ಮೇಷ ರಾಶಿ:
ನಿಮಗೆ ಹತ್ತಿರವಿರುವ ಯಾರೊಬ್ಬರಿಂದ ಅಚ್ಚರಿಯ ಉಡುಗೊರೆ ಸಿಗಲಿದೆ. ಮನೆಯಲ್ಲಿ ಸಂತೋಷ ಹೆಚ್ಚಾಗಬಹುದು. ಪ್ರಯಾಣದಲ್ಲಿ ಆರೋಗ್ಯ ಸಮಸ್ಯೆ ಕಾಣಿಸಿಕೊಳ್ಳುವುದು. ನಿಮ್ಮನ್ನು ಅಳೆಯುವ ಜನರ ಸಂಖ್ಯೆ ಅಧಿಕವಾದೀತು. ಆರ್ಥಿಕತೆಯ ದೃಷ್ಟಿಯಿಂದ ಕಳೆದ ಕೆಲವು ದಿನಗಳಿಗಿಂತ ಇಂದು ಉತ್ತಮವಾಗಿದೆ. ಕಾರ್ಯಕ್ಷೇತ್ರದಿಂದ ಹೆಚ್ಚುವರಿ ಆದಾಯ ಬರುವುದು. ನಿಮ್ಮ ಬದ್ಧತೆಯನ್ನು ಉಳಿಸಿಕೊಳ್ಳಿ. ಸ್ಥಗಿತಗೊಂಡ ಕೆಲಸವನ್ನು ಪೂರ್ಣಗೊಳಿಸುವುದರಿಂದ ಸಂಪತ್ತಿನ ಮೂಲವು ಹೆಚ್ಚಾಗುತ್ತವೆ.
ವೃಷಭ ರಾಶಿ:
ಬಿಮ್ಮ ಕುಟುಂಬದಿಂದ ನಿಮಗೆ ಬೆಂಬಲ ಸಿಗುತ್ತದೆ. ಸಂಪತ್ತಿನಲ್ಲಿ ಹೆಚ್ಚಳವಾಗಬಹುದು. ಉದ್ಯೋಗದಲ್ಲಿನ ಒತ್ತಡಗಳು ಮನೆಯವರ ಮೇಲೆ ಸಿಟ್ಟಾಗುವಂತೆ ಮಾಡಬಹುದು. ಸಂಗಾತಿಯಿಂದ ನಿಮ್ಮ ಅಭಿಮಾನಕ್ಕೆ ತೊಂದರೆ ಆಗಬಹುದು. ಇಂದು ನೀವು ಧನಾಗಮನಕ್ಕಾಗಿ ಸ್ವಲ್ಪ ಕಾಯಬೇಕಾಗಬಹುದು. ಹೊಸ ಸಂಬಂಧದ ಮೂಲಕ ಅದೃಷ್ಟ ಬರಬಹುದು. ಸಾಮಾಜಿಕ ಗೌರವವನ್ನು ಪಡೆಯುತ್ತೀರಿ. ನಿಮ್ಮ ಆಜ್ಞೆಯಂತೆ ಎಲ್ಲವೂ ನಡೆಯುವುದು ಕಷ್ಟವಾದೀತು.
ಮಿಥುನ ರಾಶಿ:
ತಪ್ಪುಗಳನ್ನು ತಿದ್ದಿಕೊಂಡು ಒಳ್ಳೆಯವರಾಗುವಿರಿ. ಇನ್ನೊಬ್ಬರ ಭಾವಕ್ಕೆ ಸ್ಪಂದಿಸುವ ಗುಣವಿರುವುದು. ಯಾವುದೇ ಕಾರಣವಿಲ್ಲದೆ ನಿಮ್ಮ ಮನಸ್ಸು ವಿಚಲಿತವಾಗಬಹುದು. ಉದ್ಯೋಗದಲ್ಲಿ ಬದಲಾವಣೆಯಾಗುವ ಸಾಧ್ಯತೆ ಇದೆ. ನಿಮ್ಮ ಲಾಭಕ್ಕೆ ಪೂರಕವಾದ ಅವಕಾಶಗಳು ಸಿಗುತ್ತವೆ. ಕೆಲಸದ ಒತ್ತಡವನ್ನು ಕಡಿಮೆ ಮಾಡಿಕೊಳ್ಳಿ. ಮಕ್ಕಳನ್ನು ಹಿಡೆತಕ್ಕೆ ತರಲು ಪ್ರಯತ್ನಿಸುವಿರಿ. ಪ್ರಮುಖ ನಿರ್ಧಾರವನ್ನು ಅವಸರದಲ್ಲಿ ತೆಗೆದುಕೊಳ್ಳುವುದು ಬೇಡ. ಅಧ್ಯಾತ್ಮದ ಬಗ್ಗೆ ಆಸಕ್ತಿ ಇರುತ್ತದೆ. ಸಹೋದರಿಯರು ಮತ್ತು ಸಂಗಾತಿಯ ಬೆಂಬಲ ಪಡೆಯುವಿರಿ.
