್ಕೆ ಬಾಡಿ ಶೇಮಿಂಗ್ ಅನುಭವಿಸಿದ ‘ಮಿಲನ’ ನಟಿ ಪಾರ್ವತಿ – Kannada News | Milana Actress Parvathy Thiruvothu Body Shamed for Weight Gain: Her Resilient Stance

ಚಿತ್ರರಂಗ ಎಷ್ಟು ಪ್ರೀತಿಯನ್ನು ನೀಡುತ್ತದೆಯೋ ಅಷ್ಟೇ ದ್ವೇಷವನ್ನು ಕೂಡ ಕೊಡುತ್ತದೆ. ಈ ರಂಗದಲ್ಲಿ ಲುಕ್ ಅನ್ನೋದಕ್ಕೆ ತುಂಬಾನೇ ಪ್ರಾಮುಖ್ಯತೆ ಕೊಡುತ್ತಾರೆ. ಹೀಗಾಗಿ ನಟ-ನಟಿಯರ ದೇಹದಲ್ಲಿ ಸ್ವಲ್ಪ ವ್ಯತ್ಯಾಸ ಆದರೂ ಆ ಬಗ್ಗೆ ಚರ್ಚೆ ನಡೆಯುತ್ತದೆ. ಕೆಲವರು ಇದಕ್ಕೆ ಅಂಜುತ್ತಾರೆ. ಇನ್ನೂ ಕೆಲವರು ಧೈರ್ಯವಾಗಿ ಎದುರಿಸುತ್ತಾರೆ. ಕನ್ನಡದ ‘ಮಿಲನ’ ಸಿನಿಮಾದಲ್ಲಿ ನಟಿಸಿದ್ದ ಪಾರ್ವತಿ (Parvathy) ಅವರಿಗೆ ಬಾಡಿ ಶೇಮಿಂಗ್ ಆಗಿದೆ.

ಪಾರ್ವತಿ ಅವರು ಕೇರಳದ ಕೋಳಿಕ್ಕೋಡ್​ನವರು. ಅವರಿಗೆ ಈಗ 37 ವರ್ಷ. ಇನ್ನೂ ಅವರು ವಿವಾಹದ ಬಗ್ಗೆ ಚಿಂತೆ ಮಾಡಿಲ್ಲ. 2006ರಲ್ಲಿ ಅವರು ಚಿತ್ರರಂಗಕ್ಕೆ ಬಂದರು. ಆಗ ಅವರಿಗೆ ವಯಸ್ಸು 17 ವರ್ಷ. 2007ರಲ್ಲಿ ಮಾಡಿದ ‘ಮಿಲನ’ ಸಿನಿಮಾ ಅವರಿಗೆ ಸಾಕಷ್ಟು ಜನಪ್ರಿಯತೆ ನೀಡಿತು. ಪುನೀತ್ ಜೊತೆ ಅವರು ತೆರೆ ಹಂಚಿಕೊಂಡರು. ಆ ಬಳಿಕ ಕನ್ನಡದಲ್ಲಿ ‘ಪೃಥ್ವಿ’ ಸಿನಿಮಾ ಮಾಡಿದರು. ಹಿಟ್ ಜೋಡಿ ಎನಿಸಿಕೊಂಡಿದ್ದ ಪುನೀತ್ ಹಾಗೂ ಪಾರ್ವತಿ ಈ ಚಿತ್ರಕ್ಕಾಗಿ ಮತ್ತೆ ಒಂದಾದರು.

ಆ ಬಳಿಕ ಪಾರ್ವತಿ ‘ಅಂದರ್ ಬಾಹರ್’ ಬಿಟ್ಟು ಬೇರೆ ಯಾವುದೇ ಕನ್ನಡ ಸಿನಿಮಾ ಮಾಡಿಲ್ಲ. ಈಗ ಪಾರ್ವತಿ ಅವರು ಮಲಯಾಳಂ ಸಿನಿಮಾಗಳನ್ನು ಮಾಡುತ್ತಿದ್ದಾರೆ. ಅಲ್ಲಿಯೂ ಅವರು ಚ್ಯೂಸಿ ಆಗಿದ್ದು, ಅಲ್ಲೊಂದು ಇಲ್ಲೊಂದು ಚಿತ್ರ ಮಾಡುತ್ತಾ ಇದ್ದಾರೆ. ಅವರಿಗೆ ಈಗ ಕೇರಳಿಗರಿಂದ ಹೇಟ್ ಸಂದೇಶ, ಬಾಡಿ ಶೇಮಿಂಗ್ ಎದುರಾಗಿದೆ.

ಪಾರ್ವತಿ ಮೆನನ್ ಮೊದಲಿಗಿಂತ ದಪ್ಪ ಆಗಿದ್ದಾರೆ. ಈ ವಿಡಿಯೋ ವೈರಲ್ ಆಗಿದೆ. ಇದಕ್ಕೆ ಅವರು ಸಾಕಷ್ಟು ಟೀಕೆಗಳನ್ನು ಎದುರಿಸಿದ್ದಾರೆ. ಈ ವಿಷಯ ಅವರ ಅಭಿಮಾನಿಗಳಿಗೆ ಬೇಸರ ಮೂಡಿಸಿದೆ. ಲುಕ್ ವಿಷಯ ಇಟ್ಟುಕೊಂಡು ಟೀಕೆ ಮಾಡಿದ್ದು ಸರಿ ಅಲ್ಲ ಎಂಬ ಮಾತು ಕೇಳಿ ಬಂದಿದೆ.

ಇದನ್ನೂ ಓದಿ: ಪುನೀತ್​ ರಾಜ್​ಕುಮಾರ್​ ಸಿನಿಮಾ ‘ಮಿಲನ’ ಸುಂದರಿ ಪಾರ್ವತಿ ಮೆನನ್ ಈಗೇನು ಮಾಡುತ್ತಿದ್ದಾರೆ ಗೊತ್ತಾ?

ಈ ಮೊದಲು ಕೂಡ ಪಾರ್ವತಿ ಮೆನನ್ ಅವರು ಇದೇ ರೀತಿಯ ತೊಂದರೆ ಅನುಭವಿಸಿದ ಉದಾಹರಣೆ ಇದೆ. ಆದರೆ, ಇದಕ್ಕೆ ಅವರು ಹೆಚ್ಚು ತಲೆಕೆಡಿಸಿಕೊಂಡಿಲ್ಲ. ಕೆಲ ನಟಿಯರು ಈ ರೀತಿ ಆದಾಗ ಸೂಕ್ಷ್ಮವಾಗಿ ಪ್ರತಿಕ್ರಿಯಿಸಿದ ಉದಾಹರಣೆ ಇದೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

Source link

Leave a Reply

Your email address will not be published. Required fields are marked *