
ವಾಷಿಂಗ್ಟನ್, ಮಾರ್ಚ್ 11: ಇರಾನ್ನೊಂದಿಗಿನ ಯುದ್ಧವು ಶೀಘ್ರದಲ್ಲೇ ಕೊನೆಗೊಳ್ಳಬಹುದು ಎಂದು ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ (Donald Trump) ಸುಳಿವು ನೀಡಿದ್ದಾರೆ. ಅಮೆರಿಕ ಮತ್ತು ಇಸ್ರೇಲ್ ಪಡೆಗಳು ಈಗಾಗಲೇ ದೇಶದಲ್ಲಿ ಲಭ್ಯವಿರುವ ಹೆಚ್ಚಿನ ಟಾರ್ಗೆಟ್ಗಳನ್ನು ನಾಶಪಡಿಸಿವೆ. “ಇರಾನ್ನಲ್ಲಿ ಪ್ರಾಯೋಗಿಕವಾಗಿ ಗುರಿಯಿಡಲು ಇನ್ನೇನೂ ಉಳಿದಿಲ್ಲ” ಎಂದು ಟ್ರಂಪ್ ಹೇಳಿದ್ದಾರೆ. ಮಿಲಿಟರಿ ಕಾರ್ಯಾಚರಣೆಯು ಇರಾನಿಗೆ ಈಗಾಗಲೇ ವ್ಯಾಪಕ ಹಾನಿಯನ್ನುಂಟುಮಾಡಿದೆ ಎಂದು ಟ್ರಂಪ್ ಹೇಳಿದ್ದಾರೆ.
ಇರಾನ್ನವರ ಕ್ಷಿಪಣಿಗಳು ಚದುರಿಹೋಗಿವೆ. ಅವರ ಡ್ರೋನ್ಗಳನ್ನು ಎಲ್ಲೆಡೆ ಸ್ಫೋಟಿಸಲಾಗುತ್ತಿದೆ, ಅವುಗಳ ಡ್ರೋನ್ಗಳ ತಯಾರಿಕೆಯೂ ನಿಂತಿದೆ. ಟೆಹ್ರಾನ್ ಈಗ ನೌಕಾಪಡೆ, ವಾಯುಪಡೆ ಮತ್ತು ಮಿಲಿಟರಿ ಮೇಲೆ ಯಾವುದೇ ಹಿಡಿತವಾಗಲಿ, ಸಾಮರ್ಥ್ಯವನ್ನಾಗಲಿ ಹೊಂದಿಲ್ಲ. ಅವರು ಏನಾದರೂ ಕೆಟ್ಟದ್ದನ್ನು ಮಾಡಿದರೆ ಅದು ಇರಾನ್ನ ಅಂತ್ಯವಾಗಲಿದೆ. ನೀವು ಆ ಹೆಸರನ್ನು ಮತ್ತೆ ಎಂದಿಗೂ ಕೇಳುವುದಿಲ್ಲ ಎಂದು ಟ್ರಂಪ್ ಹೇಳಿದ್ದಾರೆ.
ಇದನ್ನೂ ಓದಿ: ಬಹ್ರೇನ್ ಮೇಲಿನ ಇರಾನ್ ದಾಳಿಯ ವಿಡಿಯೋ ಶೇರ್ ಮಾಡಿದ್ದಕ್ಕೆ 5 ಪಾಕಿಸ್ತಾನಿ ಪ್ರಜೆಗಳ ಬಂಧನ
“ಯುದ್ಧವು ಅದ್ಭುತವಾಗಿ ನಡೆಯುತ್ತಿದೆ. ನಾವು ವೇಳಾಪಟ್ಟಿಗಿಂತ ಬಹಳ ಮುಂದಿದ್ದೇವೆ. ಮೊದಲ 6 ವಾರಗಳ ಅವಧಿಯಲ್ಲಿಯೂ ಸಹ ನಾವು ಭಾವಿಸಿದ್ದಕ್ಕಿಂತ ಹೆಚ್ಚಿನ ಹಾನಿಯನ್ನು ಇರಾನ್ಗೆ ಮಾಡಿದ್ದೇವೆ” ಎಂದು ಟ್ರಂಪ್ ಹೇಳಿದ್ದಾರೆ.
ಇನ್ನಷ್ಟು ಅಂತಾರಾಷ್ಟ್ರೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