ಕರ್ಕಾಟಕ ರಾಶಿ:
ಉದ್ಯೋಗದಲ್ಲಿ ಪ್ರಗತಿಗೆ ಅವಕಾಶಗಳೂ ಇರುತ್ತವೆ. ಹಣವು ಒಮ್ಮೆ ಕೈಗೆ ಬಂದರೆ, ಸಾಹಸ ಕಾರ್ಯಗಳಲ್ಲಿ ತೊಡಗುವಿರಿ. ಸ್ವಲ್ಪ ಕುಟುಂಬದ ಸಮಸ್ಯೆಗಳಿಂದಾಗಿ, ಮನಸ್ಸು ಚಂಚಲವಾಗಿರುತ್ತದೆ. ಹಣಕಾಸಿನ ವಿಚಾರದಲ್ಲಿ ಸ್ಪಷ್ಟತೆ ಇರಲಿ. ನಿಮ್ಮನ್ನು ನೀವೇ ಬೈದುಕೊಳ್ಳುವ ಸ್ಥಿತಿ ಬರಬಹುದು. ಅದನ್ನು ಕೂಡಲೇ ಪ್ರಕಟಿಸದೇ ನಿಯಂತ್ರಿಸಲು ಪ್ರಯತ್ನಿಸಿ. ವೈವಾಹಿಕ ಜೀವನದಲ್ಲಿ ವಿಶ್ವಾಸವು ಹೆಚ್ಚಾಗುವುದು. ದೈನಂದಿನ ವ್ಯಾಪಾರಿಗಳು ಹೆಚ್ಚು ಶ್ರಮಿಸಬೇಕು. ನಿಮ್ಮ ಮನೋವಿಕಾರದಿಂದ ಇತರರಿಗೂ ಕಷ್ಟವಾದೀತು.
ಸಿಂಹ ರಾಶಿ:
ಕೆಲವನ್ನು ಅನುಭವಿಗಳ ಜೊತೆ ಚರ್ಚಿಸಿ ತೀರ್ಮಾನಿಸುವುದು ಒಳ್ಳೆಯದು. ಸಮಯಕ್ಕಾಗಿ ನೀವು ಕಾಯುವುದು ಅನಿವಾರ್ಯವಾದೀತು. ನಿಮ್ಮ ಸಹಕಾರದ ಗುಣವು ಎಲ್ಲರಿಗೂ ಮೆಚ್ಚುಗೆಯಾದೀತು. ಸ್ವಯಂಕೃತ ಅಪರಾಧದಿಂದ ನಿಮಗೆ ಕಿಂಚಿತ್ತೂ ಬೇಸರವಾಗದು. ನಿಮ್ಮ ಸೋಮಾರಿತನವೇ ನಿಮ್ಮ ದೊಡ್ಡ ಶತ್ರುವಾಗಲಿದೆ. ಒಂಟಿತನದ ಆಲೋಚನೆಯು ಪೂರ್ಣವಾಗದು. ಆರ್ಥಿಕತೆಯು ನಿಮಗೆ ತೃಪ್ತಿ ಕೊಡುವುದು. ವ್ಯಕ್ತಿತ್ವದ ಬೆಳವಣಿಗೆಯ ಜೊತೆಗೆ ಸಾಮಾಜಿಕ ಚಿತ್ರಣವನ್ನು ಬದಲಿಸುವಿರಿ.
