ನವದೆಹಲಿ, ಫೆಬ್ರವರಿ 18: ಇದೀಗ ವೈರಲ್ (Viral Video) ಆಗಿರುವ ಹೊಸ ಸಿಸಿಟಿವಿಯಲ್ಲಿ ದೆಹಲಿಯ ದ್ವಾರಕಾದಲ್ಲಿ 23 ವರ್ಷದ ಸಾಹಿಲ್ ಧನೇಶ್ರಾ ಸಾವನ್ನಪ್ಪಿದ ರಸ್ತೆ ಅಪಘಾತಕ್ಕೆ ಕಾರಣವಾದ ಕ್ಷಣಗಳನ್ನು ತೋರಿಸುವ ಹೊಸ ಸಿಸಿಟಿವಿ ದೃಶ್ಯಗಳು ಕಾಣಿಸಿಕೊಂಡಿವೆ. ಕಾರು ಡಿಕ್ಕಿ ಹೊಡೆಯುವುದಕ್ಕೂ ಸ್ವಲ್ಪ ಸಮಯದ ಮೊದಲು ಅಪ್ರಾಪ್ತ ವಯಸ್ಕ ಚಲಾಯಿಸುತ್ತಿದ್ದ ಸ್ಕಾರ್ಪಿಯೋ ಎಸ್‌ಯುವಿ ಅತಿವೇಗದಲ್ಲಿ ಚಲಿಸುತ್ತಿತ್ತು ಎಂಬುದನ್ನು ಈ ವಿಡಿಯೋದಲ್ಲಿ ನೋಡಬಹುದು.
ಫೆಬ್ರವರಿ 3ರಂದು ದ್ವಾರಕಾದ ಲಾಲ್ ಬಹದ್ದೂರ್ ಶಾಸ್ತ್ರಿ ಕಾಲೇಜಿನ ಬಳಿ ದಾಖಲಾಗಿರುವ ವಿಡಿಯೋ ಅಪಘಾತ ಸಂಭವಿಸುವ ಕೆಲವು ಕ್ಷಣಗಳ ಮೊದಲು ಎಸ್‌ಯುವಿ ಅತಿವೇಗದಲ್ಲಿ ಚಲಿಸುತ್ತಿರುವುದನ್ನು ತೋರಿಸುತ್ತದೆ. ಬಸ್ ಸಮೀಪಿಸುತ್ತಿದ್ದಂತೆ ಎಸ್‌ಯುವಿ ರಸ್ತೆಗೆ ಅಡ್ಡಲಾಗಿ ಚಲಿಸುತ್ತಿರುವುದು ಕಂಡುಬಂದಿತು. ನಂತರ ಅದು ಸಾಹಿಲ್ ಎಂಬಾತನ ಬೈಕ್ಗೆ ಡಿಕ್ಕಿ ಹೊಡೆದು, ಭೀಕರ ಡಿಕ್ಕಿ ಹೊಡೆದ ಪರಿಣಾಮದಿಂದ ಆತ ಸ್ಥಳದಲ್ಲೇ ಸಾವನ್ನಪ್ಪಿದ್ದ.
The line between a miracle and a tragedy is heart-breakingly thin. 💔
CCTV footage shows how a bike and a bus narrowly escaped a collision, but Sahil wasn’t as lucky.
A devastating reminder of how quickly life can change on the road.
Rest in peace, Sahil. pic.twitter.com/5kwdBgBNfH
— Divya Gandotra Tandon (@divya_gandotra) February 18, 2026
ಇದನ್ನೂ ಓದಿ: ಬೆಳಗಾವಿಯಲ್ಲಿ ಭೀಕರ ರಸ್ತೆ ಅಪಘಾತ: ಇಡೀ ಕುಟುಂಬವೇ ದುರಂತ ಅಂತ್ಯ
ಡ್ರೈವಿಂಗ್ ಲೈಸೆನ್ಸ್ ಇಲ್ಲದ ಅಪ್ರಾಪ್ತ ವಯಸ್ಕ ಆರೋಪಿ ಚಾಲಕನನ್ನು ಸ್ಥಳದಲ್ಲೇ ಬಂಧಿಸಿ ಬಾಲ ನ್ಯಾಯ ಮಂಡಳಿಯ (ಜೆಜೆಬಿ) ಮುಂದೆ ಹಾಜರುಪಡಿಸಲಾಯಿತು. ಎಸ್‌ಯುವಿ ಚಲಾಯಿಸುತ್ತಿದ್ದ ಅಕ್ಷತ್ರ ಸಿಂಗ್ 17 ವರ್ಷ ವಯಸ್ಸಿನವನಾಗಿದ್ದು, ಆತನಿಗೆ ಡ್ರೈವಿಂಗ್ ಲೈಸೆನ್ಸ್ ಇರಲಿಲ್ಲ. ಆತನನ್ನು ವೀಕ್ಷಣಾ ಗೃಹಕ್ಕೆ ಕಳುಹಿಸಲಾಯಿತು. ಫೆಬ್ರವರಿ 10ರಂದು ಜೆಜೆಬಿ ಆತನ 10ನೇ ತರಗತಿಯ ಬೋರ್ಡ್ ಪರೀಕ್ಷೆಗಳನ್ನು ಪರಿಗಣಿಸಿ ಮಧ್ಯಂತರ ಜಾಮೀನು ನೀಡಿತು.
ಇನ್ನಷ್ಟು ರಾಷ್ಟ್ರೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