ಕನ್ಯಾ ರಾಶಿ:
ವಾಹನವನ್ನು ಖರೀದಿಸುವ ಯೋಜನೆಯನ್ನು ಮುಂದೂಡುವುದು ಉತ್ತಮ. ಚಿಂತನಶೀಲವಾಗಿ ಕೆಲಸ ಮಾಡಿ. ನಿಮ್ಮ ಮನಸ್ಸು ಸಂತೋಷವಾಗಿರುತ್ತದೆ. ಆದರೆ ತಾಳ್ಮೆಯನ್ನು ಕಾಪಾಡಿಕೊಳ್ಳಿ. ಲಾಭವೂ ಹೆಚ್ಚಾಗುವುದು. ನಿಮ್ಮ ಕಾರಣದಿಂದ ಕುಟುಂಬವು ಸಂಕಷ್ಟದಲ್ಲಿ ಸಿಕ್ಕಿಕೊಳ್ಳಬಹುದು. ಎಲ್ಲ ಕೆಲಸಗಳನ್ನು ಮಾಡಿದರೂ ಯಶಸ್ಸಿನಲ್ಲಿ ವಿಳಂಬವಾಗಬಹುದು. ಮನಸ್ಸಿನ ನಕಾರಾತ್ಮಕ ಭಾವನೆಗಳು ನಿಮ್ಮನ್ನು ದೈಹಿಕವಾಗಿ ಮತ್ತು ಮಾನಸಿಕವಾಗಿ ವಿಚಲಿತರನ್ನಾಗಿ ಮಾಡುತ್ತವೆ.
ತುಲಾ ರಾಶಿ:
ತಂದೆಯ ಆರೋಗ್ಯದ ಬಗ್ಗೆ ಕಾಳಜಿ ವಹಿಸಿ. ನಿಮ್ಮ ಖರ್ಚುಗಳನ್ನು ನಿಯಂತ್ರಿಸಿ. ಏಕೆಂದರೆ ಬಹಳಷ್ಟು ಖರ್ಚುಗಳು ಇರುತ್ತವೆ. ನಿಮ್ಮ ವೃತ್ತಿ ಕ್ಷೇತ್ರದಲ್ಲಿ ಇಂದು ಅನಿರೀಕ್ಷಿತ ಪ್ರಶಂಸೆ ಹಾಗು ಗೌರವಗಳು ಸಿಗಲಿವೆ. ಆಲಸ್ಯದಿಂದ ಹೊರಬರುವ ಮನಸ್ಸಾಹುವುದು. ಸ್ಥಿರಾಸ್ತಿಯ ನಷ್ಟದಿಂದ ಬೇಸರವಾಗುವುದು. ಸ್ನೇಹಿತರ ಜೊತೆ ಸಣ್ಣ ಕಾರಣಕ್ಕೆ ಕಲಹವಾಗುವುದು. ತಂದೆಯ ಆರೋಗ್ಯದಲ್ಲಿ ವ್ಯತ್ಯಾಸ ಕಾಣಿಸುವುದು. ಇಂದು ನಿಮಗೆ ಸಾಮಾಜಿಕವಾಗಿ ಗೌರವವನ್ನು ಪಡೆಯುವಿರಿ.
ವೃಶ್ಚಿಕ ರಾಶಿ:
ಸಮಾಜದಲ್ಲಿ ಗೌರವ ಸಿಗುತ್ತದೆ, ಇದರಿಂದಾಗಿ ನಿಮ್ಮ ಮನಸ್ಸು ಸಂತೋಷವಾಗಿರುತ್ತದೆ. ಅಧ್ಯಯನದಲ್ಲಿ ಆಸಕ್ತಿ ಇರುತ್ತದೆ. ಕುಟುಂಬದಲ್ಲಿ ಧಾರ್ಮಿಕ ಕಾರ್ಯಗಳು ನಡೆಯಬಹುದು. ದುಃಸ್ವಪ್ನಗಳಿಂದ ನಿಮ್ಮ ಮನಸ್ಸು ವಿಕಾರವಾಗುವುದು. ಉನ್ನತ ವಿದ್ಯಾಭ್ಯಾಸದ ಚಿಂತೆ ಕಾಡಬಹುದು. ಶತ್ರುಗಳು ನಿಮ್ಮ ನೆಮ್ಮದಿಯನ್ನು ಹಾಳುಮಾಡಬಹುದು. ನಿಮ್ಮ ದಿನಚರಿ ನಿಧಾನವಾಗಿರುತ್ತದೆ. ಪ್ರತಿಯೊಂದು ಕ್ರಿಯೆಯನ್ನು ನಿಧಾನಗತಿಯಲ್ಲಿ ಸಾಗುವುದು. ಈ ಕಾರಣದಿಂದಾಗಿ ಜನರಿಂದ ಟೀಕೆ ಬರುವುದು. ಇಂದು, ನೀವು ವಾಸ್ತವಕ್ಕಿಂತ ಕಾಲ್ಪನಿಕತೆಯಲ್ಲಿ ಹೆಚ್ಚು ಇರುತ್ತೀರಿ. ಈ ಕಾರಣದಿಂದಾಗಿ ಜನರು ನಿಮ್ಮನ್ನು ಕಂಡು ನಗುವರು.
ಧನು ರಾಶಿ:
ಮಕ್ಕಳ ವಿದ್ಯಾಭ್ಯಾಸಕ್ಕಾಗಿ ಅಧಿಕ ಖರ್ಚನ್ನು ನೀವು ಮಾಡಬೇಕಾಗಯವುದು. ಅನಾರೋಗ್ಯದಿಂದ ಇದ್ದರೂ ನಿಮ್ಮ ಕರ್ತವ್ಯವನ್ನು ಮಾಡುವಿರಿ. ಉದ್ಯೋಗದಲ್ಲಿ ಒತ್ತಡಗಳು ಇರುವುದುರಿಂದ ಕುಟುಂಬಕ್ಕೆ ಸಮಯವನ್ನು ಕೊಡಲಾಗದು. ವೈವಾಹಿಕ ಜೀವನದ ಚಿಂತೆ ಅತಿಯಾಗಿ ಕಾಡಬಹುದು. ವಿದ್ಯಾಭ್ಯಾಸದ ಹಿನ್ನಡೆಯು ನಿಮಗೆ ಅವಮಾನ ಎನಿಸುವುದು. ಈ ದಿನ ನೀವು ಸಂತೋಷವಾಗಿರುವಿರಿ. ಆದರೆ ಅಸಭ್ಯ ವರ್ತನೆಯು ಕೆಲವರಿಂದ ಮಾತುಗಳು ಕೇಳಿಬರಬಹುದು. ಕೆಲಸದ ಬಿಡುವಿಲ್ಲದಿದ್ದರೂ ಇನ್ನಿತರ ಚಟುವಟಿಕೆಯಲ್ಲಿ ಭಾಗ ವಹಿಸುವಿರಿ.
ಮಕರ ರಾಶಿ:
ಆರ್ಥಿಕವಾಗಿ ಯಾವುದೇ ಭಯವಿಲ್ಲ. ಹಣಕಾಸು ಸ್ಥಿತಿ ಉತ್ತಮವಾಗಿರಲಿದೆ. ಸಂಬಂಧಗಳಲ್ಲಿ ಸಂಯಮದಿಂದಿರಿ. ಅನಗತ್ಯ ಕೋಪವನ್ನು ನಿಯಂತ್ರಿಸಿ. ವಿದ್ಯಾಭ್ಯಾಸದ ಗಮನವು ಬೇರೆ ಕಡೆಗೆ ಹೋಗಬಹುದು. ರಾಜಕಾರಣಿಗಳಿಂದ ನಿಮ್ಮ ಕೆಲಸವು ಪೂರ್ಣವಾಗಲಿದೆ. ದುಃಸ್ವಪ್ನಗಳು ಬೀಳಬಹುದು. ಈ ದಿನ ನೀವು ಶಾರೀರಿಕ ಕಾಳಜಿಯನ್ನು ಹೆಚ್ಚು ಮಾಡಬೇಕಾದೀತು. ಇಂದು ವ್ಯವಹಾರದಲ್ಲಿ, ಮಾತುಗಳು ಹೆಚ್ಚು ತೀವ್ರವಾಗಿರಲಿದ್ದು, ಅದರ ಸರಿಯಾದ ಪ್ರಯೋಜನು ವಿಳಂಬದಿಂದ ಬರುವುದು. ಕುಟುಂಬ ವಾತಾವರಣವು ಇಂದು ಹೆಚ್ಚು ಭಾವನಾತ್ಮಕವಾಗಿ ಇರುತ್ತದೆ.
ಕುಂಭ ರಾಶಿ:
ಇಂದು ನೀವು ಕಚೇರಿಯಲ್ಲಿ ಎಲ್ಲರ ಗಮನ ಸೆಳೆಯುವಿರಿ. ಹಳೆಯ ಸ್ನೇಹಿತನ ಭೇಟಿಯ ಸಾಧ್ಯತೆ. ಕಾರ್ಯ ಕ್ಷೇತ್ರದಲ್ಲಿ ಒತ್ತಡವಿರುವ ಕಾರಣ ಮನಸ್ಸಿಗೆ ಸಿಗಬೇಕಾದ ಶಾಂತಿಯ ಕೊರೆತೆಯೂ ಇರಲಿದೆ. ದಾಂಪತ್ಯದಲ್ಲಿ ನಿರಾಸಕ್ತಿ ಉಂಟಾಗಬಹುದು. ಪಾಲುದಾರಿಕೆಯಲ್ಲಿ ಸಮಸ್ಯೆ ಕಾಣಿಸುವುದು. ಉದ್ಯಮದಲ್ಲಿ ಪ್ರಗತಿಯನ್ನು ಕಂಡು ಖುಷಿಯಾಗುವುದು. ಇಂದು ಮನೆಯ ಸದಸ್ಯರ ಮನವೊಲಿಸುವುದು ಕಷ್ಟವಾಗದು. ನಿರಾಶೆಯನ್ನು ಉಂಟುಮಾಡವ ಆಲೋಚನೆಗಳನ್ನು ತಪ್ಪಿಸಿ.
ಮೀನ ರಾಶಿ:
ಜೀವನದ ಕುರಿತು ಪೂರ್ಣ ಆತ್ಮವಿಶ್ವಾಸದಿಂದ ಇರುತ್ತಾರೆ. ನಿಮ್ಮ ಮನಸ್ಸು ಸಂತೋಷವಾಗಿರುತ್ತದೆ. ಸಂಭಾಷಣೆಯಲ್ಲಿ ಸಂಯಮದಿಂದಿರಿ. ನಿಮ್ಮ ತಂದೆಯ ಆರೋಗ್ಯದ ಬಗ್ಗೆ ಕಾಳಜಿ ವಹಿಸಿ. ಖರ್ಚುಗಳು ಹೆಚ್ಚಾಗಲಿವೆ. ವಾಹನದ ತೊಂದರೆಯಿಂದ ತಪ್ಪಿಸಿಕೊಳ್ಳುವ ಸಾಧ್ಯತೆ. ಸ್ವಂತ ವ್ಯಾಪಾರದಲ್ಲಿ ಹಿನ್ನಡೆಯಾಗುವುದು. ಹಳೆಯ ಸಾಲವನ್ನು ಮರುಪಡೆಯಲು ಸಾಧ್ಯವಾಗದು. ಇಂದು ತಂದೆ ಹೇಳಿದ ಕಾರ್ಯಗಳನ್ನು ಪೂರ್ಣಗೊಳಿಸಲು ಪ್ರಯತ್ನಿಸುವಿರಿ. ಕೆಲವು ವಿಷಯಗಳ ಬಗ್ಗೆ ಮನೆಯ ಹಿರಿಯರಿಂದ ವ್ಯತ್ಯಾಸಗಳು ಆಗಬಹುದು.
ಇಂದಿನ ಪಂಚಾಂಗ:
ಶಾಲಿವಾಹನ ಶಕೆ ೧೯೪೮ರ ವಿಶ್ವಾವಸು ಸಂವತ್ಸರದ ಉತ್ತರಾಯಣ, ಋತು : ಶಿಶಿರ, ಚಾಂದ್ರಮಾಸ : ಫಾಲ್ಗುಣ, ಸೌರ ಮಾಸ : ಕುಂಭ, ಮಹಾನಕ್ಷತ್ರ : ಶತಭಿಷಾ, ವಾರ : ಶನಿ, ಪಕ್ಷ : ಶುಕ್ಲ, ತಿಥಿ : ದ್ವಾದಶೀ, ನಿತ್ಯನಕ್ಷತ್ರ : ಪುನರ್ವಸು, ಯೋಗ : ಸೌಭಾಗ್ಯ, ಕರಣ : ಬವ, ಸೂರ್ಯೋದಯ – 06 – 42 am, ಸೂರ್ಯಾಸ್ತ – 06 – 31 pm, ಇಂದಿನ ಶುಭಾಶುಭ ಕಾಲ : ರಾಹು 09:40 – 11:08, ಯಮಗಂಡ ಕಾಲ 14:06 – 15:34, ಗುಳಿಕ ಕಾಲ 06:43 – 08:11
-ಲೋಹಿತ ಹೆಬ್ಬಾರ್ – 8762924271 (what’s app only)